22 ಕೋಟಿ ಲಸಿಕೆಗೆ ಕೇಂದ್ರ ಮುಂಗಡ ಹಣ ಪಾವತಿಸಿದೆ; ಗೊಂದಲಕ್ಕೆ ಆದಾರ್ ಪೂನವಾಲ ಸ್ಪಷ್ಟನೆ!

By Suvarna NewsFirst Published May 3, 2021, 4:58 PM IST
Highlights

ಲಸಿಕೆ ಕೊರತೆ, ಕೋವಿಶೀಲ್ಡ್ ಮುಖ್ಯಸ್ಥ ಅದಾರ್ ಪೂನಾವಾಲ ಹೇಳಿಕೆ ಕುರಿತು ಹಲವು ತಪ್ಪು ಮಾಹಿತಿಗಳು ರವಾನೆಯಾಗಿದೆ. ಪರಿಣಾಣ ಕೇಂದ್ರ ಲಸಿಕೆಗೆ ಆರ್ಡರ್ ಮಾಡೇ ಇಲ್ಲ, ಲಸಿಕೆ ಉತ್ಪಾದನೆ ಹೆಚ್ಚಿಸಿಲ್ಲ, ಭದ್ರತೆ ಸೇರಿದಂತೆ ಹಲವು ಟೀಕೆ ಹಾಗೂ ತಪ್ಪು ಮಾಹಿತಿಗಳು ಹರಿದಾಡುತ್ತಿತ್ತು. ಇದೀಗ ಎಲ್ಲಾ ಎಲ್ಲಾ ಗೊಂದಲ ಹಾಗೂ ಅನುಮಾನಕ್ಕೆ ಸ್ವತಃ ಅದಾರ್ ಪೂನಾವಲ ಸ್ಪಷ್ಟನೆ ನೀಡಿದ್ದಾರೆ.

ಪುಣೆ(ಮೇ.03):  ತನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಜೊತೆಗೆ ತಪ್ಪಾಗಿ ಪ್ರಕಟಿಸಲಾಗಿದೆ ಎಂದು ಸೀರಂ ಲಸಿಕೆ ತಯಾರಕ ಸಂಸ್ಥೆ ಸಿಇಓ ಅದಾರ್ ಸಿ ಪೂನವಾಲ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪತ್ರ ಬರೆದಿರುವ ಪೂನವಾಲ ಎಲ್ಲಾ ತಪ್ಪು ಮಾಹಿತಿ ಹಾಗೂ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಸೀರಂ ಮುಖ್ಯಸ್ಥ ಪೂನಾವಾಲಾಗೆ ‘ವೈ’ ಭದ್ರತೆ!.

ಕೊರೋನಾ ವೈರಸ್ ಜೊತೆಗೆ ಕೋವಿಶೀಲ್ಡ್ ಲಸಿಕೆ ತಯಾರಕ ಕಂಪನಿ ಮುಖ್ಯಸ್ಥ ಅದಾರ್ ಪೂನಾವಾಲ ಕೂಡ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಕೊರೋನಾ ಲಸಿಕೆ ಕೊರತೆ ಜುಲೈ, ಆಗಸ್ಟ್ ತಿಂಗಳ ವರೆಗೆ ಮುಂದುವರಿಯಲಿದೆ, ಸರ್ಕಾರದಿಂದ ಆರ್ಡರ್ ಇಲ್ಲದ ಕಾರಣ ಉತ್ಪದಾನೆ ಹೆಚ್ಚಿಸಿಲ್ಲ ಅನ್ನೋ ಪೂನಾವಾಲ ಹಲವು ಹೇಳಿಕಗಳು ಮಾಧ್ಯಮಗಳಲ್ಲಿ ವರದಿಯಾಗಿದೆ.   ಸಾಮಾಜಿಕ ಮಾಧ್ಯಮದಲ್ಲೂ ಹರಿದಾಡುತ್ತಿದೆ. ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿದ ಕಾರಣ ಈ ರೀತಿ ಸುದ್ದಿಯಾಗುತ್ತಿದೆ ಎಂದು ಪೂನವಾಲ ಹೇಳಿದ್ದಾರೆ.

 

Amongst multiple reports it is important that correct information be shared with the public. pic.twitter.com/nzyOZwVBxH

— Adar Poonawalla (@adarpoonawalla)

ಜನರಿಗೆ ಅನುಕೂಲ ಕಲ್ಪಿಸಲು ಕೋವಿಶೀಲ್ಡ್ ಲಸಿಕೆ ದರ ಇಳಿಸಿದ ಸೀರಂ ಸಂಸ್ಥೆ

ಪೂನವಾಲ ಪತ್ರ ಬರೆದು ಟ್ವೀಟರ್ ಮೂಲಕ ಪೋಸ್ಟ್ ಮಾಡಿದ್ದಾರೆ.  ಪೂನವಾಲ ಬರೆದೆ ಪತ್ರದ ವಿವರ ಇಲ್ಲಿದೆ

ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿರುವ ಕಾರಣ ಕೆಲ ವಿಚಾರಗಳ ಕುರಿತು ಸ್ಪಷ್ಟನೆ ನೀಡುತ್ತಿದ್ದೇನೆ. ಲಸಿಕೆ ತಯಾರಿಕೆ ವಿಶೇಷ ಹಾಗೂ ಸೂಕ್ಷ್ಮ ಪ್ರಕ್ರಿಯೆ.  ಹೀಗಾಗಿ ದಿನ ಬೆಳಗಾಗುವದೊರಳೆಗೆ ಲಸಿಕೆ ತಯಾರಿಕೆ ಮಾಡಲು ಸಾಧ್ಯವಿಲ್ಲ . ಮತ್ತೊಂದು ವಿಷಯ ಗಮನದಲ್ಲಿಡಬೇಕು, ಭಾರತದ ಜನಸಂಖ್ಯೆಗೆ ಲಸಿಕೆ ತಯಾರಿಸುವುದು, ಪೂರೈಸುವುದು ಸುಲಭದ ಮಾತಲ್ಲ. ಅಭಿವೃದ್ಧಿ ಹೊಂದಿದ, ಅತ್ಯಾಧುನಿಕ ಲಸಿಕೆ ತಯಾರಕ ಘಟಕ ಹೊಂದಿರುವ ಕೆಲ ದೇಶಗಳು ತಮ್ಮ ಕಡಿಮೆ ಜನಸಂಖ್ಯೆಗೆ ಲಸಿಕೆ ಪೂರೈಸಲು ಸಾಧ್ಯವಾಗದೇ ಒದ್ದಾಡುತ್ತಿದೆ.

ಕೋವ್ಯಾಕ್ಸಿನ್, ಕೋವಿಶೀಲ್ಡ್ ಇವೆರಡರ ನಡುವಿನ ವ್ಯತ್ಯಾಸ, ಅಡ್ಡ ಪರಿಣಾಮ, ವಿಶೇಷತೆ!...

ಎರಡನೇ ವಿಚಾರ, ನಾವು ಕೇಂದ್ರ ಸರ್ಕಾರ ಜೊತೆ ಕೆಳದ ವರ್ಷ ಎಪ್ರಿಲ್ ತಿಂಗಳಿನಿಂದ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಕೇಂದ್ರ ನಮಗೆ ಎಲ್ಲಾ ರೀತಿಯ ನೆರವು ನೀಡಿದೆ. ವೈಜ್ಞಾನಿಕ, ಹಣಕಾಸು ಸೇರಿದಂತೆ ಎಲ್ಲಾ ನೆರವು ನೀಡಿದೆ

ಸರ್ಕಾರದಿಂದ ನಾವು 26 ಕೋಟಿ ಡೋಸ್ ಆರ್ಡರ್ ಪಡೆದಿದ್ದೇವೆ. ಇದರಲ್ಲಿ 15 ಕೋಟಿ ಡೋಸ್ ಪೂರೈಕೆ ಮಾಡಿದ್ದೇವೆ. ಇನ್ನು ಮುಂದಿನ 11 ಕೋಟಿ ಡೋಸ್ ಪೂರೈಕೆಗೆ ಶೇಕಡಾ 100ರಷ್ಟು ಮುಂಗಡ ಹಣ 1732.50 ಕೋಟಿ ರೂಪಾಯಿ ಹಣವನ್ನು ಸ್ವೀಕರಿಸಲಾಗಿದೆ. ಇದರಲ್ಲಿ 11 ಕೋಟಿ ಡೋಸ್ ಲಸಿಕೆಯನ್ನು ಶೀಘ್ರದಲ್ಲೇ ಪೂರೈಕೆ ಮಾಡಲಿದ್ದೇವೆ. ಇನ್ನುಳಿದ 11 ಕೋಟಿ ಲಸಿಕೆಯನ್ನು ಕೆಲ ತಿಂಗಳಲ್ಲಿ ಖಾಸಗಿ ಆಸ್ಪತ್ರೆ ಹಾಗೂ ರಾಜ್ಯಗಳಿಗೆ ಪೂರೈಕೆ ಮಾಡಲಿದ್ದೇವೆ. 

ಅಂತಿಮವಾಗಿ ಹೇಳುವುದೇನೆಂದರೆ, ಎಲ್ಲರಿಗೂ ಆದಷ್ಟೂ ಬೇಗ ಲಸಿಕೆ ಸಿಗಬೇಕು. ಇದು ನಮ್ಮ ಉದ್ದೇಶ ಕೂಡ ಆಗಿದೆ. ಇದಕ್ಕಾಗಿ ನಾವು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ನಾವೆಲ್ಲರು ಜೊತೆಯಾಗಿ ನಿಲ್ಲೋಣ. ಒಗ್ಗಟ್ಟಾಗಿ ಹೋರಾಡಿ ದೇಶದಿಂದ ಕೊರೋನಾ ಪಿಡುಗನ್ನು ತೊಲಗಿಸೋಣ ಎಂದು ಅದಾರ್ ಪೂನವಾಲ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

click me!