ವೈರಸ್, ಆಸ್ಪತ್ರೆಯಲ್ಲಿನ ಚಿಕಿತ್ಸೆ, ಆರೈಕೆ, ಲಸಿಕೆ ಸೇರಿದಂತೆ ಕೊರೋನಾ ಕುರಿತು ಹಲವು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ವೇದಿಕೆಗಳಲ್ಲಿ ಹರಿದಾಡುತ್ತಿದೆ. ಹೀಗೆ ಕೆಲ ಮಾಧ್ಯಗಳು ಭಾರತದಲ್ಲಿ ಆರೋಗ್ಯ ವ್ಯವಸ್ಥೆ ಹದಗೆಡೆಲು ಮಾರ್ಚ್ ತಿಂಗಳಿನಿಂದ ಯಾವುದೇ ಲಸಿಕೆಗೆ ಕೇಂದ್ರ ಸರ್ಕಾರ ಆರ್ಡರ್ ಕೊಟ್ಟಿಲ್ಲ ಅನ್ನೋ ವರದಿ ಪ್ರಕಟಿಸಿತ್ತು. ಈ ವರದಿ ಸತ್ಯಕ್ಕೆ ದೂರವಾಗಿದೆ ಅನ್ನೋದು ಬಯವಾಗಿದೆ.
ನವದೆಹಲಿ(ಮೇ.03): ಕೊರೋನಾ ವೈರಸ್ ಕುರಿತು ಹಲವು ಸುಳ್ಳು ಸುದ್ದಿಗಳು ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳುತ್ತಿದೆ. ಹೀಗೆ ಕೆಲ ಮಾಧ್ಯಮಗಳು ಲಸಿಕೆ ವಿಚಾರದಲ್ಲಿ ಸುಳ್ಳು ಸುದ್ದಿಯನ್ನು ಪ್ರಕಟಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರವೇ ಸ್ಪಷ್ಟನೆ ನೀಡಿದೆ. ಮಾರ್ಚ್ ತಿಂಗಳಿನಿಂದ ಕೇಂದ್ರ ಸರ್ಕಾರ ಯಾವುದೇ ಲಸಿಕೆಗೆ ಆರ್ಡರ್ ಮಾಡಿಲ್ಲ ಅನ್ನೋ ವರಿದಿಗೆ ಕೇಂದ್ರ ಸರ್ಕಾರ ಅಂಕಿ ಅಂಶಗಳ ಜೊತೆಗೆ ಉತ್ತರ ನೀಡಿದೆ.
ಯೂರೋಪಿಯನ್ ಅಧ್ಯಕ್ಷರ ಜೊತೆ ಮಾತುಕತೆ; ಬೆಂಬಲಕ್ಕೆ ಧನ್ಯವಾದ ಹೇಳಿದ ಮೋದಿ !
undefined
ಮಾಧ್ಯಮ ವರದಿ ಪ್ರಕಾರ ಮಾರ್ಚ್ 2021ರಲ್ಲಿ ಕೇಂದ್ರ ಸರ್ಕಾರ ಕೊನೆಯದಾಗಿ ಲಸಿಕೆ ತಯಾರಕರಿಗೆ ಆರ್ಡರ್ ಕೊಟ್ಟಿದೆ. ಬಳಿಕ ಯಾವುದೇ ಲಸಿಕೆಗೆ ಆರ್ಡರ್ ಕೊಟ್ಟಿಲ್ಲ. ಇದರಿಂದ ದೇಶದಲ್ಲಿ ಲಸಿಕೆ ಕೊರತೆ ಎದುರಾಗಿದೆ. ಇಷ್ಟೇ ಅಲ್ಲ ಹಲವು ಜೀವಗಳು ಬಲಿಯಾಗಿದೆ ಅನ್ನೋ ವರದಿ ಕೆಲ ಮಾಧ್ಯಮದಲ್ಲಿ ಪ್ರಕಟಗೊಂಡಿತ್ತು.
ಈ ಮಾಧ್ಯಮ ವರದಿಗಳು ಸಂಪೂರ್ಣ ವಾಗಿ ಸತ್ಯಕ್ಕೆ ದೂರವಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಏಪ್ರಿಲ್ 28, 2021ರಂದು ಶೇಕಡಾ 100 ರಷ್ಟು ಮುಂಗಡ ಪಾವತಿ ಮಾಡಿ 11 ಕೋಟಿ ಕೋವಿಶೀಲ್ಡ್ ಲಸಿಕೆ ಆರ್ಡರ್ ಮಾಡಲಾಗಿದೆ ಇದರ ಬೆಲೆ 1732.50 ಕೋಟಿ ರೂಪಾಯಿ (ಟಿಡಿಎಸ್ ಬಳಿಕಕ 1699.50 ಕೋಟಿ ರೂಪಾಯಿ). ಸೀರಂ ಸಂಸ್ಥೆಯಿಂದ ಆರ್ಡರ್ ಮಾಡಲಾಗಿದೆ. ಇದರಲ್ಲಿ8.744 ಕೋಟಿ ಡೋಸ್‌ಗಳನ್ನು ವಿತರಿಸಲಾಗಿದೆ.
ನೈಟ್ರೋಜನ್ ಘಟಕ ಪರಿವರ್ತಿಸಿ ಆಕ್ಸಿಜನ್ ಉತ್ಪಾದನೆ; ಪ್ರಗತಿ ಪರಿಶೀಲಿಸಿದ ಪ್ರಧಾನಿ ಮೋದಿ!
ಭಾರತ್ ಬಯೋಟೆಕ್ ಕಂಪನಿಯಿಂದ ಹೆಚ್ಚುವರಿಯಾಗಿ ಕೋವಾಕ್ಸಿನ್ ಲಸಿಕೆಗೆ ಆರ್ಡರ್ ನೀಡಲಾಗಿದೆ. 787.50 ಕೋಟಿ ರೂಪಾಯಿ (ಟಿಡಿಎಸ್ ಬಳಿಕ ರೂ 772.50 ಕೋಟಿ ರೂಪಾಯಿ) ಮುಂಗಡ ಪಾವತಿ ಮಾಡಲಾಗಿದೆ. ಈ ದೇಶದಲ್ಲಿ 0.8813 ಕೋಟಿ ಡೋಸ್ ಈಗಾಗಲೇ ವಿತರಿಸಲಾಗಿದೆ.
ಮೇ 2ರಂದು ಕೇಂದ್ರ ಸರ್ಕಾರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ 16.54 ಕೋಟಿ ಲಸಿಕೆ ಪ್ರಮಾಣವನ್ನು ಉಚಿತವಾಗಿ ನೀಡಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಇನ್ನೂ 78 ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ಡೋಸ್ ಲಭ್ಯವಿದೆ. ಮುಂದಿನ 3 ದಿನಗಳಲ್ಲಿ 56 ಲಕ್ಷಕ್ಕೂ ಹೆಚ್ಚಿನ ಪ್ರಮಾಣ ಡೋಸೇಜ್ ರಾಜ್ಯ ಹಾಗೂ ಕೇಂದ್ರಡಾಳಿತ ಪ್ರದೇಶ ಸ್ವೀಕರಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.