ಕೊರೋನಾ ಕಠೋರ; ಸಹೋದ್ಯೋಗಿಗಳು ಹಣ ಸಂಗ್ರಹಿಸಿ ನೀಡಿದರೂ ದೆಹಲಿ ಡಾಕ್ಟರ್ ಬದುಕಲಿಲ್ಲ

By Suvarna NewsFirst Published Jul 27, 2020, 5:24 PM IST
Highlights

ಕೊರೋನಾ ಸೋಂಕಿಗೆ ತುತ್ತಾಗಿದ್ದ ವಾರಿಯರ್ ಬಲಿ/ ಕೊರೋನಾ ಹೋರಾಟದಲ್ಲಿ ಸೋತ ದೆಹಲಿಯ ವೈದ್ಯ/ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಘೋಷಿಸಿದ ಸರ್ಕಾರ/ ಸಹೋದ್ಯೋಗಿ ಉಳಿಸಿಕೊಳ್ಳಲು ಹಣ ಸಂಗ್ರಹಿಸಿ ನೀಡಿದ್ದ ವೈದ್ಯರು

ನವದೆಹಲಿ (ಜು.27)  ಮತ್ತೊಬ್ಬ ಕೊರೋನಾ ವಾರಿಯರ್ ಕೊರೋನಾಕ್ಕೆ ಶರಣಾಗಿದ್ದಾರೆ.  ದೆಹಲಿಯ  ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ತೊಡಿಗಿಸಿಕೊಂಡಿದ್ದ ಡಾ. ಜೋಗಿಂದರ್ ಚೌಧರಿ ಕೊನೆ ಉಸಿರು ಎಳೆದಿದ್ದಾರೆ.

ಜೂನ್  27 ಕ್ಕೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ವೈದ್ಯ ಪ್ರತಿದಿನ ನನರಕ ಅನುಭವಿಸಿದರು.  ಕೊರೋನಾ ಕಾಣಿಸಿಕೊಂಡ ನಂತರ ಅವರನ್ನು ಲೋಕ್ ನಾಯಕ ಜಯಪ್ರಕಾಶ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.    ಆದರೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ  ಕುಟುಂಬಸ್ಧರು ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆ 3.4 ಲಕ್ಷ ರೂ. ಬಿಲ್ ಮಾಡಿತ್ತು.

ತಮ್ಮ ಸಹೋದ್ಯೋಗಿಯನ್ನು ಉಳಿಸಿಕೊಳ್ಳುವ ಸಲುವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆ ವೈದ್ಯರು 2.8  ಲಕ್ಷ ರೂ. ಹಣ ಸಂಗ್ರಹಿಸಿದ್ದರು.  ಜತೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೂ ಈ ಬಗ್ಗೆ ಪತ್ರ ಬರೆದಿದ್ದರು.

ಮೂರು ವಾರ ನರಕ ಅನುಭವಿಸಿ ಕೊರೋನಾಕ್ಕೆ ಬಲಿಯಾದ ಅಲಿ

ಜೋಗಿಂದರ್ ಅವರ ತಂದೆ ರೈತರಾಗಿದ್ದು ಗಂಗಾರಾಮ್ ಆಸ್ಪತ್ರೆ ಬಿಲ್ ಮನ್ನಾ ಮಾಡಬೇಕು ಎಂದು ಕೇಳಿಕೊಂಡಿದ್ದರು. ಇದಕ್ಕೆ ಗಂಗಾರಾಮ್ ಆಸ್ಪತ್ರೆ ಸಹ ಸಮ್ಮತಿಸಿತ್ತು. ಆದರೆ ವೈದ್ಯ ಮಾತ್ರ ಬದುಕಿ ಉಳಿಯಲಿಲ್ಲ.

ಮಧ್ಯಪ್ರದೇಶ ಮೂಲದ ಜೋಗಿಂದರ್ ಕಳೆದ ನವೆಂಬರ್ ನಲ್ಲಿ ಅಂಬೇಡ್ಕರ್ ಆಸ್ಪತ್ರೆ ಜಾಯಿನ್ ಆಗಿದ್ದರು.  ಕಳೆದ ವಾರ ಮೃತಪಟ್ಟ ದೆಹಲಿ ನ್ಯಾಶನಲ್ ಹೆಲ್ತ್ ಮಿಶನ್ ನಲ್ಲಿ ಕೆಲಸ ಮಾಡುತ್ತಿದ್ದ ಡಾ. ಜಾವೇದ ಅಲಿ ಸಂಪರ್ಕಕ್ಕೆ ಜೋಗಿಂದರ್ ಬಂದಿದ್ದು ವೈರಸ್ ಹರಡಲು ಕಾರಣವಾಗಿತ್ತು. ದೆಹಲಿ ಸರ್ಕಾರ ಜೋಗಿಂದರ್ ಅವರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ಘೋಷಿಸಿದೆ.


 

click me!