ಡ್ಯೂಟಿ ಫ್ರೀ ಏರಿಯಾಗೆ ಹೋಗಬೇಡಿ: ಸಿಬ್ಬಂದಿಗೆ Air India ಸೂಚನೆ!

Kannadaprabha News   | Asianet News
Published : Feb 14, 2022, 03:10 AM IST
ಡ್ಯೂಟಿ ಫ್ರೀ ಏರಿಯಾಗೆ ಹೋಗಬೇಡಿ: ಸಿಬ್ಬಂದಿಗೆ Air India ಸೂಚನೆ!

ಸಾರಾಂಶ

ವಿಮಾನ ಸೇವೆ ಸುಧಾರಣೆ ಮತ್ತು ವಿಮಾನ ಹಾರಾಟದಲ್ಲಾಗುತ್ತಿರುವ ವಿಳಂಬ ತಪ್ಪಿಸಲು, ಇತ್ತೀಚೆಗೆ ಟಾಟಾ ವಶವಾಗಿರುವ ಏರ್‌ ಇಂಡಿಯಾ ವಿಮಾನ ಸಂಸ್ಥೆ ತನ್ನ ಕ್ಯಾಬಿನ್‌ ಸಿಬ್ಬಂದಿಗೆ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ನವದೆಹಲಿ (ಫೆ.14): ವಿಮಾನ ಸೇವೆ ಸುಧಾರಣೆ ಮತ್ತು ವಿಮಾನ ಹಾರಾಟದಲ್ಲಾಗುತ್ತಿರುವ ವಿಳಂಬ ತಪ್ಪಿಸಲು, ಇತ್ತೀಚೆಗೆ ಟಾಟಾ (Ratan Tata) ವಶವಾಗಿರುವ ಏರ್‌ ಇಂಡಿಯಾ (Air India) ವಿಮಾನ ಸಂಸ್ಥೆ ತನ್ನ ಕ್ಯಾಬಿನ್‌ ಸಿಬ್ಬಂದಿಗೆ (Cabin Crew) ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

‘ಡ್ಯೂಟಿ ಫ್ರೀ ಶಾಪ್‌ಗಳ ಭೇಟಿಗೆ ಹೋಗಲೇಬಾರದು. ಕಸ್ಟಮ್ಸ್‌ ಮತ್ತು ಭದ್ರತೆ ಪರಿಶೀಲನೆಯಲ್ಲಿ ಆಗುವ ಸಮಯ ವ್ಯರ್ಥ ತಪ್ಪಿಸಲು ಸಿಬ್ಬಂದಿ ಕಡಿಮೆ ಆಭರಣ ಧರಿಸಬೇಕು. ಅತಿಥಿಗಳು ವಿಮಾನದ ಪ್ರವೇಶಕ್ಕೆ ಮುನ್ನ ಸಿಬ್ಬಂದಿ ಏನನ್ನೂ ತಿನ್ನಬಾರದು ಮತ್ತು ಕುಡಿಯಬಾರದು’ ಎಂದು ಸೂಚಿಸಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಶಾಪಿಂಗ್‌ ಮಾಲ್‌ಗಳಲ್ಲಿ ರಿಯಾಯತಿ ದರದ ವಸ್ತುಗಳು ಸಿಗುತ್ತವೆ.

ಕೆಲಸದ ಅವಧಿಯಲ್ಲಿ ಈ ಸ್ಥಳಗಳಿಗೆ ಭೇಟಿ ನೀಡುವ ಸಿಬ್ಬಂದಿ ವಸ್ತುಗಳನ್ನು ಖರೀದಿಸಿ, ಅವುಗಳನ್ನು ಅನ್ಯರಿಗೆ ಹೆಚ್ಚುವರಿ ದರಕ್ಕೆ ಮಾರಾಟ ಮಾಡುತ್ತಾರೆ ಎಂಬ ಆರೋಪವಿದೆ. ಅಲ್ಲದೆ ಇದರಿಂದ ವಿಮಾನ ಹಾರಾಟವು ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಏರ್‌ ಇಂಡಿಯಾ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಏರ್‌ ಇಂಡಿಯಾ ಇಂದು ಟಾಟಾಗೆ ಅಧಿಕೃತ ಹಸ್ತಾಂತರ

ಏರ್‌ ಇಂಡಿಯಾ ಪ್ರಯಾಣಿಕರೊಂದಿಗೆ ರತನ್ ಟಾಟಾ ಮಾತು: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಈಗ ಟಾಟಾ ಸಮೂಹದ ಪಾಲಾಗಿದೆ. ಜನವರಿ 27 ರಂದು, ಟಾಟಾ ಗ್ರೂಪ್ ಸರ್ಕಾರದಿಂದ ಏರ್ ಇಂಡಿಯಾದ ಎಲ್ಲಾ ಹಕ್ಕುಗಳನ್ನು ಪಡೆದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ರತನ್ ಟಾಟಾ ಅವರ 18 ಸೆಕೆಂಡುಗಳ ಆಡಿಯೊ ಕ್ಲಿಪ್ ಅನ್ನು ಇಂದು ಏರ್ ಇಂಡಿಯಾದ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ. 

ಇದರಲ್ಲಿ ಅವರು ಏರ್ ಇಂಡಿಯಾದ ಪ್ರಯಾಣಿಕರೊಂದಿಗೆ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ. ಈ ಸಂದೇಶ ರತನ್ ಟಾಟಾ ಅವರ ಧ್ವನಿಯಲ್ಲಿ ಒಂದು ರೀತಿಯ ಸ್ವಾಗತ ಸಂದೇಶವಾಗಿದೆ. ಇದರಲ್ಲಿ ಅವರು ಎಲ್ಲಾ ಪ್ರಯಾಣಿಕರನ್ನು ಸ್ವಾಗತಿಸಿದ್ದಾರೆ. ಈ ಕೆಲವು ಸೆಕೆಂಡುಗಳ ಸಂದೇಶದಲ್ಲಿ ಅವರು ಏರ್ ಇಂಡಿಯಾದ ಪ್ರಯಾಣಿಕರಿಗೆ ಏನು ಹೇಳಿದ್ದಾರೆ? 

ಆಡಿಯೋ ಕ್ಲಿಪ್‌ನಲ್ಲಿ ಏನು ಹೇಳಿದ್ದಾರೆ?: ಅವರು ತಮ್ಮ 18 ಸೆಕೆಂಡ್ ಆಡಿಯೋ ಕ್ಲಿಪ್‌ನಲ್ಲಿ ಏರ್ ಇಂಡಿಯಾದ ಪ್ರಯಾಣಿಕರನ್ನು ಸ್ವಾಗತಿಸಿದರು. ಏರ್ ಇಂಡಿಯಾದಲ್ಲಿ ಎಲ್ಲಾ ಪ್ರಯಾಣಿಕರಿಗೆ ಸ್ವಾಗತ ಎಂದು ಹೇಳಿದರು. ಪ್ರಯಾಣಿಕರ ಎಲ್ಲಾ ಅನುಕೂಲತೆಗಳು ಮತ್ತು ಸೇವೆಗಳನ್ನು ನೋಡಿಕೊಳ್ಳಲು ಏರ್ ಇಂಡಿಯಾ ಉದ್ಯೋಗಿಗಳೊಂದಿಗೆ ಕೆಲಸ ಮಾಡಲು ಟಾಟಾ ಗ್ರೂಪ್ ತುಂಬಾ ಉತ್ಸುಕವಾಗಿದೆ ಮತ್ತು ದೇಶದ ಎಲ್ಲಾ ವಿಮಾನ ಪ್ರಯಾಣಿಕರಿಗೆ ವಿಮಾನಯಾನವನ್ನು ನೆಚ್ಚಿನ ಯಾನವನ್ನಾಗಿಸುತ್ತದೆ. ಟಾಟಾ ಸಮೂಹದ ಪ್ರಮುಖ ಕಂಪನಿಯಾದ ಟಾಟಾ ಸನ್ಸ್‌ನ ಘಟಕವಾದ ಟೇಲ್ಸ್ ಪ್ರೈವೇಟ್ ಲಿಮಿಟೆಡ್ ಈಗ ಏರ್ ಇಂಡಿಯಾವನ್ನು ನಿರ್ವಹಿಸಲಿದೆ.

ಟಾಟಾ ಸನ್ಸ್ ಏರ್ ಇಂಡಿಯಾ ಉದ್ಯೋಗಿಗಳಿಗೆ ಪತ್ರ: ಏರ್ ಇಂಡಿಯಾ ಅಧಿಕೃತವಾಗಿ ಟಾಟಾ ಗ್ರೂಪ್‌ಗೆ ಸೇರ್ಪಡೆಗೊಂಡ ನಂತರ, ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಏರ್ ಇಂಡಿಯಾ ಉದ್ಯೋಗಿಗಳಿಗೆ ಪತ್ರ ಬರೆದಿದ್ದಾರೆ. ಈಗ ಇಡೀ ದೇಶದ ಕಣ್ಣು ಏರ್ ಇಂಡಿಯಾ ಮತ್ತು ಟಾಟಾ ಗ್ರೂಪ್ ಮೇಲೆ ನೆಟ್ಟಿದೆ ಎಂದು ಹೇಳಿದರು. ಅಷ್ಟಕ್ಕೂ ಟಾಟಾ ಗ್ರೂಪ್ ಮತ್ತು ಏರ್ ಇಂಡಿಯಾ ಯಾವ ರೀತಿಯಲ್ಲಿ ದೇಶದ ಜನತೆಗೆ ಸೇವೆ ಸಲ್ಲಿಸಲು ಹೊರಟಿವೆ ಎಂಬುದು ದೇಶದ ಜನರ ನಡುವೆಯೇ ನಡೆಯುತ್ತಿದೆ. 

5G Rollout Concerns: USನ ಹಲವು ನಗರಗಳಿಗೆ ಏರ್ ಇಂಡಿಯಾ ಸೇರಿದಂತೆ ಇತರ ವಿಮಾನಗಳು ರದ್ದು!

ಏರ್ ಇಂಡಿಯಾವನ್ನು ವಿಶ್ವದ ಅತ್ಯುತ್ತಮ ವಿಮಾನಯಾನ ಸಂಸ್ಥೆಯನ್ನಾಗಿ ಮಾಡಲು ಟಾಟಾ ಗ್ರೂಪ್ ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ ಮತ್ತು ಅದನ್ನು ಮುಂದುವರಿಸಲಿದೆ ಎಂದು ಅವರು ಹೇಳಿದರು. ಏರ್ ಇಂಡಿಯಾದ ಚಿನ್ನದ ಅವಧಿ ಆರಂಭವಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ವಿಮಾನಯಾನ ಸಂಸ್ಥೆಯ ಉದ್ಯೋಗಿಗಳನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ