ಕಾಂಗ್ರೆಸ್‌ಗೆ ಹೊಡೆತ; ಪಕ್ಷ ತೊರೆದು TMC ಸೇರಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ!

By Suvarna NewsFirst Published Jul 5, 2021, 5:54 PM IST
Highlights
  • ಹಳ್ಳ ಹಿಡಿದಿರುವ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ
  • ಕಾಂಗ್ರೆಸ್ ನಾಯಕ, ಮಾಜಿ ರಾಷ್ಟ್ರಪತಿ ಪುತ್ರ ಪಕ್ಷಕ್ಕೆ ಗುಡ್‌ಬೈ
  • ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸೇರಿದ ಅಭಿಜಿತ್ ಮುಖರ್ಜಿ

ಕೋಲ್ಕತಾ(ಜು.05): ಚುನಾವಣೆಗಳಲ್ಲಿನ ಸೋಲು, ಅಧ್ಯಕ್ಷರ ನೇಮಕಾತಿ ಜಗಳ, ರಾಜ್ಯ ಕಾಂಗ್ರೆಸ್‌ನಲ್ಲಿ ಕಿತ್ತಾಟ ಸೇರಿದಂತೆ ಹಲವು ಕಾರಣಗಳಿಂದ ಕಾಂಗ್ರೆಸ್ ಪಕ್ಷ ಬಸವಳಿದಿದೆ. ಇದರ ನಡುವೆ ಮತ್ತೊಂದು ಹೊಡೆತ ಬಿದ್ದಿದೆ. ಕಾಂಗ್ರೆಸ್ ಮಾಜಿ ಸಂಸದ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್ ಮುಖರ್ಜಿ ಪಕ್ಷ ತೊರೆದು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ.

ಪ್ರಣಬ್‌ ಪುಸ್ತಕ ಬಿಡುಗಡೆ: ಪುತ್ರ, ಪುತ್ರಿಯ ನಡುವೆ ನಡುವೆ ಟ್ವೀಟರ್‌ ವಾರ್‌!

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಹಾಗೂ ಪ್ರಬಲ ರಾಜಕೀಯ ನಾಯಕನಾಗಿ ಬೆಳೆದ ಪ್ರಣಬ್ ಮುಖರ್ಜಿ, ಬಳಿಕ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಣಬ್ ಪುತ್ರ ಕೂಡ ರಾಜಕೀಯ ಜೀವನ ಆರಂಭಿಸಿದ್ದು, ಇದೇ ಕಾಂಗ್ರೆಸ್ ಪಕ್ಷದಿಂದ. ಸಂಸದನಾಗಿ ಆಯ್ಕೆಯಾಗಿದ್ದ ಅಭಿಜಿತ್ ಮುಖರ್ಜಿ ಇದೀಗ ಕಾಂಗ್ರೆಸ್ ಪಕ್ಷದೊಳಗಿನ ತೊಡಕು, ನಾಯಕತ್ವ ಕೊರತೆಯಿಂದ ಪಕ್ಷ ತೊರೆದಿದ್ದಾರೆ.

 

Warmly welcoming Shri into the Trinamool family!

We are certain that your contribution towards fulfilling 's vision for a brighter Bengal shall be valued by all. pic.twitter.com/oSQgmfxVCR

— All India Trinamool Congress (@AITCofficial)

ಕಾಂಗೈ‌ನ ಪ್ರತಿಭಾವಂತ ಆಪತ್ಭಾಂಧವ ಪ್ರಣಬ್‌ನನ್ನು ಪ್ರಧಾನಿಯನ್ನೇಕೆ ಮಾಡಲಿಲ್ಲ ಸೋನಿಯಾ?

ಪಕ್ಷ ಸೇರಿದ ಬಳಿಕ ಸಿಎಂ ಮಮತಾ ಬ್ಯಾನರ್ಜಿಗೆ ಧನ್ಯವಾದ ಹೇಳಿದ ಅಭಿಜಿತ್ ಮುಖರ್ಜಿ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿನ ಗೆಲುವನ್ನು ಲೋಕಸಭಾ ಚುನಾವಣೆಯಲ್ಲೂ ಮಮತಾ ಬ್ಯಾನರ್ಜಿ ಪುನಾರರ್ತಿಸಲಿದ್ದಾರೆ. ಬಂಗಾಳದಲ್ಲಿ ಬಿಜೆಪಿ ಹಿಂಸಾಚಾರವನ್ನು ತಡೆಯವಲ್ಲಿ ಟಿಎಂಸಿ ಯಶಸ್ವಿಯಾಗಿದೆ. ಈ ಜಾತ್ಯಾತೀಯ ರಾಜಕೀಯಕ್ಕೆ ನನ್ನ ಬೆಂಬಲ ಎಂದು ಅಭಿಜಿತ್ ಮುಖರ್ಜಿ ಹೇಳಿದ್ದಾರೆ.

ಟಿಎಂಸಿ ಸೈನಿಕನಾಗಿ ಪಕ್ಷ ಸೇರಿಕೊಂಡಿದ್ದೇನೆ. ಪಕ್ಷದ ನಿಷ್ಠಾವಂತ ನಾಯಕನಾಗಿ, ಹಿರಿಯರ ಸೂಚನೆಯಂತೆ ಕೆಲಸ ಮಾಡುತ್ತೇನೆ.  ಜಾತ್ಯತೀತತೆ ಕಾಪಾಡಿಕೊಳ್ಳುತ್ತ ಹೆಜ್ಜೆ ಇಡಲಿದ್ದೇನೆ ಎಂದು ಅಭಿಜಿತ್ ಮುಖರ್ಜಿ ಹೇಳಿದ್ದಾರೆ.

ಜಂಗಿಪುರದ ಮಾಜಿ ಸಂಸದ ಅಭಿಜಿತ್ ಮುಖರ್ಜಿ  ಈಹಿಂದೆ ಪಕ್ಷ ತೊರೆಯುವ ಮಾತುಗಳು ಕೇಳಿಬಂದಿತ್ತು. ಆದರೆ ಸ್ಪಷ್ಟವಾಗಿ ನಿರಾಕರಿಸಿದ್ದ ಮುಖರ್ಜಿ, ತಾನು ಕಾಂಗ್ರೆಸ್ ನಿಷ್ಟಾವಂತ ಕಾರ್ಯಕರ್ತ ಎಂದು ಹೇಳಿಕೆ ನೀಡಿದ್ದರು. 
 

click me!