ಪ್ರಧಾನಿ ಮೋದಿ ಬೆಂಗಳೂರು ಭೇಟಿ ವೇಳೆ ಭದ್ರತಾ ವೈಫಲ್ಯ?

By Santosh NaikFirst Published Nov 16, 2022, 5:12 PM IST
Highlights

ಪ್ರಧಾನಿ ನರೇಂದ್ರ ಮೋದಿ ವಿವಿಧ ಕಾರ್ಯಕ್ರಮಗಳಿಗಾಗಿ ನವೆಂಬರ್‌ 11 ರಂದು ಬೆಂಗಳೂರಿಗೆ ಆಗಮಿಸಿದ್ದರು. ಮೋದಿ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ಭದ್ರತಾ ವೈಫಲ್ಯವಾಗಿತ್ತು ಎನ್ನುವ ವಿವರ ತಡವಾಗಿ ಬೆಳಕಿಗೆ ಬಂದಿದೆ.
 

ಬೆಂಗಳೂರು (ನ.16): ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ವಿವಿಧ ಕಾರ್ಯಕ್ರಮಗಳಿಗಾಗಿ ದಕ್ಷಿಣ ಭಾರತಕ್ಕೆ ಬಂದಿದ್ದರು. ಬೆಂಗಳೂರಿಗೆ ಬಂದು ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಅನ್ನು ಅನಾವರಣ ಮಾಡಿದ್ದ ಅವರು ಆ ಬಳಿಕ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಮಾಡಲಾಗಿರುವ ಕೆಂಪೇಗೌಡ ಪ್ರತಿಮೆ, ಟರ್ಮಿನಲ್‌-2 ಅನ್ನು ಉದ್ಘಾಟನೆ ಮಾಡಿದ್ದರು. ಆದರೆ, ಮೋದಿ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಭದ್ರತಾ ವೈಫಲ್ಯ ಎದುರಾಗಿತ್ತು ಎನ್ನುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರುವ ಮುನ್ನ ಅಸ್ಸಾಂ ಮೂಲದ ವ್ಯಕ್ತಿಯೊಬ್ಬ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ನುಗ್ಗಿದ್ದ ಇದರ ಬೆನ್ನಲ್ಲಿಯೇ ಗುಪ್ತಚರ  ಹಾಗೂ ಭದ್ರಾ ವೈಫಲ್ಯ ಆಗಿತ್ತೇ ಎನ್ನುವನ ಅನುಮಾನ ಕಾಡಿದೆ. ನವೆಂಬರ್‌ 9 ರಂದು ವ್ಯಕ್ತಿ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ನುಗ್ಗಿದ್ದ ವೇಳೆ ಸಿಕ್ಕಿಬಿದ್ದಿದ್ದ. ಪ್ರಧಾನಿ ಮೋದಿ ಭೇಟಿಗೂ ಮುನ್ನ ಹೆಚ್ಎಎಲ್‌ ವಿಮಾನನಿಲ್ದಾಣಕ್ಕ ಆಗಂತುಕ ಪ್ರವೇಶಿಸಿದ್ದ. ಪ್ರೇಯಸಿಯ ಗಂಡನಿಗೆ ಹೆದರಿ ಹೆಚ್ಎಎಲ್ ಕಾಂಪೌಡ್‌ಗೆ ನುಗ್ಗಿದ್ದ ಎಂದು ಹೇಳಲಾಗಿದೆ. ಯಮಲೂರು ಬಳಿಯ ಹೆಚ್ಎಎಲ್ ಕಾಂಪೌಂಡ್‌ಅನ್ನು ಅಸ್ಸಾಂ ಮೂಲದ ಮುಕುಂದ್‌ ಖೌಂಡ್‌ ಎನ್ನುವ ವ್ಯಕ್ತಿ ಪ್ರವೇಶಿಸಿದ್ದ.

ಈತ, ಬಿಬುಲ್ ದೌಲಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ಈಕೆ ತನ್ನ ಗಂಡನ ಜೊತೆ ಯಮಲೂರಿನಲ್ಲಿ ವಾಸವಾಗಿದ್ದಳು. ಬಿಬುಲ್ ದೌಲಿಯನ್ನು ಭೇಟಿಯಾಗಲು ಅಸ್ಸಾಂನಿಂದ ಮುಕುಂದ್‌ ಖೌಂಡ್‌ ಬಂದಿದ್ದ. ಈ ವೇಳೆ ಬಿಬುಲ್ ದೌಲಿಯ ಗಂಡನಿಗೆ ಮುಕುಂದ್‌ ಸಿಕ್ಕಿಬಿದ್ದಿದ್ದ ಎಂದು ಹೇಳಲಾಗಿದೆ. ಆತನಿಂದ ತಪ್ಪಿಸಿಕೊಂಡು ಓಡಿ ಬರುವ ವೇಳೆ ಯಮಲೂರಿನ ಬಳಿ ಆಕಸ್ಮಿಕವಾಗಿ ಹೆಚ್ಎಎಲ್ ಕೌಂಪಂಡ್ ಪ್ರವೇಶಿಸಿದ್ದ.

ವಶಕ್ಕೆ ಪಡೆದ ಎಚ್‌ಎಎಲ್‌ ಸಿಬ್ಬಂದಿ: ಮುಕುಂದ್‌ಗೆ ಪ್ರಧಾನಿ ನರೇಂದ್ರ ಮೋದಿ ಬರುವ ವಿಚಾರವಾಗಲೇ, ಭದ್ರತಾ ವಿಚಾರವಾಗಲಿ ತಿಳಿದಿರಲೇ ಇಲ್ಲ. ಅಚಾನಕ್‌ ಆಗಿ ಕಾಂಪೌಂಡ್‌ ಪ್ರವೇಶಿಸಿದ್ದ ಈತನನ್ನು ಎಚ್‌ಎಎfಲ್‌ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ವಿಚಾರಣೆ ನಡೆಸಿ ಹೆಚ್ಎಎಲ್ ಪೊಲೀಸರಿಗೆ ಒಪ್ಪಿಸಲಾಗಿತ್ತು. ಈ ಕುರಿತಾಗಿ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಕುಂದ್‌ನನ್ನು ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 36 ವರ್ಷದ ಮುಕುಂದ್‌ನಲ್ಲಿ ಭಾರತೀಯ ಗೌಪ್ಯತಾ ಕಾಯಿದೆಯಡಿ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಈ ಘಟನೆಯನ್ನು ಕೇಂದ್ರ ಗೃಹ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ಅದರೊಂದಿಗೆ ಗುಪ್ತಚರ ದಳ ಕೂಡ ತನಿಖೆ ಆರಂಭಿಸಿದೆ. ಆರೋಪಿಯಾಗಿರುವ ಅಸ್ಸಾಂ ಮೂಲದ ವ್ಯಕ್ತಿಯ ಹಿನ್ನಲೆ ಆತ ಬೆಂಗಳೂರಿಗೆ ಬಂದ ಕಾರಣ ಇತರ ಮಾಹಿತಿಯನ್ನೂ ಪೊಲೀಸರಿಂದ ಪಡೆದುಕೊಂಡಿದ್ದು, ಇನ್ನೂ ಕೆಲವು ಮಾಹಿತಿಗಳಿಗೆ ಜಾಲಾಡಿದೆ. ಇನ್ನು ಭದ್ರತಾ ವೈಫಲ್ಯದ ಬಗ್ಗೆ ಪೊಲೀಸರಿಗೆ ಪ್ರಶ್ನೆ ಮಾಡಲಾಗಿದ್ದು, ಸೂಕ್ತ ಉತ್ತರ ನೀಡುವಂತೆ ತಿಳಿಸಲಾಗಿದೆ.

'ಪ್ರಗತಿ ಪ್ರತಿಮೆ' ಅನಾವರಣ: ನಮೋ ಕಂಡಂತೆ ಕೆಂಪೇಗೌಡರ ಊರು

ಆರೋಪಿಯನ್ನು ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಔನಿಬರೇಲಿಯ ಮುಕುಂದ ಖೌಂಡ್ ಎಂದು ಗುರುತಿಸಲಾಗಿದೆ. ಭದ್ರತಾ ಸಿಬ್ಬಂದಿ (ಶ್ವಾನದಳ) ಈ ರಕ್ಷಣಾ ವಿಮಾನ ನಿಲ್ದಾಣದೊಳಗಿನ ಟ್ರಾಲಿ ಗೇಟ್‌ನಲ್ಲಿ ಅಡಗಿಕೊಂಡಿದ್ದ ಮುಕುಂದ್‌ನನ್ನು ಕಂಡು ಹಿಡಿದು ಹಿಡಿದು ನಂತರ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಿದ್ದರು. ಆರೋಪಿಯ ವಿರುದ್ಧ ಭಾರತೀಯ ಅಧಿಕೃತ ರಹಸ್ಯ ಕಾಯಿದೆ 1923 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಬೇಹುಗಾರಿಕೆ ಮತ್ತು ರಾಷ್ಟ್ರದ ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸುವ ಅಪಾಯದಲ್ಲಿ ಇರಿಸುವ ವಿಷಯದ ಬಗ್ಗೆ ವ್ಯವಹರಿಸುತ್ತದೆ. 

ಒಂದೇ ಭೇಟಿ, 3 ಸಮುದಾಯಗಳ ಒಲವು ಗಳಿಸಲು ಮೋದಿ ಯತ್ನ

ಕಳ್ಳತನಕ್ಕೆ ಬಂದಿದ್ದಾಗಿ ತಿಳಿಸಿದ್ದ: ಆರೋಪಿ ತಾನು ಮೇಸ್ತ್ರಿಯಾಗಿದ್ದು, ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದೇನೆ ಎಂದು ಹೇಳುತ್ತಿದ್ದರೂ ವಿಮಾನ ನಿಲ್ದಾಣಕ್ಕೆ ಬಂದ ಕಾರಣವನ್ನು ಬಹಿರಂಗಪಡಿಸಿಲ್ಲ. ಆತ ಕಳ್ಳತನ ಮಾಡಲು ಅಲ್ಲಿಗೆ ಪ್ರವೇಶಿಸಿರಬಹುದು ಎಂದು ಪೊಲೀಸರು ಹೇಳುತ್ತಿದ್ದರೂ, ಕಾಂಪೌಂಡ್ ಗೋಡೆಯನ್ನು ಪ್ರವೇಶಿಸುವುದು ಸುಲಭದ ಕೆಲಸವಲ್ಲ ಎಂದು ಫೆಡರಲ್‌ಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

click me!