ಇನ್ಮುಂದೆ ದೇಶದ್ರೋಹ ಕಾನೂನು ರದ್ದು; ಬ್ರಿಟಿಷರ ಕಾಲದ ಐಪಿಸಿ, ಸಿಆರ್‌ಪಿಸಿ ಸೇರಿ 3 ಕಾಯ್ದೆ ಬದಲು: ಅಮಿತ್‌ ಶಾ ಮಹತ್ವದ ಘೋಷಣೆ

By BK AshwinFirst Published Aug 11, 2023, 2:06 PM IST
Highlights

ದೇಶದ್ರೋಹ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ (IPC), ಕ್ರಿಮಿನಲ್ ಪ್ರೊಸೀಜರ್ ಕೋಡ್  (CrPC) ಮತ್ತು ಭಾರತೀಯ ಎವಿಡೆನ್ಸ್‌ ಕಾಯ್ದೆಯನ್ನು ಭಾರತೀಯ ನ್ಯಾಯ ಸಂಹಿತೆ ಬದಲಿಸುತ್ತದೆ ಎಂದು ಅಮಿತ್‌ ಶಾ ಘೋಷಣೆ ಹೊರಡಿಸಿದ್ದಾರೆ.

ನವದೆಹಲಿ (ಆಗಸ್ಟ್‌ 11, 2023): ಮುಂಗಾರು ಅಧಿವೇಶನದ ಕೊನೆಯ ದಿನದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಕೆಲ ವರ್ಷಗಳಿಂದ ವಿವಾದಾತ್ಮಕ ಎನಿಸಿದ್ದ ದೇಶದ್ರೋಹ ಕಾನೂನನ್ನು ರದ್ದು ಮಾಡಲಾಗುವುದು ಎಂದು ಅಮಿತ್‌ ಶಾ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ, ಭಾರತದ ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು ಸಮಗ್ರವಾಗಿ ಪರಿಷ್ಕರಿಸುವ ಉದ್ದೇಶದಿಂದ ಹೊಸ ಮಸೂದೆಯನ್ನು ಮಂಡಿಸಿದರು. 

ಪ್ರಸ್ತುತ ಮುಂಗಾರು ಅಧಿವೇಶನದ ಕೊನೆಯ ದಿನ ಅಮಿತ್‌ ಶಾ ಈ ಘೋಷಣೆ ಹೊರಡಿಸಿದ್ದು, ಈ ಉಪಕ್ರಮದ ಅಡಿಯಲ್ಲಿ, ಭಾರತೀಯ ದಂಡ ಸಂಹಿತೆ (IPC), ಕ್ರಿಮಿನಲ್ ಪ್ರೊಸೀಜರ್ ಕೋಡ್  (CrPC) ಮತ್ತು ಭಾರತೀಯ ಎವಿಡೆನ್ಸ್‌ ಕಾಯ್ದೆಯನ್ನು ಭಾರತೀಯ ನ್ಯಾಯ ಸಂಹಿತೆ ಬದಲಿಸುತ್ತದೆ ಎಂದು ತಿಳಿದುಬಂದಿದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ ಅನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಎಂಬ ಕಾನೂನಾಗಿ ಬದಲಾಯಿಸಲಾಗುತ್ತದೆ. ಹಾಗೆ, ಭಾರತೀಯ ಎವಿಡೆನ್ಸ್‌ ಕಾಯ್ದೆಯನ್ನು ಭಾರತೀಯ ಸಾಕ್ಷ್ಯ ಕಾಯ್ದೆ ಎಂದು ಬದಲಾಯಿಸಲಾಗುತ್ತದೆ. ಅಲ್ಲದೆ, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳನ್ನು ಪರಿಹರಿಸಲು ನವೀಕರಿಸಿದ ಕಾನೂನನ್ನು ಸ್ಥಾಪಿಸುವುದು ಈ ಮಸೂದೆಯ ಪ್ರಾಥಮಿಕ ಉದ್ದೇಶವಾಗಿದೆ ಎಂದೂ ಅಮಿತ್‌ ಶಾ ತಿಳಿಸಿದ್ದಾರೆ. 

ಇದನ್ನು ಓದಿ: ವಿಪಕ್ಷದ ಪ್ರಶ್ನೆಗಳಿಗೆ ಮೋದಿ ಸಿಡಿಗುಂಡು: ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿಗೆ ಹೀನಾಯ ಸೋಲು

ಈ ಸಂಬಂಧ ಮಾತನಾಡಿದ ಅಮಿತ್‌ ಶಾ, "1860 ರಿಂದ 2023 ರವರೆಗೆ, ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಬ್ರಿಟಿಷರು ಮಾಡಿದ ಕಾನೂನಿನಂತೆ ಕಾರ್ಯನಿರ್ವಹಿಸಿತು. ಈ ಹಿನ್ನೆಲೆ ಈ 3 ಕಾನೂನುಗಳನ್ನು ಬದಲಾಯಿಸಲಾಗುವುದು ಮತ್ತು ದೇಶದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯಾಗಲಿದೆ" ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

‘’ಯಾರು, ಉದ್ದೇಶಪೂರ್ವಕವಾಗಿ ಅಥವಾ ಗೊತ್ತಿದ್ದೇ ಆಗಲಿ, ಪದಗಳಿಂದ, ಮಾತನಾಡುವ ಅಥವಾ ಬರೆಯುವ ಮೂಲಕ, ಅಥವಾ ಚಿಹ್ನೆಗಳ ಮೂಲಕ, ಅಥವಾ ಗೋಚರ ಪ್ರಾತಿನಿಧ್ಯದಿಂದ, ಅಥವಾ ಎಲೆಕ್ಟ್ರಾನಿಕ್ ಸಂವಹನದಿಂದ ಅಥವಾ ಹಣಕಾಸಿನ ವಿಧಾನಗಳ ಮೂಲಕ, ಅಥವಾ ಇತರ ರೀತಿಯಲ್ಲಿ, ಪ್ರಚೋದಿಸುವ ಅಥವಾ ಪ್ರಯತ್ನಿಸುವ, ಪ್ರತ್ಯೇಕತೆ ಅಥವಾ ಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳು, ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಉತ್ತೇಜಿಸುವುದು ಅಥವಾ ಭಾರತದ ಸಾರ್ವಭೌಮತೆ ಅಥವಾ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುತ್ತದೆ; ಅಥವಾ ಅಂತಹ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅಥವಾ ಮಾಡಿದರೆ ಅವರಿಗೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ದಂಡಕ್ಕೆ ಗುರಿಯಾಗಬಹುದು. " ಎಂದು ದೇಶದ್ರೋಹ ಕಾನೂನು ಹೇಳುತ್ತದೆ.

ಇದನ್ನೂ ಓದಿ: HAL ಮುಳುಗುತ್ತಿದೆ ಎಂದು ವಿಕ್ಷಗಳು ಟೀಕಿಸಿದ್ದವು; ಇಂದು ರಾಷ್ಟ್ರದ ಹೆಮ್ಮೆಯಾಗಿದೆ: ಮೋದಿ

1860 ರ ಭಾರತೀಯ ದಂಡ ಸಂಹಿತೆ (IPC), 1973 ರ ಕ್ರಿಮಿನಲ್ ಪ್ರೊಸೀಜರ್ ಸಂಹಿತೆ (CrPC) ಮತ್ತು 1872 ರ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಬದಲಿಸುವ ಮೂಲಕ ದೇಶದಲ್ಲಿ ಕ್ರಿಮಿನಲ್ ಕಾನೂನುಗಳನ್ನು ಮರುಪರಿಶೀಲಿಸಲು ಕೇಂದ್ರ ಸರ್ಕಾರವು ಸಿದ್ಧವಾಗಿದೆ.

1860 ರಲ್ಲಿ ಬ್ರಿಟಿಷರು ರೂಪಿಸಿದ ಐಪಿಸಿ, 160 ವರ್ಷಗಳಿಗೂ ಹೆಚ್ಚು ಕಾಲ ದೇಶದ ಅಪರಾಧ ನ್ಯಾಯ ವ್ಯವಸ್ಥೆಯ ಮೂಲವಾಗಿದೆ. ಇದನ್ನು ಭಾರತೀಯ ನ್ಯಾಯ ಸಂಹಿತೆ, 2023 ರಿಂದ ಬದಲಾಯಿಸಲಾಗುತ್ತದೆ. 1973 ರ CrPC ಅನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ರಿಂದ ಬದಲಾಯಿಸಲಾಗುತ್ತದೆ. ಹಾಗೂ, 1872 ರ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷಿ ಮಸೂದೆ, 2023 ರಿಂದ ಬದಲಾಯಿಸಲಾಗುತ್ತದೆ.
ಇದನ್ನೂ ಓದಿ: ಕರ್ನಾಟಕದ 13 ಸೇರಿ ದೇಶದ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ಮಾಡಿದ ಮೋದಿ: ನಿಮ್ಮ ಊರು ಇದ್ಯಾ ನೋಡಿ..

click me!