
ನವದೆಹಲಿ(ಮಾ.23) ಸ್ವಯಂಘೋಷಿತ ಕ್ರೈಸ್ತ ಪಾದ್ರಿ ಬಜಿಂದರ್ ಸಿಂಗ್ ಅಸಲಿ ಮುಖ ಬಟಾ ಬಯಲಾಗಿದೆ. ಈಗಾಗಲೇ ಲೈಂಗಿಕ ಕಿರುಕುಳ ಆರೋಪದಲ್ಲಿ ಸಿಲುಕಿರುವ ಬಜಿಂದರ್ ಸಿಂಗ್ ಇದೀಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾನೆ. ಬಜಿಂದರ್ ಸಿಂಗ್ ಕಚೇರಿಯಲ್ಲಿ ನಡೆದ ಘಟನೆಯ ಸಿಸಿಟಿವಿ ದೃಶ್ಯ ಈ ಕರಾಳ ಮುಖ ಬಯಲು ಮಾಡಿದೆ. ಪುಟ್ಟ ಮಗುವಿನೊಂದಿಗೆ ಕಚೇರಿಯಲ್ಲಿ ಕುಳಿತಿದ್ದ ಮಹಿಳೆ ಮೇಲೆ ಬಜಿರಂದರ್ ಪಾಲ್ ಹಲ್ಲೆ ನಡೆಸಿದ್ದಾನೆ. ಇಷ್ಟೇ ಅಲ್ಲ ಉದ್ಯೋಗಿಗಳ ಮೇಲೂ ಹಲ್ಲೆ ನಡೆಸಿದ ವಿಡಿಯೋ ಲಭ್ಯವಾಗಿದೆ. ಈ ಸಿಸಿಟಿವಿ ದೃಶ್ಯ ಫೆಬ್ರವರಿ 2025ರಲ್ಲಿ ಸೆರೆಯಾದ ದೃಶ್ಯಗಳಾಗಿದೆ.
ಸ್ವಯಂ ಘೋಷಿತ ಕ್ರೈಸ್ತ ಪ್ರವಾದಿ ಭಜಿಂದರ್ ಸಿಂಗ್ ತನ್ನ ಕಚೇರಿಯೊಳಗೆ ಮಹಿಳೆಯರು ಸೇರಿದಂತೆ ತನ್ನ ಉದ್ಯೋಗಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಲಭ್ಯವಾಗಿವೆ. ಕಪುರ್ತಲಾ ಪೊಲೀಸರು ಭಜಿಂದರ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 354-ಎ (ಲೈಂಗಿಕ ಕಿರುಕುಳ), 354-ಡಿ ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ ಕೆಲವೇ ದಿನಗಳ ನಂತರ ಈ ವಿಡಿಯೋ ಹೊರಬಿದ್ದಿದೆ. ವೈರಲ್ ವಿಡಿಯೋದಲ್ಲಿ, ಸಿಂಗ್ ತನ್ನ ಕಚೇರಿಯೊಳಗೆ ತನ್ನ ಉದ್ಯೋಗಿಗಳ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವಿದೆ. ಈ ದೃಶ್ಯ ಬಹಿರಂಗವಾಗುತ್ತಿದ್ದಂತೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ತಕ್ಷಣವೇ ಬಜಿರಂದರ್ ಪಾಲ್ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮಹಿಳೆಯೊಂದಿಗೆ ಕ್ರೈಸ್ತ ಪಾದ್ರಿ ನೃತ್ಯ: ವಿಡಿಯೋ ಪೋಸ್ಟ್ ಮಾಡಿದ ಕಾಲಿವುಡ್ ನಟ ಅರೆಸ್ಟ್; ನೆಟ್ಟಿಗರ ವಿರೋಧ
ಹೊಸದಾಗಿ ಬಹಿರಂಗಗೊಂಡ ಸಿಸಿಟಿವಿ ದೃಶ್ಯಾವಳಿಗಳು ವಿವಾದ ಹೆಚ್ಚಿಸಿದೆ. ಬಜಿರಂದರ್ ಪಾಲ್ ವಿರುದ್ದ ಗಂಭೀರ ಆರೋಪ ಕೇಳಿಬಂದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕ್ರಮ ಕೈಗೊಳ್ಳುವಲ್ಲಿನ ವಿಳಂಬವು ನ್ಯಾಯಾಂಗ ವ್ಯವಸ್ಥೆಯಲ್ಲಿನ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹಲವರು ಟೀಕಿಸಿದ್ದಾರೆ.
ಬಜಿದಂರ್ ಸಿಂಗ್ ಸ್ವಯಂಘೋಷಿತ ಕ್ರೈಸ್ತ ಪಾದ್ರಿಯಾಗಿ ಗುರುತಿಸಿಕೊಂಡಿದ್ದಾರೆ. ಭಾರತದಲ್ಲಿ ಅದರಲ್ಲೂ ಪಂಜಾಬ್ ಸೇರಿದಂತೆ ಹಲವು ಭಾಗದಲ್ಲಿ ಕ್ರೈಸ್ತ ಮತ ಪ್ರಚಾರ ಮಾಡುತ್ತಿದ್ದಾನೆ. ಈತನ ವಿರುದ್ಧ ಮತಾಂತರದ ಆರೋಪವೂ ಇದೆ. ಜನರನ್ನು ವ್ಯಸನದಿಂದ ಹೊರಬರಲು ಉಪದೇಶ ಮಾಡುವುದಾಗಿ ಕೈಸ್ತ ಮತಕ್ಕೆ ಮತಾಂತರ ಮಾಡುತ್ತಿರುವ ಆರೋಪವೂ ಇದೆ.
2022ರಲ್ಲಿ 22 ವರ್ಷದ ಮಹಿಳೆಯೊಬ್ಬರು ಇದೇ ಬಜಿಂದರ್ ಸಿಂಗ್ ವಿರುದ್ದ ಗಂಭೀರ ಆರೋಪ ಮಾಡಿದ್ದರು. ಚರ್ಚ್‌ನಲ್ಲಿರುವ ಕ್ಯಾಬಿನ್‌ಗೆ ಕರೆಯಿಸಿಕೊಂಡು ಲೈಂಗಿಕವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಸ್ವಯಂಘೋಷಿತ ಕ್ರೈಸ್ತ ಪಾದ್ರಿ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ ಮತ್ತು ತನ್ನ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದರು. ಗಂಭೀರ ಆರೋಪ ಮಾಡಿದ್ದರೂ ಇದುವರೆಗೂ ಸೂಕ್ತ ತನಿಖೆ ನಡೆದಿಲ್ಲ, ಯಾವುದೇ ಕ್ರಮ ಕೈಗೊಂಡಿಲ್ಲ.
Bharat Jodo Yatra: ಹಿಂದೂ ದೇವರಿಗೆ ರಾಹುಲ್, ಪಾದ್ರಿ ಅವಮಾನ: ಭಾರತ್ ಜೋಡೋ ಯಾತ್ರೆಯಲ್ಲಿ ವಿವಾದ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ