ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವು ಭಾರತವು ಕಾಶ್ಮೀರವನ್ನು ಕೈವಶ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. ಇದಲ್ಲದೆ, ಭಾರತೀಯ ಪರ್ವತಾರೋಹಿಗಳು ಅರುಣಾಚಲ ಪ್ರದೇಶದ ಪರ್ವತವೊಂದಕ್ಕೆ ಹೆಸರಿಟ್ಟಿದ್ದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.
ನವದೆಹಲಿ: ವಿಶ್ವಸಂಸ್ಥೆಯಲ್ಲಿ ಸದಾ ಕಾಶ್ಮೀರ ವಿಷಯ ಪ್ರಸ್ತಾಪ ಮಾಡುವ ಪಾಕಿಸ್ತಾನ, ಈ ಬಾರಿ 'ನಮ್ಮ ದೇಶದ ಭಾಗವಾಗ ಕಾಶ್ಮೀರವನ್ನು ಕೈವಶ ಮಾಡಲು ಭಾರತ ಪ್ರಯತ್ನಿಸುತ್ತಿದೆ' ಎಂಬ ಗಂಭೀರ ಆರೋಪ ಮಾಡಿದೆ. ಶುಕ್ರವಾರ ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್, 'ಭಾರತ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಿಕೊ ಳ್ಳುತ್ತಿದೆ. ಹೀಗೆ ಹೆಚ್ಚಿಸಿಕೊಂಡ ಸೇನಾ ಬಲವನ್ನು ಪಾಕ್ ಗಡಿ ಯಲ್ಲಿ ನಿಯೋಜಿಸುತ್ತಿದೆ. ಗಡಿ ನಿಯಂತ್ರಣ ರೇಖೆ ದಾಟಿ ನಮ್ಮ ದೇಶದ ಕಾಶ್ಮೀರ (ಪಿಒಕೆ) ವಶ ಮಾಡಿಕೊಳ್ಳುವ ಬೆದರಿಕೆ ಹಾಕುತ್ತಿದೆ. ಇದು ಅಣ್ವಸ್ತ್ರ ದಾಳಿಯ ಅಪಾಯವನ್ನೂ ಒಳ ಗೊಂಡಿದೆ. ಆದರೆ ಇಂಥ ಯಾವುದೇ ದಾಳಿಗೆ ಪಾಕಿಸ್ತಾನ ಸೂಕ್ತ ತಿರುಗೇಟು ನೀಡಲಿದೆ' ಎಂದು ಹೇಳಿದ್ದಾರೆ. ಅಲ್ಲದೆ, ಕಾಶ್ಮೀರ ವನ್ನು ಪ್ಯಾಲೆಸ್ತೀನ್ ಪರಿಸ್ಥಿತಿಗೂ ಹೋಲಿಸಿದ್ದಾರೆ.
ಅರುಣಾಚಲದ ಪರ್ವತಕ್ಕೆ ಭಾರತ ಹೆಸರಿಟ್ಟಿದ್ದಕ್ಕೆ ಚೀನಾ ಕ್ಯಾತೆ
ಗುವಾಹಟಿ: ಭಾರತದ ಪರ್ವತಾರೋಹಿಗಳ ತಂಡವೊಂದು ಅರುಣಾಚಲ ಪ್ರದೇಶದ ಇನ್ನೂ ಯಾರೂ ಹತ್ತಿರದ ಪರ್ವತವನ್ನು ಹತ್ತಿ ಅದಕ್ಕೆ ‘ತ್ಸಾಂಗ್ಯಾಂಗ್ ಗ್ಯತ್ಸೋ ಪೀಕ್’ ಎಂದು ಹೆಸರಿಟ್ಟಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.
ವೈರಿ ದೇಶ ಪಾಕಿಸ್ತಾನದಿಂದ ಭಾರತ ಆಮದು ಮಾಡಿಕೊಳ್ಳುತ್ತೆ 10 ವಸ್ತುಗಳು- ಪ್ರತಿ ಮನೆಯಲ್ಲೂ ಆಗುತ್ತೆ ಇದರ ಬಳಕೆ
ಅರುಣಾಚಲ ಪ್ರದೇಶ ತನಗೆ ಸೇರಿದ್ದು ಎಂದು ಚೀನಾ ಪ್ರತಿಪಾದಿಸುತ್ತದೆ. ಈ ಹಿನ್ನೆಲೆಯಲ್ಲಿ, ಭಾರತೀಯ ಪರ್ವತಾರೋಹಿಗಳು ಅದಕ್ಕೆ ನಾಮಕರಣ ಮಾಡಿರುವ ಬಗ್ಗೆ ಪ್ರಶ್ನಿಸಿದಾಗ, ‘ನೀವೇನು ಕೇಳುತ್ತಿದ್ದೀರೋ ಅದರ ಬಗ್ಗೆ ನಮಗೆ ಮಾಹಿತಿಯಿಲ್ಲ. ಆದರೆ, ಅರುಣಾಚಲ ಪ್ರದೇಶ ನಮ್ಮ ಭೂಭಾಗ. ಅಲ್ಲಿಗೆ ಭಾರತೀಯರು ತೆರಳಿದ್ದರೆ ಅಕ್ರಮ ಪ್ರವೇಶ ಮಾಡಿದಂತೆ. ಅಲ್ಲಿನ ಪರ್ವತಕ್ಕೆ ಹೆಸರು ಇರಿಸಿದರೆ ಅದೂ ಅಕ್ರಮ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಬೀಜಿಂಗ್‌ನಲ್ಲಿ ಹೇಳಿದ್ದಾರೆ.
ಭಾರತದ 15 ಪರ್ವತಾರೋಹಿಗಳ ತಂಡವೊಂದು ಶನಿವಾರ ಅರುಣಾಚಲದ ತವಾಂಗ್‌ನಲ್ಲಿ ಇನ್ನೂ ಯಾರೂ ಹತ್ತಿರದ ಪರ್ವತವೊಂದನ್ನು ಹತ್ತಿ, ಅದಕ್ಕೆ 6ನೇ ದಲೈ ಲಾಮಾ ಸ್ಮರಣಾರ್ಥ ಅವರ ಹೆಸರಾದ ‘ತ್ಸಾಂಗ್ಯಾಂಗ್ ಗ್ಯತ್ಸೋ’ ಎಂದು ಹೆಸರಿಟ್ಟಿತ್ತು. ಇವರು ತವಾಂಗ್‌ನಲ್ಲಿ ಜನಿಸಿದವರು.
ಪಾಕಿಸ್ತಾನದ ಮೇಲೆ 27 ಲಕ್ಷ ಕೋಟಿ ರೂ. ಸಾಲದ ಬರೆ! 4 ವರ್ಷದೊಳಗೆ ತೀರಿಸದಿದ್ರೆ ಮುಂದೇನು?