
ಅಮೆಜಾನ್ ಕಾಡು ಕಬ್ಜಾಗೆ ನಿತ್ಯಾನಂದನ ಮಹಾಸಂಚು; ಬುಡಕಟ್ಟು ಜನರಿಗೆ ದೋಖಾ, ಸರ್ಕಾರಕ್ಕೆ ಮೋಸ!
ನಿತ್ಯಾನಂದನ ಈ ಮಾಸ್ಟರ್ ಪ್ಲ್ಯಾನ್ಗೆ ಬೊಲಿವಿಯಾ ಸರ್ಕಾರ ಬೆರಗಾಗಿತ್ತು. ಈತನನ್ನು ಸುಮ್ಮನೆ ಬಿಟ್ರೆ ದೇಶವನ್ನೇ ಕೊಂಡುಕೊಳ್ಳುತ್ತಾನೆ ಎಂದುಕೊಂಡು ನಿತ್ಯಾನಂದನಿಗೆ ಬರೋಬ್ಬರಿ ಬುದ್ದಿ ಕಲಿಸಿದೆ. ನಿತ್ಯಾನಂದನ ತಿರ್ಮಾನಕ್ಕೆ ಬೊಲಿವಿಯಾ ಸರ್ಕಾರ ಮಾಡಿದ್ದೇನು ಅನ್ನೋದನ್ನು ಇಲ್ಲಿ ನೋಡೋಣ.
ಇತ್ತೀಚೆಗೆ ಯಾವ ಸುದ್ದಿಯೂ ಇಲ್ಲದೇ ಸೈಲೆಂಟಾಗಿದ್ದ ನಿತ್ಯಾನಂದ ಈಗ ಮತ್ತೆ ಸುದ್ದಿಯಲ್ಲಿದ್ದಾನೆ. ನಿತ್ಯಾನಂದನ ಮತ್ತೊಂದು ಹಗರಣ ಈಗ ಬಯಲಾಗಿದೆ. ನಿತ್ಯಾನಂದ ಬಹುದೊಡ್ಡ ಹಗರಣಕ್ಕೆ ಸಂಚು ಹೂಡಿದ್ದ. ಅಮೆಜಾನ್ ಕಾಡಿನಲ್ಲಿ ತನ್ನದೇ ಕೈಲಾಸ ಸೃಷ್ಟಿಮಾಡಲು ಮುಂದಾಗಿದ್ದ. ಬೊಲಿವಿಯಾ ದೇಶದ ಬುಡಕಟ್ಟು ಜನರನ್ನು ಮರಳು ಮಾಡಿ ಭೂಮಿ ಕಬಳಿಸೋ ಪ್ಲ್ಯಾನ್ ಮಾಡಿದ್ದ. ಆದ್ರೆ ನಿತ್ಯಾನಂದನ ಹುಚ್ಚಾಟ ತಿಳಿದ ಬೊಲಿವಿಯಾ ಸರ್ಕಾರ ಸ್ವಯಂ ಘೋಷಿತ ಕೈಲಾಸಪತಿಯ ಕನಸಿಗೆ ತಣ್ಣೀರು ಎರಚಿದೆ. ಆ ಕುರಿತ ಒಂದು ವರದಿಯನ್ನು ಈ ವಿಶೇಷ ಕಾರ್ಯಕ್ರಮದಲ್ಲಿ ನೋಡೋಣ.