ಲಿಫ್ಟ್‌ನಲ್ಲಿ ಪುಟ್ಟ ಬಾಲಕನ ಕಚ್ಚಿ ಎಳೆದಾಡಿದ ಬೇರೆಯವರ ಸಾಕುನಾಯಿ

By Anusha KbFirst Published Nov 16, 2022, 4:39 PM IST
Highlights

ಪುಟ್ಟ ಬಾಲಕನ ಮೇಲೆ ಲಿಫ್ಟ್‌ನಲ್ಲಿದ್ದ ಮತ್ತೊಬ್ಬ ವ್ಯಕ್ತಿಯ ಶ್ವಾನ ದಾಳಿ ನಡೆಸಿ ಬಾಲಕನ ಕೈಯನ್ನು ಕಚ್ಚಿ ಎಳೆದಾಡಿದೆ. ಇದರಿಂದ ಪುಟ್ಟ ಬಾಲಕನ ಕೈಗೆ ಗಂಭೀರ ಗಾಯವಾಗಿದೆ. ಈ ಭಯಾನಕ ದೃಶ್ಯ ಲಿಫ್ಟ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನೋಯ್ಡಾ: ಕೆಲ ದಿನಗಳ ಹಿಂದಷ್ಟೇ ಅಪಾರ್ಟ್‌ಮೆಂಟ್‌ನ ಲಿಫ್ಟೊಂದರಲ್ಲಿ ಯಾರದೋ ಸಾಕುನಾಯಿ ಅದರ ಮಾಲಕಿ ಇದ್ದಾಗಲೇ  ಪುಟ್ಟ ಬಾಲಕನೋರ್ವನ ಮೇಲೆ ಭೀಕರವಾಗಿ ದಾಳಿ ಮಾಡಿ ಗಾಯಗೊಳಿಸಿತ್ತು. ಈ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಹೀಗಿರುವಾಗ ಮತ್ತೆ ಇಂತಹದೇ ಘಟನೆಯೊಂದು ಉತ್ತರಪ್ರದೇಶದ ನೋಯ್ಡಾದ ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ನಡೆದಿದೆ. ಪುಟ್ಟ ಬಾಲಕನ ಮೇಲೆ ಲಿಫ್ಟ್‌ನಲ್ಲಿದ್ದ ಮತ್ತೊಬ್ಬ ವ್ಯಕ್ತಿಯ ಶ್ವಾನ ದಾಳಿ ನಡೆಸಿ ಬಾಲಕನ ಕೈಯನ್ನು ಕಚ್ಚಿ ಎಳೆದಾಡಿದೆ. ಇದರಿಂದ ಪುಟ್ಟ ಬಾಲಕನ ಕೈಗೆ ಗಂಭೀರ ಗಾಯವಾಗಿದೆ. ಈ ಭಯಾನಕ ದೃಶ್ಯ ಲಿಫ್ಟ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದ್ದಂತೆ ಪಟ್ಟಣಗಳಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ (Apartment) ನಾಯಿ ಸಾಕುವವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಉತ್ತರಪ್ರದೇಶದ (Uttar Pradesh) ಗ್ರೇಟರ್ ನೋಯ್ಡಾದ (Greater Noida) ಲಾ ರೆಸಿಡೆಂಟಿಯ ಅಪಾರ್ಟ್‌ಮೆಂಟ್‌ನಲ್ಲಿ (La Residentia Apartment) ಈ ಅನಾಹುತ ಸಂಭವಿಸಿದೆ. 

This morning at La Residentia Greater Noida West! When will dog parents learn to use a muzzle? pic.twitter.com/flpYas5qMi

— UP-70 (@bakaitpandey)

ಕೆಲ ಮಾಹಿತಿಗಳ ಪ್ರಕಾರ ನಾಯಿ ಕಚ್ಚಿದ (Dog Bite) ಪುಟ್ಟ ಬಾಲಕಿಗೆ ನಾಲ್ಕು ಚುಚ್ಚುಮದ್ದು ನೀಡಲಾಗಿದೆ ಎಂದು ತಿಳಿದು ಬಂದಿದೆ. ವಿಡಿಯೋದಲ್ಲಿ ಕಾಣಿಸುವಂತೆ ಶಾಲಾ ಬಾಲಕ (School Boy) ಹಾಗೂ ಆತನ ತಾಯಿ ಈಗಾಗಲೇ ಲಿಫ್ಟ್‌ನಲ್ಲಿದ್ದು, ಲಿಫ್ಟ್ (Lift) ತೆರೆದುಕೊಂಡಾಗ ವ್ಯಕ್ತಿಯೊಬ್ಬ ತನ್ನ ಶ್ವಾನದೊಂದಿಗೆ ಲಿಫ್ಟ್‌ ಒಳಗೆ ಬಂದಿದ್ದಾನೆ. ಒಳಗೆ ಬಂದ ಸೆಕೆಂಡುಗಳಲ್ಲಿಯೇ ಶ್ವಾನ ಬಾಲಕನ ಮೇಲೆ ದಾಳಿ ಮಾಡಿದ ಬಾಲಕನ ಕೈ ಕಚ್ಚಿ ಎಳೆದಾಡಿದೆ. 

ಲಿಫ್ಟ್‌ನಲ್ಲಿ ಬಾಲಕನನ್ನು ಕಚ್ಚಿದ ನಾಯಿ, ಹೃದಯವೇ ಇಲ್ಲದ ಕಟುಕಿಯಂತೆ ನಿಂತಿದ್ಲು ಮಹಿಳೆ !

ನಾಯಿಗಳನ್ನು ಸಣ್ಣ ಸಣ್ಣ ಸ್ಥಳಗಳಲ್ಲಿ ಅದೂ ಮಕ್ಕಳಿದ್ದ ಸ್ಥಳಗಳಲ್ಲಿ ಕರೆತರುವಂತಿಲ್ಲ. ಅಲ್ಲದೇ ವಸತಿ ಸಮುಚ್ಚಯದೊಳಗೂ ಕರೆತರುವಂತಿಲ್ಲ ಎಂದು ಬಾಲಕನ ತಾಯಿ ಹೇಳಿದ್ದಾರೆ. ಇತ್ತೀಚೆಗೆ ನಾಯಿಗಳು ಪುಟ್ಟ ಮಕ್ಕಳ ಮೇಲೆ ದೊಡ್ಡವರ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೋಯ್ಡಾ ನಗರಾಡಳಿತ ಪ್ರಾಧಿಕಾರವೂ (Noida city Authority) ನಾಯಿ ಸಾಕುವವರಿಗೆ ಕೆಲವು ನಿಯಮಗಳನ್ನು ಹೇರಿದೆ. ಮುಂದಿನ ವರ್ಷದ ಜನವರಿ ತಿಂಗಳ 31ನೇ ತಾರೀಕಿನ ಒಳಗೆ ತಮ್ಮ ಸಾಕುಪ್ರಾಣಿಗಳ ವಿವರಗಳನ್ನು ಮಾಲೀಕರು ನಗರಾಡಳಿತ ಪ್ರಾಧಿಕಾರಕ್ಕೆ ನೀಡಿ ನೋಂದಾಯಿಸಬೇಕಿದೆ. ತಪ್ಪಿದಲ್ಲಿ ಈ ಬಗ್ಗೆ ದಂಡ ತೆರಲು ಸಿದ್ಧರಿರುವಂತೆ ಆದೇಶಿಸಲಾಗಿದೆ. ಅಲ್ಲದೇ ಒಂದು ವೇಳೆ ತಮ್ಮ ಸಾಕುಪ್ರಾಣಿಗಳಿಂದ ಇತರರಿಗೆ ಹಾನಿಯಾದಲ್ಲಿ 10 ಸಾವಿರ ರೂಪಾಯಿ ದಂಡ ವಿಧಿಸುವ ನಿಯಮವನ್ನು ಜಾರಿಗೆ ತರಲಾಗಿದೆ.

ನಾಯಿ ಕಚ್ಚಿದರೆ ಪರಿಹಾರ ಕೊಡ್ತಾರೆ ಗೊತ್ತಾ..?!

ನೋಯ್ಡಾದಲ್ಲಿ ಸಾಕುಪ್ರಾಣಿಗಳ ಮಾಲೀಕರಿಗೆ ಹೊಸ ನಿಯಮಾವಳಿ

ನೋಯ್ಡಾ ಪ್ರಾಧಿಕಾರದ ಹೊಸ ನೀತಿಯ ಪ್ರಕಾರ, ಸಾಕು ನಾಯಿಗಳು ಅಥವಾ ಬೆಕ್ಕುಗಳನ್ನು ಜನವರಿ 31, 2023ರೊಳಗೆ ನೋಂದಣಿ ಮಾಡುವುದು ಕಡ್ಡಾಯ. ನೋಂದಣಿಯಾಗದಿದ್ದಲ್ಲಿ ದಂಡ ಹೇರಲಾಗವುದು.

ಒಂದು ವೇಳೆ ಸಾಕುಪ್ರಾಣಿಗಳು ಇತರರಿಗೆ ಹಾನಿ ಮಾಡಿದಲ್ಲಿ, ಮಾಲೀಕರು 10 ಸಾವಿರ ದಂಡ ತೆರಬೇಕು. 

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ (AWBI) ಮಾರ್ಗಸೂಚಿಗಳಿಗೆ ಅನುಗುಣವಾಗಿ ನೋಯ್ಡಾ ಪ್ರಾಧಿಕಾರದ 207 ನೇ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಾಕು ನಾಯಿಗಳಿಂದ ದಾಳಿಗೊಳಗಾಗಿ, ಗಾಯಗೊಂಡ ವ್ಯಕ್ತಿ ಅಥವಾ ಪ್ರಾಣಿಗಳ ಚಿಕಿತ್ಸೆಯ ವೆಚ್ಚವನ್ನು ಸಾಕು ನಾಯಿಯ ಮಾಲೀಕರೇ ಭರಿಸಬೇಕಿದೆ

ಸಾಕು ನಾಯಿಗಳಿಗೆ  (Pet Dog) ಆಂಟಿರೇಬಿಸ್ ಲಸಿಕೆಯನ್ನು (antirabies vaccination) ಕಡ್ಡಾಯಗೊಳಿಸಲಾಗಿದ್ದು, ಉಲ್ಲಂಘಿಸಿದರೆ ಪ್ರತಿ ತಿಂಗಳು 2000 ರೂಪಾಯಿ ದಂಡ ವಿಧಿಸಲು ಅವಕಾಶವಿದೆ.

ನೋಯ್ಡಾ ವಸತಿ ಪ್ರದೇಶಗಳಲ್ಲಿ ಸಾಕುನಾಯಿಗಳ ಹಾವಳಿ ಇತ್ತೀಚೆಗೆ ಹೆಚ್ಚಾಗಿ ಕೇಳಿ ಬಂದ ಹಿನ್ನೆಲೆ ಈ ನಿಯಮ ಹೇರಲಾಗಿದೆ. 
 

click me!