ಕಿರುಕುಳ ಓಲ್ಡ್ ಫ್ಯಾಷನ್, ಸೊಸೆಯನ್ನು ಗಟ್ಟಿ ತಬ್ಬಿಕೊಂಡ ಸೋಂಕಿತ ಅತ್ತೆ..!

Suvarna News   | Asianet News
Published : Jun 03, 2021, 02:26 PM ISTUpdated : Jun 03, 2021, 02:40 PM IST
ಕಿರುಕುಳ ಓಲ್ಡ್ ಫ್ಯಾಷನ್, ಸೊಸೆಯನ್ನು ಗಟ್ಟಿ ತಬ್ಬಿಕೊಂಡ ಸೋಂಕಿತ ಅತ್ತೆ..!

ಸಾರಾಂಶ

ಅತ್ತೆ ಸೊಸೆ ಜಗಳ ಅನಾದಿ ಕಾಲದಿಂದಲೂ ಇರುವ ವಿಚಾರ. ಅತ್ತೆ ಕಿರುಕುಳ, ಸೊಸೆಗೆ ಹಲ್ಲೆ ಇಂತಹ ಸುದ್ದಿ ಸಾಮಾನ್ಯ ಎಂಬಷ್ಟು ಘಟನೆ ನಡೆಯುತ್ತಿರುತ್ತವೆ. ಆದರೆಈ ಅತ್ತೆ ಸ್ವಲ್ಪ ಹೆಚ್ಚೇ ಮುಂದುವರಿದಿದ್ದಾರೆ. ಸಿಟ್ಟಾದ ಅತ್ತೆ ಸೊಸೆಯನ್ನು ಗಟ್ಟಿ ತಬ್ಬಿಕೊಂಡಳು. ಈ ಅಪ್ಪುಗೆಯಲ್ಲೇ ಇತ್ತು ಫಜೀತಿ

ಹೈದರಾಬಾದ್(ಜೂ.03): ಅತ್ತೆ-ಸೊಸೆಯರ ಜಗಳ ನಡೆಯೋದು ಹೊಸದೇನೂ ಅಲ್ಲ. ಹಿಂದೆಯೂ ನಡೆದಿತ್ತು, ಈಗಲೂ ನಡೆಯುತ್ತಿದೆ, ಇದು ಮುಂದುವರಿಯೋದರಲ್ಲೂ ಡೌಟೇ ಇಲ್ಲ. ಆದರೆ ಇಲ್ಲೊಬ್ಬ ಸಿಟ್ಟಾದ ಅತ್ತೆ ಮಾಡಿದ ಮೂರ್ಖತನದಿಂದ ಸೊಸೆಯೂ ಈಗ ಕೊರೋನಾ ಸೋಂಕಿತಳಾಗಿದ್ದಾಳೆ.

ಸೋಂಕಿತ ಅತ್ತೆಯಿಂದ ದೂರ ಉಳಿಯುತ್ತಿರುವುದಕ್ಕೆ ಸಿಟ್ಟಾದ ಅತ್ತೆ ಬಲವಂತವಾಗಿ ಸೊಸೆಯನ್ನು ಗಟ್ಟಿ ತಬ್ಬಿಕೊಂಡ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. 20 ಆಸುಪಾಸಿನಲ್ಲಿರೋ ಸೊಸೆಗೆ ಕೊರೋನಾ ಪಾಸಿಟಿವ್ ದೃಢಪಟ್ಟಾಗ ಆಕೆಯನ್ನು ಮನೆಯಿಂದ ಹೊರ ಹಾಕಲಾಗಿದೆ. ಈ ಘಟನೆ ಸೋಮಾರಿಪೇಟ ಗ್ರಾಮದಲ್ಲಿ ನಡೆದಿದೆ.

ವ್ಯಾಕ್ಸೀನ್ ಕಾಂಟ್ರಾಕ್ಟ್ ಯಾರಿಗೆ ಸಿಕ್ತು ಎಂದು ಕೇಳಿದ್ದಕ್ಕೆ ನಿಮ್ಮಪ್ಪನಿಗೆ ಎಂದ ಮೇಯರ್...

ಮೇ 29ರಂದು ಯುವತಿಯನ್ನು ರಾಜಣ್ಣ ಸಿರ್ಸಿಲ ಜಿಲ್ಲೆಯಲ್ಲಿರುವ ತವರು ಮನೆಗೆ ಕರೆತರಲಾಗಿದೆ. ಬೇಸತ್ತ ಸೊಸೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಮೇ 31ರಂದು ಈಕೆಯ ಮನೆಗೆ ಬಂದ ಆರೋಗ್ಯಾಧಿಕಾರಿಗಳಲ್ಲಿಯೂ ಯುವತಿ ಇದನ್ನೇ ಹೇಳಿದ್ದಾರೆ.

ಅತ್ತೆಗೆ ಪಾಸಿಟಿವ್ ಬಂದ ಮೇಲೆ ನಾನು ಅಂತರ ಕಾಯ್ದುಕೊಳ್ಳುತ್ತಿದ್ದಕ್ಕೆ ಆಕೆ ಸಿಟ್ಟಾಗಿದ್ದಾಳೆ ಎಂದಿದ್ದಾರೆ ಸೊಸೆ. ಯುವತಿ ತನ್ನ ಪುಟ್ಟ ಮಕ್ಕಳನ್ನೂ ಸೋಂಕಿತ ಅಜ್ಜಿ ಬಳಿ ಬಿಡುತ್ತಿರಲಿಲ್ಲ, ಹಾಗೆಯೇ ಸೋಂಕಿತೆಗೆ ಆಹಾರವನ್ನೂ ನಿಗದಿತ ಸ್ಥಳದಲ್ಲಿಡಲಾಗುತ್ತಿತ್ತು.

ಭದ್ರತಾ ಸಿಬ್ಬಂದಿಯನ್ನು ಬಿಟ್ಟು ಹೋದ BJP ಕೌನ್ಸಿಲರ್‌ ಉಗ್ರರ ಗುಂಡಿನಿಂದ ಸಾವು

ನಾನು ಸಾಯೋವಾಗ ನೀವೆಲ್ಲರೂ ಸುಖವಾಗಿ ಬಾಳಬೇಕಾ ಎಂದು ಪ್ರಶ್ನಿಸಿ ಸೊಸೆಯನ್ನು ಗಟ್ಟಿ ತಬ್ಬಿದ್ದಾಳೆ ಅತ್ತೆ. ಸೋಂಕು ಹರಡುವ ಉದ್ದೇಶದಿಂದಲೇ ಈ ರೀತಿ ಅತ್ತೆ ಮಾಡಿರುವುದು ಸಾಬೀತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?