
ಹೈದರಾಬಾದ್(ಜು.05): ಭಾರತದಲ್ಲಿ ಸೆಲ್ಫಿ ಕ್ರಜ್ ಹೆಚ್ಚೆ ಇದೆ. ಇದಕ್ಕೆ ವಯಸ್ಸಿನ ಅಂತರವಿಲ್ಲ. ಬಹುತೇಕರು ಇದೇ ಸೆಲ್ಫಿ ಕ್ರೇಜ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಅಪ್ರಾಪ್ತ ಮೂವರು ಸಹೋದರಿಯರು ಸೆಲ್ಫಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಘಟನೆ ತೆಲಂಗಾಣದ ನಿರ್ಮಲ ಜಿಲ್ಲೆಯ ಶಿಂಗಾಂಗಮ್ ಗ್ರಾಮದಲ್ಲಿ ನಡೆದಿದೆ.
ಜೋಯಿಡಾ: ಸೆಲ್ಫಿ ಹುಚ್ಚಿಗೆ ಯುವಜೋಡಿ ಬಲಿ..!..
ಮೂವರು ಸಹೋದರಿರಾದ ಸುನೀತಾ(14), ವೈಶಾಲಿ(14) ಹಾಗೂ ಅಂಜಲಿ (14) ನಾಪತ್ತೆಯಾಗಿದ್ದಾರೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಜುಲೈ 4 ರಂದು ಮಕ್ಕಳು ನಾಪತ್ತೆಯಾಗಿರುವುದಾಗಿ ಗ್ರಾಮದ ಪೊಲೀಸ್ ಠಾಣೆಯಲ್ಲಿ ರಾತ್ರಿ ದೂರು ದಾಖಲಿಸಿದ್ದಾರೆ.
ತಕ್ಷಣವೇ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಆದರೆ ಯಾವುದೇ ಸುಳಿವು ಸಿಗಲಿಲ್ಲ. ಮರುದಿನ(ಜುಲೈ.5) ಮೂವರು ಬಾಲಕಿಯರ ಶವ ಕೆರೆಯಲ್ಲಿ ತೇಲಾಡುತ್ತಿರುವು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ತನಿಖೆ ವೇಳೆ ಈ ಮೂವರು ಬಾಲಕಿಯರು ಸೆಲ್ಫಿಗಾಗಿ ತೆರಳಿದಾಗ ಈ ಘಟನೆ ನಡೆದಿರುವುದದು ಬೆಳಕಿಗೆ ಬಂದಿದೆ.
ಸೆಲ್ಫಿ ಅವಾಂತರ; ಕಾಳಿ ನದಿಗೆ ಬಿದ್ದ ಬೀದರ್ ಪ್ರೇಮಿಗಳು ನಾಪತ್ತೆ...
ಸೆಲ್ಫೆ ತೆಗೆಯುವಾಗ ಒರ್ವ ಬಾಲಕಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾಳೆ. ಇದನ್ನು ನೋಡಿದ ಇಬ್ಬರು ಸಹೋದರಿಯರು ಆಕೆಯನ್ನು ರಕ್ಷಿಸಲು ಕೆರೆಗೆ ಹಾರಿದ್ದಾರೆ. ಆದರೆ ಆಕೆಯನ್ನು ರಕ್ಷಿಸಲು ಸಾಧ್ಯಾವಾಗದೆ, ತಮಗೂ ಮೇಲೆ ಬರಲಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿಯರ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಸಾವಿನ ಹಿಂದೆ ಬೇರೆ ಕಾರಣ ಇದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ