ಉಕ್ರೇನ್ ಮೇಲೆ ಸಮರ ಸಾರಲು ತುದಿಗಾಲಿನಲ್ಲಿ ನಿಂತಿರುವ ಬಲಾಢ್ಯ ರಷ್ಯಾ, ಪುಟ್ಟದ ರಾಷ್ಟ್ರದ ಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ಸೇನೆ ಜಮಾವಣೆ ಮಾಡಿರುವುದಕ್ಕೆ ಸಂಬಂಧಿಸಿದ ಉಪಗ್ರಹ ಚಿತ್ರವೊಂದು ಬಿಡುಗಡೆಯಾಗಿದೆ.
ನವದೆಹಲಿ (ಫೆ.14): ಉಕ್ರೇನ್ (Ukraine) ಮೇಲೆ ಸಮರ ಸಾರಲು ತುದಿಗಾಲಿನಲ್ಲಿ ನಿಂತಿರುವ ಬಲಾಢ್ಯ ರಷ್ಯಾ (Russia), ಪುಟ್ಟದ ರಾಷ್ಟ್ರದ ಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ಸೇನೆ ಜಮಾವಣೆ ಮಾಡಿರುವುದಕ್ಕೆ ಸಂಬಂಧಿಸಿದ ಉಪಗ್ರಹ ಚಿತ್ರವೊಂದು (Satellite Pic) ಬಿಡುಗಡೆಯಾಗಿದೆ. ಬೆಲಾರಸ್, ಕ್ರಿಮಿಯಾ ಹಾಗೂ ಪಶ್ಚಿಮ ರಷ್ಯಾದಿಂದ ಸೆರೆ ಹಿಡಿಯಲಾದ ಉಪಗ್ರಹ ಚಿತ್ರಗಳು ಇವಾಗಿವೆ. ಮ್ಯಾಕ್ಸರ್ (Maxar) ಎಂಬ ಸಂಸ್ಥೆ ಈ ಚಿತ್ರಗಳನ್ನು ಸಂಗ್ರಹಿಸಿದೆ. ಕ್ರಿಮಿಯಾವೊಂದರಲ್ಲೇ 550ಕ್ಕೂ ಯೋಧರ ಟೆಂಟ್‌ಗಳು, ನೂರಾರು ವಾಹನಗಳು ಉಪಗ್ರಹ ಚಿತ್ರದಲ್ಲಿ ಕಂಡುಬರುತ್ತವೆ.
ಉಕ್ರೇನ್ ಹಾಗೂ ರಷ್ಯಾ ನಡುವೆ ಬುಧವಾರದಿಂದ ಯುದ್ಧ ಆರಂಭವಾಗಬಹುದು ಎಂದು ಶನಿವಾರ ಮಾಧ್ಯಮ ವರದಿಗಳು ಹೇಳಿದ್ದವು. ಈ ನಡುವೆ, ಒಂದು ವೇಳೆ ರಷ್ಯಾ ದಾಳಿ ನಡೆಸಿದ್ದೇ ಆದಲ್ಲಿ ಅದು ಭಾರೀ ವಿನಾಶಕ್ಕೆ ಕಾರಣವಾಗಲಿದೆ. ಅಮರಿಕವು ರಷ್ಯಾ ಜತೆ ಸಂಬಂಧ ಕಡಿದುಕೊಳ್ಳಲಿದೆ ಎಂದು ಶನಿವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ 1 ಗಂಟೆಗಳ ಸುದೀರ್ಘ ಮಾತುಕತೆ ವೇಳೆ ಎಚ್ಚರಿಸಿದ್ದರು.
Russia Ukraine Crisis: ಉಕ್ರೇನ್‌ನಿಂದ ದೇಶಕ್ಕೆ ಮರಳಿ: ಅಮೆರಿಕನ್ನಿಗರಿಗೆ ಬೈಡೆನ್ ಕರೆ
ಯಾವುದೇ ಕ್ಷಣ ಉಕ್ರೇನ್ ಮೇಲೆ ರಷ್ಯಾ ದಾಳಿ ಸಂಭವ: ನೆರೆಯ ಉಕ್ರೇನ್ (Ukraine) ದೇಶದ ಮೇಲೆ ರಷ್ಯಾ (Russia) ಯಾವುದೇ ಸಮಯದಲ್ಲಿ ದಾಳಿ ನಡೆಸಬಹುದು. ಬಹುತೇಕ ಬುಧವಾರವೇ ಯುದ್ಧ ಆರಂಭವಾಗುವ ಸಾಧ್ಯತೆ ಇದೆ ಎಂದು ಅಮೆರಿಕ (America) ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿವೆ. ಉಕ್ರೇನ್ ಬಿಕ್ಕಟ್ಟು ಇತ್ಯರ್ಥ ಸಂಬಂಧ ಶನಿವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಮತ್ತು ರಷ್ಯಾ ಅಧ್ಯಕ್ಷ ಪುಟಿನ್ (Putin) 1 ಗಂಟೆಗಳ ಸುದೀರ್ಘ ಮಾತುಕತೆ ನಡೆಸಿದರೂ, ಶಾಂತಿಯ ಸುಳಿವು ಸಿಕ್ಕಿಲ್ಲ.
ಒಂದು ವೇಳೆ ರಷ್ಯಾ ದಾಳಿ ನಡೆಸಿದ್ದೇ ಆದಲ್ಲಿ ಅದು ಭಾರೀ ವಿನಾಶಕ್ಕೆ ಕಾರಣವಾಗಲಿದೆ. ಭಾರೀ ಪ್ರಮಾಣದಲ್ಲಿ ನಾಗರಿಕರ ಸಾವಿಗೆ ಕಾರಣವಾಗಬಹುದು. ಪರಿಸ್ಥಿತಿಯ ಏನೇ ಇದ್ದರೂ ಉಕ್ರೇನ್ ಜೊತೆ ಅಮೆರಿಕ ರಾಜತಾಂತ್ರಿಕತೆ ಮುಂದುವರಿಸುತ್ತದೆ. ಅದೇ ರೀತಿ ಅಲ್ಲಿ ಯಾವುದೇ ರೀತಿಯ ಸಲ್ಲಿವೇಶವನ್ನು ಎದುರಿಸಲೂ ಸಿದ್ಧವಾಗಿದೆ ಎಂದು ಮಾತುಕತೆ ವೇಳೆ ಬೈಡೆನ್ ಸ್ಪಷ್ಪಡಿಸಿದ್ದಾರೆ ಎಂದು ಶ್ವೇತಭವನ ಹೇಳಿಕೆ ನೀಡಿದೆ.
ಈ ನಡುವೆ ಯುದ್ಧ ಭೀತಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ಉಕ್ರೇನ್ ರಾಜಧಾನಿ ಕೀವ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಖಾಲಿ ಮಾಡಲು ಅಮೆರಿಕ ಆರಂಭಿಸಿದೆ. ರಷ್ಯಾ ಈಗಾಗಲೇ ಉಕ್ರೇನ್ ಗಡಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಯೋಧರ ನಿಯೋಜನೆ ಮಾಡಿದೆ. ಮತ್ತೊಂದೆಡೆ ನ್ಯಾಟೋ ಪಡೆಗಳು ಕೂಡಾ ಉಕ್ರೇನ್ ನೆರವಿಗೆ ಧಾವಿಸಲು ಸಜ್ಜಾಗಿ ನಿಂತಿವೆ.
ಉಕ್ರೇನ್‌ನಿಂದ ದೇಶಕ್ಕೆ ಮರಳಿ: ರಷ್ಯಾ-ಉಕ್ರೇನ್ (Russia-Ukraine) ನಡುವೆ ಯುದ್ಧದ ಭೀತಿ ಹೆಚ್ಚುತ್ತಿರುವ ನಡುವೆಯೇ, ಉಕ್ರೇನ್ ದೇಶದಲ್ಲಿರುವ ಎಲ್ಲ ಅಮೆರಿಕನ್ನರೂ ಕೂಡಲೇ ಸ್ವದೇಶಕ್ಕೆ ಮರಳಬೇಕೆಂದು ಅಮೆರಿಕ ಸೂಚಿಸಿದೆ. ಒಂದು ವೇಳೆ ರಷ್ಯಾ ಉಕ್ರೇನ್ ಮೇಲೆ ಆಕ್ರಮಣಕ್ಕೆ ಮುಂದಾದರೆ ಅಮೆರಿಕ ಸೇನೆ ರಕ್ಷಣಾ ಕಾರ‍್ಯಕ್ಕೆ ಧಾವಿಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
Ukraine Russia Tension : ಯುದ್ಧದ ಆತಂಕ ಹೆಚ್ಚಿಸಿದ ರಷ್ಯಾದ ಸಮರಾಭ್ಯಾಸ
ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಸುದ್ದಿಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ವೇಳೆ ಈ ಸೂಚನೆ ನೀಡಿದ್ದಾರೆ. ‘ವಿಶ್ವದ ಅತಿದೊಡ್ಡ ಸೇನೆ ಹೊಂದಿರುವ ದೇಶದ ಜೊತೆಗಿನ ಯುದ್ಧದ ಸಾಧ್ಯತೆ ಇರುವ ಸನ್ನಿವೇಶ. ಯಾವುದೇ ಸಂದರ್ಭದಲ್ಲಿ ಯುದ್ಧ ಆರಂಭವಾಗಬಹುದು’ ಎಂದು ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ರಷ್ಯಾ-ಉಕ್ರೇನ್ ಗಡಿಯಲ್ಲಿ ಉದ್ವಿಗ್ನ ಮಾತಾವರಣ ನಿರ್ಮಾಣವಾಗಿದ್ದು, ರಷ್ಯಾ 1.30 ಲಕ್ಷಕ್ಕೂ ಹೆಚ್ಚು ಸೈನಿಕರು, ಕ್ಷಿಪಣಿಗಳು ಮತ್ತಿತರ ಯುದ್ಧ ಸಾಮಗ್ರಿಗಳನ್ನು ಉಕ್ರೇನ್ ಗಡಿಯಲ್ಲಿ ನಿಯೋಜಿಸುತ್ತಿದೆ ಎಂದು ವರದಿಯಾಗುತ್ತಿದೆ. ಆದರೆ ರಷ್ಯಾ ಇದನ್ನು ನಿರಾಕರಿಸುತ್ತಿದೆ.