
ನವದೆಹಲಿ(ಮಾ.08): ಅಬಕಾರಿ ನೀತಿ ಅಕ್ರಮದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಹಾರ್ ಜೈಲು ಸೇರಿದ್ದಾರೆ. ಸಿಸೋಡಿಯಾ ಬಂಧನ ವಿರೋಧಿಸಿ ಆಪ್ ಭಾರಿ ಪ್ರತಿಭಟನೆ ಮಾಡಿದೆ. ಬಳಿಕ ಪ್ರತಿ ದಿನ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇಂದು ಮನೀಶ್ ಸಿಸೋಡಿಯಾ ಜೈಲಿನಲ್ಲೇ ಹತ್ಯೆಯಾಗುವ ಸಾಧ್ಯತೆ ಇದೆ ಎಂದು ಸ್ಫೋಟಕ ಹೇಳಿಕೆ ನೀಡಿತ್ತು. ಕಾರಣ ಮನೀಶ್ ಸಿಸೋಡಿಯಾ ಅವರ ಮನವಿ ತಿರಸ್ಕರಿ, ಗ್ಯಾಂಗ್‌ಸ್ಟರ್, ಕ್ರಿಮಿನಲ್‌ಗಳಿರುವ ಕೊಠಡಿಯಲ್ಲಿ ಹಾಕಲಾಗಿದೆ. ಹೀಗಾಗಿ ಈ ಕ್ರಿಮಿನಲ್‌ಗಳಿಂದ ಸಿಸೋಡಿಯಾ ಹತ್ಯೆಯಾಗುವ ಸಾಧ್ಯತೆ ಇದೆ ಎಂದು ಆರೋಪಿಸಿತ್ತು. ಮನೀಶ್ ಸಿಸೋಡಿಯಾ ಜೈಲು ಸೆಲ್ ಕುರಿತು ಸತತ ಆರೋಪ ಮಾಡುತ್ತಿರುವ ಆಮ್ ಆದ್ಮಿ ಪಾರ್ಟಿಗೆ ತಿಹಾರ್ ಜೈಲು ಅಧೀಕ್ಷಕರು ಸ್ಪಷ್ಟನೆ ನೀಡಿದ್ದಾರೆ. ಮನೀಶ್ ಸಿಸೋಡಿಯಾರನ್ನು ಪ್ರತ್ಯೇಕ ಸೆಲ್‌ಗೆ ಹಾಕಲಾಗಿದೆ. ಸಿಸೋಡಿಯಾ ಜೊತೆಗಿರುವ ಕೈದಿಗಳು ಉತ್ತಮ ಸನ್ನಡತೆ ಹೊಂದಿರುವ ಕೈದಿಗಳಾಗಿದ್ದಾರೆ. ಯಾವುದೇ ಗ್ಯಾಂಗ್‌ಸ್ಟರ್, ಕ್ರಿಮಿನಲ್ಸ್ ಜೊತೆಗಿಲ್ಲ ಎಂದು ತಿಹಾರ್ ಜೈಲು ಸ್ಪಷ್ಟಪಡಿಸಿದೆ.
ತಿಹಾರ್ ಜೈಲಿನಿಂದ ಸ್ಪಷ್ಟನೆ ಹೊರಬೀಳುತ್ತಿದ್ದಂತೆ ಆಮ್ ಆದ್ಮಿ ಪಾರ್ಟಿ ಆರೋಪಗಳ ಸತ್ಯಾಸತ್ಯತೆ ಬಯಲಾಗಿದೆ. ಮನೀಶ್ ಸಿಸೋಡಿಯಾರನ್ನು ಮೊದಲ ದಿನದಿಂದಲೇ ಪ್ರತ್ಯೇಕ ಸೆಲ್ ನೀಡಲಾಗಿದೆ. ಸನ್ನಡತೆಯಲ್ಲಿ ಉತ್ತಮ ಎಂದು ಗುರುತಿಸಿಕೊಂಡಿರುವವರು ಸಿಸೋಡಿಯಾ ಸೆಲ್‌ನಲ್ಲಿದ್ದಾರೆ. ಮನೀಶ್ ಸಿಸೋಡಿಯಾ ಅವರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಕುರಿತು ಅತೀವ ಎಚ್ಚರಿಕೆ ವಹಿಸಲಾಗುತ್ತದೆ ಎಂದು ತಿಹಾರ್ ಜೈಲು ಸಿಬ್ಬಂದಿಗಳು ಹೇಳಿದ್ದಾರೆ.
ಜೈಲಲ್ಲೆ ಸಿಸೋಡಿಯಾ ಹತ್ಯೆಯಾಗುವ ಸಾಧ್ಯತೆ, ಬಿಜೆಪಿ ವಿರುದ್ಧ ಗುಡುಗಿದ ಆಪ್!
ಇಂದು ಆಮ್ ಆದ್ಮಿ ಪಾರ್ಟಿ ವಕ್ತಾರ ಸೌರಬ್ ಭಾರದ್ವಾಜ್ ಸುದ್ದಿಗೋಷ್ಠಿ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವೇಳೆ ಮನೀಶ್ ಸಿಸೋಡಿಯಾಗೆ ಜೈಲಿನ ನಂ.1 ಸೆಲ್ ನೀಡಲಾಗಿದೆ. ಈ ಸೆಲ್‌ನಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್ , ಗ್ಯಾಂಗ್‌ಸ್ಟರ್ ಇದ್ದಾರೆ ಎಂದು ತಲೆ ಮೇಲೆ ಹೊಡೆದಂತೆ ಹೇಳಿತ್ತು. ಸೆಲ್ ನಂಬರ್ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಿ ಇವೆಲ್ಲವೂ ಬಿಜೆಪಿಯ ಷಡ್ಯಂತ್ರ ಎಂದು ಬಿಂಬಿಸಿತ್ತು. ಆದರೆ ಜೈಲು ಅಧಿಕ್ಷರ ಸ್ಪಷ್ಟನೆಯಿಂದ ಆಪ್ ಆರೋಪಗಳ ಅಸಲಿ ಸತ್ಯ ಬಯಲಾಗಿದೆ.
ಮನೀಶ್ ಸಿಸೋಡಿಯಾ ತಮ್ಮ ಚಟುವಟಿಕೆಗಳನ್ನು ಯಾವುದೇ ಅಡೆ ತಡೆ ಇಲ್ಲದ ಜೈಲಿನ ಕೊಠಡಿಯಲ್ಲಿ ಮಾಡಬಹುದು. ಸಿಸೋಡಿಯಾ ಬೇಡಿಕೆಯನ್ನೂ ಪೂರೈಸಲಾಗಿದೆ. ಅವರಿಗೆ ಕಿಂಚಿತ್ತು ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ತಿಹಾರ್ ಜೈಲು ಹೇಳಿದೆ.
ದಿಲ್ಲಿ ಅಬಕಾರಿ ಹಗರಣ: ಕೆಸಿಆರ್ ಪುತ್ರಿ ಕವಿತಾಗೆ ಇಡಿ ಶಾಕ್; ನಾಳೆ ವಿಚಾರಣೆಗೆ ಹಾಜರಾಗಲು ಸೂಚನೆ
ಮನೀಶ್ ಸಿಸೋಡಿಯಾರನ್ನು ಕ್ರಿಮಿನಲ್‌ಗಳ ಕೊಠಡಿಯಲ್ಲಿ ಹಾಕಲಾಗಿತ್ತು. ಹೀಗಾಗಿ ಮನೀಶ್ ಸಿಸೋಡಿಯಾ ಪರ ವಕೀಲರು ಪ್ರತ್ಯೇಕ ಸೆಲ್ ನೀಡುವಂತೆ ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ಇದಕ್ಕೆ ಕೋರ್ಟ್ ಸಮ್ಮತಿಸಿತ್ತು. ಆದರೆ ಬಿಜೆಪಿ ಪ್ರತ್ಯೇಕ ಸೆಲ್ ನೀಡಲು ನಿರಾಕರಿಸುತ್ತಿದೆ ಎಂಬ ಆರೋಪವನ್ನು ಆಪ್ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ