ಹೆಂಡತಿಗೆ ಹೇಳದೆ ಮಲೇಷಿಯಾಗೆ ಹಾಲಿಡೇ ಪ್ಲಾನ್, ಗರ್ಲ್‌ಫ್ರೆಂಡ್ ಎಡವಟ್ಟಿನಿಂದ ಸಿಕ್ಕಿಬಿದ್ದ ಗಂಡ

Published : Sep 19, 2026, 03:43 PM IST
man at airport

ಸಾರಾಂಶ

ಹೆಂಡತಿ ಬಳಿ ಬ್ಯೂಸಿನೆಸ್ ಟ್ರಿಪ್ ಎಂದು ಹೇಳಿದ್ದಾನೆ. ಬಳಿಕ ಗೆಳತಿ ಜೊತೆ ಮಲೇಷಿಯಾಗೆ ಟ್ರಿಪ್ ಹೊರಟಿದ್ದಾನೆ. ಆದರೆ ಗೆಳತಿಯ ಎಡವಟ್ಟಿನಿಂದ ಟ್ರಿಪ್ ಕ್ಯಾನ್ಸಲ್ ಆಗಿದೆ. ಇತ್ತ ಹೆಂಡತಿಗೆ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾನೆ.

ಪುಣೆ (ಸೆ.19) ಉದ್ಯಮಿ ಸೀಕ್ರೆಟ್ ಆಗಿ ಗೆಳತಿ ಜೊತೆ ಮಲೇಷಿಯಾಗೆ ಟ್ರಿಪ್ ಪ್ಲಾನ್ ಮಾಡಿದ್ದಾನೆ. ಮೂರು ನಾಲ್ಕು ದಿನ ಗೆಳತಿ ಜೊತೆ ಮಲೇಷಿಯಾ ಸುಂದರ ತಾಣದಲ್ಲಿ ಜಾಲಿಯಾಗಿ ಕಳೆಯಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾನೆ. ಬ್ಯೂಸಿನೆಸ್ ಕಾರಣಕ್ಕಾಗಿ ತೆರಳುತ್ತಿರುವುದಾಗಿ ಪತ್ನಿ ಬಳಿ ಹೇಳಿ ಹೊರಟಿದ್ದಾನೆ. ವಿಮಾನ ನಿಲ್ದಾಣದಲ್ಲಿ ಗೆಳತಿ ಜೊತೆಯಾಗಿದ್ದಾಳೆ. ಆದರೆ ಗೆಳತಿಯ ಎಡವಟ್ಟಿನಿಂದ ಇವರ ಟ್ರಿಪ್ ಕ್ಯಾನ್ಸಲ್ ಆಗಿದೆ. ಇಷ್ಟೇ ಆಗಿದ್ದರೆ ಸಮಸ್ಯೆ ಹೆಚ್ಚಾಗುತ್ತಿರಲಿಲ್ಲ, ಆದರೆ ಮತ್ತೆ ಅತೀ ಬುದ್ದಿ ಉಪಯೋಗಿಸಿದ ಗಂಡ ರೆಡ್‌ಹ್ಯಾಂಡ್ ಆಗಿ ಪತ್ನಿಗೆ ಸಿಕ್ಕಿಬಿದ್ದ ಘಟನೆ ಪುಣೆಯಲ್ಲಿ ನಡೆದಿದೆ.

46ರ ಹರೆಯದ ಉದ್ಯಮಿ ಟ್ರಿಪ್ ಪ್ಲಾನ್

ಪುಣೆಯ 46 ವರ್ಷ ಲಾಂಡರಿ ಉದ್ಯಮಿಯ ಸಂಸಾರದ ಯಾವುದೇ ಸಮಸ್ಯೆ ಇಲ್ಲದೆ ಸಾಗಿತ್ತು. ಮನೆಯಲ್ಲಿ ಯಾವುದೇ ಕೊರತೆ ಇರಲಿಲ್ಲ. ಉದ್ಯಮ ಕೂಡ ಉತ್ತಮವಾಗಿ ಸಾಗುತಿತ್ತು. ಆದರೆ ಪತ್ನಿ ಮನೆಯಲ್ಲಿದ್ದರೆ, ಹೊರಗಡೆ ಗೆಳತಿಯೊಬ್ಬಳು ಸಿಕ್ಕಿದ್ದಳು. ಗೆಳತಿ ಜೊತೆ ಆಪ್ತತೆ ಹೆಚ್ಚಾಗಿದೆ. ಸಲುಗೆ ಬೆಳೆದಿದೆ. ಅಷ್ಟರಲ್ಲೇ ಹೆಂಡತಿಗೆ ಹೇಳದೆ ಗೆಳತಿ ಜೊತೆ ಮಲೇಷಿಯಾದಲ್ಲಿ ಎಂಜಾಯ್ ಮಾಡಲು ಉದ್ಯಮಿ ಪ್ಲಾನ್ ಮಾಡಿದ್ದಾನೆ. ತುದಿಗಾಲಲ್ಲಿ ನಿಂತಿದ್ದ ಗೆಳತಿ ಕೂಡ ಒಕೆ ಎಂದಿದ್ದಾಳೆ.

ಪತಿಯ ಮಾತು ನಂಬಿ ಕಳುಹಿಸಿಕೊಟ್ಟ ಪತ್ನಿ

ಮಲೇಷಿಯಾದಲ್ಲಿ ಜಾಲಿಯಾಗಿರಲು ಹೊಟೆಲ್, ಪ್ರವಾಸ, ವಿಮಾನ ಟಿಕೆಟ್ ಸೇರಿದಂತೆ ಎಲ್ಲವನ್ನು ಉದ್ಯಮಿ ಬುಕ್ ಮಾಡಿದ್ದಾನೆ. ಹೆಂಡತಿಗೆ ಹೇಳದೆ ನಾಲ್ಕೈದು ದಿನ ಮನೆಯಿಂದ ದೂರವಿರುವುದು ಕಷ್ಟ. ಹೀಗಾಗಿ ತಾನು ಬ್ಯೂಸಿನೆಸ್ ಟ್ರಿಪ್ ಮಾಡುತ್ತಿರುವುದಾಗಿ ಹೇಳಿದ್ದಾನೆ. ಮೂರು ನಾಲ್ಕು ದಿನ ಬ್ಯೂಸಿನೆಸ್ ಟ್ರಿಪ್‌ನಲ್ಲಿರುವುದಾಗಿ ಹೇಳಿದ್ದಾನೆ. ತಮ್ಮ ಉದ್ಯಮದ ಕುರಿತು ಟ್ರಿಪ್ ಇದು ಎಂದು ಪತ್ನಿಗೆ ಹೇಳಿದ್ದಾನೆ. ತನಗೆ ಹಾಗೂ ಮನಗೆ ಯಾವುದೇ ಕೊರತೆ ಮಾಡದ ಗಂಡನ ಮಾತುಗಳನ್ನು ಪತ್ನಿ ನಂಬಿದ್ದಾಳೆ. ಸರಿ ಹೋಗಿ ಬನ್ನಿ ಎಂದಿದ್ದಾಳೆ.

ವಿಮಾನ ನಿಲ್ದಾಣದಲ್ಲಿ ಜೊತೆಯಾದ ಗೆಳತಿ

ಮಲೇಷಿಯಾ ಟ್ರಿಪ್‌ಗಾಗಿ ಪುಣೆಯಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಉದ್ಯಮಿ ಆಗಮಿಸಿದ್ದಾನೆ. ಇತ್ತ ಗೆಳತಿ ಕೂಡ ಆಗಮಿಸಿದ್ದಾಳೆ. ಬಳಿಕ ಜೊತೆಯಾಗಿ ಇಮಿಗ್ರೇಷನ್ ಅದಿಕಾರಿಗಳ ಬಳಿ ತೆರಳಿದ್ದಾರೆ. ಉದ್ಯಮಿಯ ಇಮಿಗ್ರೇಷನ್ ದಾಖಲೆ ಪರಿಶೀಳಿಸಿದ ಅಧಿಕಾರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ ಗೆಳತಿಯ ಪಾಸ್‌ಪೋರ್ಟ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಪಾಸ್‌ಪೋರ್ಟ್ ಕಳೆದು ಹೋಗಿದೆ ಎಂದು ದೂರು ನೀಡಿ ನಿಷ್ಕ್ರೀಯ ಮಾಡಿದ್ದ ಅದೇ ಪಾಸ್‌ಪೋರ್ಟ್ ಹಿಡಿದು ಮಲೇಷಿಯಾ ಟ್ರಿಪ್‌ಗೆ ಬಂದಿದ್ದಳು. ಹೀಗಾಗಿ ಗೆಳತಿಗೆ ಅನುಮತಿ ಸಿಗಲಿಲ್ಲ.ಇತ್ತ ಉದ್ಯಮಿ ಗೆಳತಿ ಇಲ್ಲದ ಕಾರಣ ಮಲೇಷಿಯಾ ಟ್ರಿಪ್ ಕ್ಯಾನ್ಸಲ್ ಮಾಡಿದ್ದಾನೆ.

ಪತ್ನಿಗೆ ಕರೆ ಕತೆ ಕಟ್ಟಿದ ಪತಿ

ಟ್ರಿಪ್ ಕ್ಯಾನ್ಸಲ್ ಆದ ಬೆನ್ನಲ್ಲೇ ವಿಮಾನ ನಿಲ್ದಾಣದಿಂದ ಪತ್ನಿಗೆ ಕರೆ ಮಾಡಿ ಹೊಸ ಕತೆ ಕಟ್ಟಿದ್ದಾನೆ. ತನ್ನ ಫೋನ್ ಇಮಿಗ್ರೇಶನ್ ಅಧಿಕಾರಿಗಳಿಗೆ ನೀಡಿದ್ದೇನೆ. ಇಮಿಗ್ರೇಶನ್ ಸಮಸ್ಯೆ ಎದುರಾಗಿದೆ ಎಂದಿದ್ದಾನೆ. ಮರುದಿನ ಬೆಳಗ್ಗೆ ಪತ್ನಿಗೆ ವ್ಯಾಟ್ಸಾಪ್ ಕರೆ ಮಾಡಿ ಇಮಿಗ್ರೇಶನ್ ಸಮಸ್ಯೆ ಬಗೆ ಹರಿದಿಲ್ಲ. ಫೋನ್ ಪಡೆದು ಕರೆ ಮಾಡಿದ್ದೇನೆ. ಅಧಿಕಾರಿಗಳಿಗೆ ಫೋನ್ ನೀಡಬೇಕು ಎಂದೆಲ್ಲಾ ಅದೇ ಕತೆ ಹೇಳಿದ್ದಾನೆ. ಬಳಿಕ ಗೆಳತಿ ಜೊತೆ ವಿಮಾನ ನಿಲ್ದಾಣದಿಂದ ಬೇರೆಡೆಗೆ ಪ್ರಯಾಣ ಆರಂಭಿಸಿದ್ದಾನೆ.

ಎರಡನೇ ದಿನ ರಾತ್ರಿಯಾಗುತ್ತಿದ್ದಂತೆ ಪತ್ನಿ ಕರೆ ಮಾಡಿದ್ದಾಳೆ. ಗಂಡನ ಮೊಬೈಲ್ ಸ್ವಿಚ್ ಆಫ್. ಮೂರನೇ ದಿನ ಮತ್ತೆ ಕರೆ ಮಾಡಿದರೂ ಗಂಡನ ಮೊಬೈಲ್ ಸ್ವಿಚ್ ಆಫ್. ಪತ್ನಿ ಆತಂಕಗೊಂಡಿದ್ದಾಳೆ. ಉದ್ಯಮಿಯಾಗಿರುವ ಕಾರಣ ಯಾರಾದರೂ ಕಿಡ್ನಾಪ್ ಮಾಡಿರಬಹುದೇ ಎಂದು ಅನುಮಾನಗೊಂಡಿದ್ದಾಳೆ. ಹೀಗಾಗಿ ಪೊಲೀಸ್ ಠಾಣೆಗೆ ಗಂಡನ ಅಪಹರಣ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ಮರು ದಿನ ಉದ್ಯಮಿಗೆ ತನ್ನ ವಿರುದ್ದ ದೂರು ದಾಖಲಾಗಿರುವುದು ಗೊತ್ತಾಗಿದೆ. ಹೀಗಾಗಿ ಖುದ್ದು ಪೊಲೀಸ್ ಠಾಣೆಗೆ ಆಗಮಿಸಿದ್ದಾನೆ. ಪೊಲೀಸ್ ಠಾಣೆಯಲ್ಲಿ ವಿಚಾರಣೆ ಆರಂಭಗೊಂಡಿದೆ. ಈ ವೇಳೆ ನಡೆದ ಘಟನೆ ಹೇಳಿದ್ದಾನೆ. ಅಲ್ಲಿಗೆ ಪತ್ನಿ ಎದರೇ ಗಂಡ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರು, ಬೈಕ್ ನಂಬರ್ ಪ್ಲೇಟ್ ಏಕೆ ಹಲವು ಬಣ್ಣಗಳಲ್ಲಿರುತ್ತೆ? ನೀಲಿ ಬಣ್ಣದ ಬೋರ್ಡ್ ಏನು ಸೂಚಿಸುತ್ತೆ ಗೊತ್ತಾ?
ಟಿಎಂಸಿ ಇಬ್ಭಾಗ, ದೀದಿಗೆ ಫುಟ್ಬಾಲ್‌: ಶಾಕ್ ಕೊಟ್ಟ ಚುನಾವಣಾ ಆಯೋಗಕ್ಕೆ ಕೌಂಟರ್ ಕೊಟ್ಟ ಮಮತಾ ಬ್ಯಾನರ್ಜಿ!