ನಿತ್ಯಾನಂದನ ನಿಧನ ಸುದ್ದಿ ಅಲ್ಲಗೆಳೆದ ಕೈಲಾಸ, ಸ್ಪಷ್ಟನೆ ಬೆನ್ನಲ್ಲೇ ಹೆಚ್ಚಿದ ಅನುಮಾನ

ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ನಿಧನ ಅನ್ನೋ ಸುದ್ದಿ ಎಲ್ಲೆಡೆ ಹರಿಡಾದ ಬೆನ್ನಲ್ಲೇ ಇದೀಗ ಕೈಲಾಸ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ. ನಿತ್ಯಾನಂದ ಸಕ್ರಿಯವಾಗಿದ್ದಾರೆ, ಆರೋಗ್ಯವಾಗಿದ್ದಾರೆ. ಆದರೆ ಈ ರೀತಿ ಅವಮಾನಿಸವು ಕೆಲಸವನ್ನು ಸಹಿಸಲ್ಲ ಎಂದು ಎಚ್ಚರಿಕೆ ನೀಡಿದೆ. ಆದರೆ ಈ ಸ್ಪಷ್ಟನೆ ಇದೀಗ ಮತ್ತಷ್ಟು ಅನುಮಾನ ಹೆಚ್ಚಿಸಿದೆ. 
 


ಕೈಲಾಸ(ಏ.01) ಬಿಡದಿ ನಿತ್ಯಾನಂದ ಸ್ವಾಮಿ ಕುರಿತು ಇತ್ತೀಚೆಗೆ ಹಲವು ಊಹಪೋಹ ಸುದ್ದಿಗಳು ಹರಿದಾಡಿದೆ. ಈ ಪೈಕಿ ನಿತ್ಯಾನಂದ ನಿಧನ ಸುದ್ದಿಯೂ ಹರಿದಾಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ನಿತ್ಯಾನಂದ ನಿಧನ ಸುದ್ದಿ ಭಾರಿ ವೈರಲ್ ಆಗಿದೆ. ಈ ಸುದ್ದಿ ವೈರಲ್ ಆಗುತ್ತದ್ದಂತೆ ಇದೀಗ ನಿತ್ಯಾನಂದನ ಕೈಲಾಸದ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸ್ಪಷ್ಟನೆ ನೀಡಲಾಗಿದೆ. ನಿತ್ಯಾನಂದ ಸ್ವಾಮಿ ಆರೋಗ್ಯವಾಗಿದ್ದಾರೆ. ಇಷ್ಟೇ ಅಲ್ಲ ಸಕ್ರೀಯವಾಗಿ ಯುಗಾದಿ ಹಬ್ಬದಲ್ಲೂ ಪಾಲ್ಗೊಂಡಿದ್ದಾರೆ. ಸುಳ್ಳು ಸುದ್ದಿಗಳ ಮೂಲಕ ಹಿಂದೂ ಸರ್ವೋಚ್ಚ ಪೀಠಾಧಿಪತಿಗೆ ಅವಮಾನ ಮಾಡಲಾಗುತ್ತಿದೆ. ಇದನ್ನು ಸಹಿಸಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೆ ಈ ಸ್ಪಷ್ಟನೆ ಅನುಮಾನ ಹೆಚ್ಚಿಸಿದೆ.

ನಿತ್ಯಾನಂದನ ಅಧಿಕೃತ ಕೈಲಾಶ ಪೇಜ್ ಮೂಲಕ ಈ ಸ್ಪಷ್ಟನೆ ನೀಡಲಾಗಿದೆ. ಇದೇ ವೇಳೆ ದೊಡ್ಡ ಸಂದೇಶ ನೀಡಲಾಗಿದೆ. ಆದರೆ ಈ ಸ್ಪಷ್ಟನೆ ವೇಳೆ ಬಳಸಿರುವ ಫೋಟೋ 15 ವರ್ಷ ಹಳೆಯ ಪೋಟೋ ಆಗಿದೆ. ನಿತ್ಯಾನಂದ ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟನೆ ನೀಡುವಾಗ ಇತ್ತೀಚಿನ ಫೋಟೋ ಬಳಸಬೇಕಿತ್ತು. ಆದರೆ 15 ವರ್ಷ ಹಳೇ ಫೋಟೋವನ್ನು ಬಳಸಿದ್ದು ಯಾಕೆ ಅನ್ನೋ ಅನುಮಾನ ಶುರುವಾಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಲವು ಪ್ರಶ್ನೆ ಎದ್ದಿದೆ.

Latest Videos

ಅಮೆಜಾನ್​ ಕಾಡು ಕಬ್ಜಾಗೆ ನಿತ್ಯಾನಂದನ ಮಹಾಸಂಚು; ಬುಡಕಟ್ಟು ಜನರಿಗೆ ದೋಖಾ, ಸರ್ಕಾರಕ್ಕೆ ಮೋಸ!

ಕೆಲ ಹಿಂದೂ ವಿರೋಧಿ ಮಾಧ್ಯಮಗಳು, ಸೋಶಿಯಲ್ ಮೀಡಿಯಾ ಖಾತೆಗಳು ಸರ್ವೋಚ್ಚ ಹಿಂದೂ ಪೀಠಾಧಿಪತಿ ನಿತ್ಯಾನಂದ ಸ್ವಾಮಿ ಇಹಲೋಕ ತ್ಯಜಿಸಿದ್ದಾರೆ ಎಂದು ವರದಿ ಮಾಡಿದೆ. ಇದು ಸತ್ಯಕ್ಕೆ ದೂರವಾದ ಮಾತು. ಇಷ್ಟೇ ಅಲ್ಲ ಅವಮಾನಿಸುವ ಹಾಗೂ ನಿಯಮ ಬಾಹಿರ ಕೆಲಸವಾಗಿದೆ. ಇದನ್ನು ಸಹಿಸುವುದಿಲ್ಲ ಎಂದು ಸ್ಪಷ್ಟನೆಯಲ್ಲಿ ಉಲ್ಲೇಖಿಸಲಾಗಿದೆ.

ಕೈಲಾಸ ಈ ಮೂಲಕ ಸ್ಪಷ್ಟಪಡಿಸುವುದೇನೆಂದರೆ, ನಿತ್ಯಾನಂದ ಸಂಪೂರ್ಣ ಆರೋಗ್ಯವಾಗಿದ್ದಾರೆ. ಸಕ್ರಿಯವಾಗಿ ಎಲ್ಲಾ ಕಾರ್ಯಕ್ರಗಳಲ್ಲಿ ಭಾಗವಹಿಸುತ್ತಿದ್ದಾರೆ. ಮಾರ್ಚ್ 30 ರಂದು ನಿತ್ಯಾನಂದ ಸ್ವಾಮಿ ಬರೋಬ್ಬರಿ 2 ಮಿಲಿಯನ್ ಹಿಂದೂ ಭಕ್ತರಿಗೆ ದರ್ಶನ ನೀಡಿ ಆಶೀರ್ವಾದ ಮಾಡಿದ್ದಾರೆ. ಈ ಕುರಿತು ಯೂಟ್ಯೂಬ್ ವಿಡಿಯೋ ಒಂದನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ನಿತ್ಯಾನಂದ ಭಕ್ತರಿಗೆ ಆಶೀರ್ವಚನ ನೀಡುತ್ತಿರುವ ದೃಶ್ಯವಿದೆ.

ನಿತ್ಯಾನಂದ ಸ್ವಾಮಿ ವಿರುದ್ದ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಸ್ವಾಮಿಗೆ ಅಪಮಾನಿಸುವ ಹಾಗೂ ಜನಪ್ರಿಯತೆಯನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಇದು ಕೋಟ್ಯಾಂತರ ಹಿಂದೂಗಳಿಗೆ ಮಾಡಿದ ಅಪಮಾನವಾಗಿದೆ.ಕಾನೂನಿನ ಉಲ್ಲಂಘನೆಯಾಗಿದೆ. ಸುಳ್ಳು ಸುದ್ದಿ ಹರಡುವ ಮೂಲಕ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದೆ. ಈಗಾಗಲೇ ನಿತ್ಯಾನಂದ ಸ್ವಾಮಿ ಮೇಲೆ 70 ಬಾರಿ ಹತ್ಯೆ ಪ್ರಯತ್ನ ನಡೆದಿದೆ. ಆದರೆ ಪ್ರತಿ ಪ್ರಯತ್ನವೂ ವಿಫಲವಾಗಿದೆ. ಇದೀಗ ಸುಳ್ಳು ಸುದ್ದಿ, ನಿಯಮ ಬಾಹಿರವಾಗಿ ಕೆಲ ಹಿತಾಸಕ್ತಿಗಳು ಕೆಲಸ ಮಾಡುತ್ತಿದೆ ಎಂದು ಕೈಲಾಸ ತನ್ನ ಅಧಿಕೃತ ಸ್ಪಷ್ಟನೆಯಲ್ಲಿ ಹೇಳಿದೆ.

ಸುಳ್ಳಿನ ಕಂತೆ, ನಿಯಮ ವಿರುದ್ಧವಾಗಿ, ಮಾನ ನಷ್ಟವಾಗಿ ಸುದ್ದಿಗಳನ್ನು ಪ್ರಕಟಿಸಿ ಹಿಂದೂ ವಿರೋಧವನ್ನು ಹೆಚ್ಚಿಸುವ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುವುದು ಕಾನೂನು ಉಲ್ಲಂಘನೆಯಾಗಿದೆ. ಈ ನಡೆಯನ್ನು ಕೈಲಾಸ ಬಲವಾಗಿ ಖಂಡಿಸುತ್ತದೆ ಎಂದು ಸ್ಪಷ್ಟನೆಯಲ್ಲಿ ಹೇಳಿದೆ.

ಅಮೆಜಾನ್ ಕಾಡಲ್ಲಿ ನಿತ್ಯಾನಂದ ಭೂ ಕಬಳಿಕೆ: ದೆಹಲಿಗಿಂತ 2.6, ಮುಂಬೈಗಿಂತ 6.5, ಬೆಂಗಳೂರಿಗಿಂತ 5.3 ಪಟ್ಟು ದೊಡ್ಡದು!

click me!