ಮಾಸ್ಕ್ ಹಾಕದ ಮೇಕೆ ಬಂಧನ, ಪ್ರಾಣಿಗಳಿಗೂ ಇನ್ನು ಮುಂದೆ ಮಾಸ್ಕ್ ಕಡ್ಡಾಯ!?

Published : Jul 27, 2020, 04:36 PM IST
ಮಾಸ್ಕ್ ಹಾಕದ ಮೇಕೆ ಬಂಧನ, ಪ್ರಾಣಿಗಳಿಗೂ ಇನ್ನು ಮುಂದೆ ಮಾಸ್ಕ್ ಕಡ್ಡಾಯ!?

ಸಾರಾಂಶ

ಮಾಸ್ಕ್ ಹಾಕದ ಮೇಕೆ ಬಂಧಿಸಿದ ಪೊಲೀಸರು/ ಪ್ರಾಣಿಗಳಿಗೂ ಇನ್ನು ಮುಂದೆ ಸಾಮಾಜಿಕ ಅಂತರ ಕಾನೂನು/  ಮೇಕೆ ಬಂಧಿಸಿ ಠಾಣೆಗೆ ಕರೆದು ತಂದ ಕಾನ್ಪುರ ಪೊಲೀಸರು/ 

ಕಾನ್ಪುರ(ಜು.27)  ಮಾಸ್ಕ್ ಹಾಕದ ಮೇಕೆಯನ್ನು ಬಂಧಿಸಲಾಗಿದೆ! ಬೆಕೋನ್ ಗಂಜ್ ನಲ್ಲಿ ಈ ಘಟನೆ ನಡೆದಿದ್ದು, ಮೇಕೆಯನ್ನು ಜೀಪಿನಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ವಿಷಯ ತಿಳಿದ ಮೇಕೆಯ ಮಾಲಿಕ ಸೈಫುದ್ದೀನ್ ಬೇಗ್ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಮನವಿ ಮಾಡಿಕೊಂಡ ನಂತರ ರಿಲೀಸ್ ಮಾಡಲಾಗಿದೆ.

ಮೇಕೆ ಮಾಲೀಕ ಮತ್ತು ಪೊಲೀಸರ ನಡುವೆ ಮಾತುಕತೆ ನಡೆದಿದೆ. ಇನ್ನು ಮುಂದೆ ಮೇಕೆ ಮಾಸ್ಕ್ ಇಲ್ಲದೆ ರಸ್ತೆಯಲ್ಲಿ ಕಾಣಿಸಿಕೊಳ್ಳಬಾರದು ಎಂದು ಪೊಲೀಸರು ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ.

ಜೂಜಾಟದ ಕಿಂಗ್ ಪಿನ್ ಕತ್ತೆ ಬಂಧನ!

ಕೊರೋನಾ ಕಾರಣಕ್ಕೆ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯ ಮಾಡಲಾಗಿದೆ. ಆದರೆ ಪೊಲೀಸರು  ಪ್ರಾಣಿ ಮೇಲೆ ಯಾಕೆ ಕಾನೂನು ಪ್ರಯೋಗ ಮಾಡಿದರೋ ಗೊತ್ತಿಲ್ಲ.

ಕೆಲವರು ತಮ್ಮ ಸಾಕು ನಾಯಿಗೆ ಮಾಸ್ಕ್ ಹಾಕುತ್ತಿದ್ದಾರೆ, ಯಾಕೆ ಮೇಕೆಗೂ ಹಾಕಬಾರದು ಎಂಬ ಪ್ರಶ್ನೆ ಪೊಲೀಸರ ತಲೆಯಲ್ಲಿ ಬಂತೋ ಗೊತ್ತಿಲ್ಲ. ನಂತರ ಪೊಲೀಸರು ಪ್ಲೇಟ್ ತಿರುವಿಹಾಕಿದ್ದು ಯುವಕನೊಬ್ಬ ಮಾಸ್ಕ್ ಧರಿಸದೇ ಮೇಕೆಯನ್ನು ಕರೆದೊಯ್ಯುತ್ತಿದ್ದ, ಪೊಲೀಸರನ್ನು ಕಂಡೊಡನೆಯೇ ಆತ ಮೇಕೆಯನ್ನು ಬಿಟ್ಟು ಪರಾರಿಯಾದ, ಹಾಗಾಗಿ ಕೈಗೆ ಸಿಕ್ಕ ಮೇಕೆ ಕರೆದುಕೊಂಡು ಬಂದೆವು ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಷೇರು ಮಾರುಕಟ್ಟೆಯಲ್ಲಿ ನಾಳೆಯೂ ರಕ್ತದೋಕುಳಿ ಮುಂದುವರೆಯುತ್ತಾ? ಮಾರುಕಟ್ಟೆ ತಜ್ಞರು ಏನಂತಾರೆ?
ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲೇ ಅಸಭ್ಯ ವರ್ತನೆ: ವೀಡಿಯೋ ಮಾಡ್ತಿದ್ದಂತೆ ಎಸ್ಕೇಪ್