ಸರ್ಕಾರದ ಮೂಲಕ ಕೊರೋನಾ ಲಸಿಕೆ ವಿತರಣೆ, ಖಾಸಗಿ ಆಸ್ಪತ್ರೆಗಿಲ್ಲ ಔಷಧಿ!

By Suvarna NewsFirst Published Jul 27, 2020, 5:36 PM IST
Highlights

ಕೊರೋನಾ ವೈರಸ್ ಕುರಿತು ಹಲವು ಲಸಿಕೆಗಳು ಅಂತಿಮ ಹಂತದ ಪ್ರಯೋಗದಲ್ಲಿದೆ. ಇದೀಗ ಕೊರೋನಾ ಲಸಿಕೆ ಲಭ್ಯತೆ ಕುರಿತು ಹಲವು ಅನುಮಾನಗಳು ಕಾಡತೊಡಗಿದೆ. ಖಾಸಗಿ ಆಸ್ಪತ್ರೆಗಳು ಲಸಿಕೆ ಖರೀದಿಸಿ, ಸೋಂಕಿತರಿಂದ ದುಪ್ಪಟ್ಟು ಹಣ ವಸೂಲಿ ಮಾಡುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಇದೀಗ ಈ ಅನುಮಾನಗಳಿಗೆ ಭಾರತದ ಸೆರಮ್ ಫಾರ್ಮಾ ಸಂಸ್ಥೆ ತೆರೆ ಎಳೆದಿದೆ.

ನವದೆಹಲಿ(ಜು.27): ಕೊರೋನಾ ವೈರಸ್ ನಿಯಂತ್ರಣಕ್ಕೆ ಲಸಿಕೆ ಸಂಶೋಧನೆ ಭರದಿಂದ ಸಾಗುತ್ತಿದೆ. ಹಲವು ಲಸಿಕೆಗಳು ಪ್ರಯೋಗದ ಹಂತದಲ್ಲಿದೆ. ಇತ್ತ ಖಾಸಗಿ ಆಸ್ಪತ್ರೆಗಳು ಕೊರೋನಾ ಔಷಧ ಖರೀದಿಗೆ ದುಂಬಾಲು ಬಿದ್ದಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕೊರೋನಾ ಲಸಿಕೆ ಸೋಂಕಿತರ ಚಿಕಿತ್ಸೆಗೆ ದುಬಾರಿ ಹಣ ವಸೂಲಿ ಮಾಡುತ್ತಿರುವ ಖಾಗಿ ಆಸ್ಪತ್ರೆ ಪಾಲಾದಾರೆ ಸಾಮಾನ್ಯರ ಗತಿ ಏನು ಅನ್ನೋ ಪ್ರಶ್ನೆ ಎದುರಾಗಿದೆ. ಇದರ ನಡುವೆ ಭಾರತದ ಸೆರಮ್ ಫಾರ್ಮಾ ಸಂಸ್ಥೆ ಈ ಆತಂಕಕ್ಕೆ ತೆರೆ ಎಳೆದಿದೆ. 

ಭಾರತದ ಕೊರೋನಾ ಲಸಿಕೆ ಕೊವ್ಯಾಕ್ಸಿನ್ ಮೊದಲ ಪ್ರಯೋಗ ಯಶಸ್ವಿ!..

ಕೊರೋನಾ ಲಸಿಕೆ ಯಶಸ್ವಿಯಾದ ಬಳಿಕ ಔಷಧಿಯನ್ನು ಸರ್ಕಾರಕ್ಕೆ ವಿತರಿಸಲಾಗುವುದು. ಈ ಮೂಲಕ ಎಲ್ಲಾ ಸೋಂಕಿತರಿಗೆ ಕೊರೋನಾ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು. ಆದರೆ ಖಾಸಗಿ ಸಂಸ್ಥೆಗಳಿಗೆ ಕೊರೋನಾ ಲಸಿಕೆ ನೀಡುವ ಯಾವುದೇ ಯೋಜನೆ ಇಲ್ಲ ಎಂದು ಸೆರಮ್ ಫಾರ್ಮಾ ಹೇಳಿದೆ.

ಹುಬ್ಬಳ್ಳಿ: 13 ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ, ಗುಣಮುಖ

ಪಾರ್ಸಿ ಜನಾಂಗಕ್ಕೆ ಸೇರಿರುವ ಸೆರಮ್ ಫಾರ್ಮಾ ಸಿಇಓ ಆದಾರ್ ಪೂನಾವಲ್ಲ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಪಾರ್ಸಿ ಜನಾಂಗಕ್ಕೆ ಕೊರೋನಾ ಲಸಿಕೆ ನೀಡುತ್ತೇವೆ. ಜೊತೆಗೆ ಸರ್ಕಾರಕ್ಕೆ ಲಸಿಕೆ ವಿತರಣೆ ಮಾಡಲಿದ್ದೇವೆ ಎಂದು  ಆದಾರ್ ಹೇಳಿದ್ದಾರೆ.

ಕೊರೋನಾ ಲಸಿಕೆಯ ಸಂಪೂರ್ಣ ಹಕ್ಕು ಸರ್ಕಾರದ ಕೈಯಲ್ಲಿರಲಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈ ಔಷಧ ಲಭ್ಯವಿರುವುದಿಲ್ಲ. ಸರ್ಕಾರ ಮಾರುಕಟ್ಟೆಗೆ ಬಿಡುಗಡೆ ಮಾಡುವವರೆಗೆ ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಾಗಲಿದೆ ಎಂದಿದ್ದಾರೆ

ಆಗಸ್ಟ್ ತಿಂಗಳಿಂದ ಭಾರತದಲ್ಲಿ 3ನೇ ಹಂತದ ಪ್ರಯೋಗ ನಡೆಯಲಿದೆ. ಅಸ್ಟ್ರಾಝೆಂಕಾ ಜೊತೆಗೂಡಿ ಈ ಪ್ರಯೋಗ ನಡೆಯಲಿದೆ. ಶೀಘ್ರದಲ್ಲೇ ಪ್ರಯೋಗ ಮುಗಿಸಿ ಕೊರೋನಾ ನಿಯಂತ್ರಣಕ್ಕ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಆದಾರ್ ಹೇಳಿದ್ದಾರೆ.

click me!