ವ್ಯಾಕ್ಸೀನ್ ಕಾಂಟ್ರಾಕ್ಟ್ ಯಾರಿಗೆ ಸಿಕ್ತು ಎಂದು ಕೇಳಿದ್ದಕ್ಕೆ ನಿಮ್ಮಪ್ಪನಿಗೆ ಎಂದ ಮೇಯರ್

By Suvarna NewsFirst Published Jun 3, 2021, 1:42 PM IST
Highlights
  • ವ್ಯಾಕ್ಸೀನ್ ಕಾಂಟ್ರಾಕ್ಟ್ ಯಾರಿಗೆ ಕೊಟ್ರಿ ಎಂದು ಕೇಳಿದ ನೆಟ್ಟಿಗ
  • ಸಿಟ್ಟಿನಲ್ಲಿ ಮೇಯರ್ ಬಳಸಿದ್ರು ಆಕ್ಷೇಪಾರ್ಹ ಪದ

ಮುಂಬೈ(ಜೂ.03): ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ತಮ್ಮ ಸ್ಥಾನ, ಘನತೆ ಮರೆತು ಆಕ್ಷೇಪಾರ್ಹವಾಗಿ ಮಾತನಾಡುವುದು ಇದೇ ಮೊದಲಲ್ಲ. ಇಂತಹ ಘಟನೆ ನಡೆಯುತ್ತಲೇ ಇರುತ್ತವೆ. ಹಾಗಾದಾಗ ಜನ ಹಿಗ್ಗಾಮುಗ್ಗ ಕಾಲೆಳೆಯೋದು ನಡೆಯುತ್ತದೆ. ಮೇಯರ್ ಮಾಡಿದ ಎಡವಟ್ಟಿಗೆ ನೆಟ್ಟಿಗರು ಸಿಟ್ಟಾಗಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ನಗರದ ನಾಗರಿಕ ಸಂಸ್ಥೆಯ ಜಾಗತಿಕ ಕೋವಿಡ್ -19 ಲಸಿಕೆ ಪೂರೈಕೆ ಒಪ್ಪಂದದ ಸ್ಥಿತಿಯ ಬಗ್ಗೆ ಪ್ರಶ್ನೆಯನ್ನು ಮುಂದಿಟ್ಟ ಟ್ವಿಟ್ಟರ್ ಬಳಕೆದಾರರ ವಿರುದ್ಧ ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಆಕ್ಷೇಪಾರ್ಹ ಭಾಷೆಯನ್ನು ಬಳಸುವ ಮೂಲಕ ವಿವಾದಕ್ಕೆಡೆಯಾಗಿದ್ದಾರೆ.

ಮತ್ತೊಂದು ಸ್ವದೇಶೀ ಲಸಿಕೆ: 30 ಕೋಟಿ ಡೋಸ್‌ ಆರ್ಡರ್ ಮಾಡಿದ ಕೇಂದ್ರ!

ಟ್ವಿಟ್ಟರ್ ಬಳಕೆದಾರ ಕಾಂಟ್ರಾಕ್ಟ್ 'ಕೊನಾಲಾ ದಿಲಾ'(ಕಾಂಟ್ರಾಕ್ಟ್ ಯಾರಿಗೆ ಸಿಕ್ತು) ಎಂದು ಕೇಳಿದಾಗ 'ತುಜ್ಯಾ ಬಪಾಲಾ' (ನಿಮ್ಮ ತಂದೆಗೆ) ಎಂದು ಪೆಡ್ನೆಕರ್ ಅವರಿಗೆ ಉತ್ತರಿಸಿದ್ದಾರೆ. ಕೋವಿಡ್ -19 ಲಸಿಕೆ ಪೂರೈಕೆ ಕುರಿತು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ (ಬಿಎಂಸಿ) ಜಾಗತಿಕ ಟೆಂಡರ್‌ಗೆ ಸಂಬಂಧಿಸಿದಂತೆ ಮರಾಠಿ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸುವಾಗ ಈ ಬೆಳವಣಿಗೆ ನಡೆದಿದೆ.

ಶಿವಸೇನೆ ಮುಖಂಡ ಪೆಡ್ನೇಕರ್ ನಂತರ ಆಕ್ಷೇಪಾರ್ಹ ಟ್ವೀಟ್ ಅನ್ನು ಅಳಿಸಿದರೂ ಆ ಹೊತ್ತಿಗೆ ಅದು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿತ್ತು. ಮುಂಬೈನ ಮೊದಲ ಪ್ರಜೆಯಾಗಿರುವುದರಿಂದ ನಾಗರಿಕರು ಸಾರ್ವಜನಿಕ ವಲಯದಲ್ಲಿ ಸುಸಂಸ್ಕೃತ ಭಾಷೆಯನ್ನು ಮೇಯರ್‌ನಿಂದ ನಿರೀಕ್ಷಿಸುತ್ತಾರೆ ಎಂದು ಬಿಜೆಪಿ ಕಾರ್ಪೊರೇಟರ್ ಭಲ್ಚಂದ್ರ ಶಿರ್ಸಾತ್ ಹೇಳಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಪಡ್ನೇಕರ್ ತನ್ನ ಜೀವದ ಬಗ್ಗೆ ಚಿಂತಿಸದೆ ಆಸ್ಪತ್ರೆಗಳು ಮತ್ತು ಆರೈಕೆ ಕೇಂದ್ರಗಳಿಗೆ ಭೇಟಿ ನೀಡಿ ನಾಗರಿಕರಿಂದ ಪ್ರಶಂಸೆ ಪಡೆದಿದ್ದಾರೆ. ಕಳೆದ ವರ್ಷ, ಅವರು ಆರೋಗ್ಯ ಕಾರ್ಯಕರ್ತರು ಮತ್ತು ಇತರ ಕೋವಿಡ್ -19 ಚಿಂತಕರ ಮನೋಸ್ಥೈರ್ಯವನ್ನು ಹೆಚ್ಚಿಸಲು ದಾದಿಯರ ಸಮವಸ್ತ್ರವನ್ನು ಧರಿಸಿದ್ದರು.

click me!