ಮೆಟ್ರೋದಲ್ಲಿ ಸೀಟ್ ಫ್ರ್ಯಾಂಕ್: ಈ ವಿಡಿಯೋ ನೋಡಿದ್ರೆ ನಗದಿರಲು ಸಾಧ್ಯವಿಲ್ಲ ನೋಡಿ

Published : Jul 14, 2023, 03:16 PM IST
ಮೆಟ್ರೋದಲ್ಲಿ ಸೀಟ್ ಫ್ರ್ಯಾಂಕ್: ಈ ವಿಡಿಯೋ ನೋಡಿದ್ರೆ ನಗದಿರಲು ಸಾಧ್ಯವಿಲ್ಲ ನೋಡಿ

ಸಾರಾಂಶ

ಫ್ರಾಂಕ್ ಮಾಡಿ ಮಜಾ ನೋಡುವ ಹಲವು ವೀಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ನೋಡುತ್ತಿರಬಹುದು. ಅಪರಿಚಿತರಿಗೆ ಮಾಡುವ ಈ ರೆಕಾರ್ಡಿಂಗ್ ಫ್ರ್ಯಾಂಕ್‌ಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುವುದಲ್ಲದೇ ಕಚಗುಳಿ ಇಡುತ್ತವೆ.

ಫ್ರಾಂಕ್ ಮಾಡಿ ಮಜಾ ನೋಡುವ ಹಲವು ವೀಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ನೋಡುತ್ತಿರಬಹುದು. ಅಪರಿಚಿತರಿಗೆ ಮಾಡುವ ಈ ರೆಕಾರ್ಡಿಂಗ್ ಫ್ರ್ಯಾಂಕ್‌ಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುವುದಲ್ಲದೇ ಕಚಗುಳಿ ಇಡುತ್ತವೆ. ಅಪರಿಚಿತರು ಇದು ಫ್ರ್ಯಾಂಕ್ ಎಂಬುದನ್ನು ತಿಳಿಯದೇ ಗಾಬರಿಯಾಗುವ ನಂತರ ಅದು ತಮಾಷೆಗಾಗಿ ಮಾಡಿದ್ದು ಎಂದು ತಿಳಿದು ಖುಷಿ ಪಡುವ ವೀಡಿಯೋಗಳು ನೋಡುಗರಿಗೂ ಸಖತ್ ಮಜಾ ನೀಡುತ್ತವೆ. ನೀವು ಸಾಮಾಜಿಕ ಜಾಲತಾಣ ಬಳಕೆದಾರರಾಗಿದ್ದರೆ ಅಲ್ಲಿ ಇಂತಹ ಸಾವಿರಾರು ವೀಡಿಯೋಗಳನ್ನು ನೀವು ನೋಡಬಹುದು.  ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಈ ವೀಡಿಯೋಗಳು ನಿಮ್ಮನ್ನು ನಗಿಸಿ ಮನದಲ್ಲಿ ಮೂಡಿದ ದುಗುಡಗಳನ್ನೆಲ್ಲಾ ದೂರ ಮಾಡುತ್ತವೆ. 

ಅದೇ ರೀತಿ ಇಲ್ಲೊಂದು ವೀಡಿಯೋ ಇದೆ. ಮೆಟ್ರೋ ರೈಲ್ಲೊಂದರಲ್ಲಿ ಮಾಡಿದ ವೀಡಿಯೋ ಇದಾಗಿದ್ದು,  ಯುವಕನೋರ್ವ ಮೆಟ್ರೋ ರೈಲಿನ ಕೋಚಿನಲ್ಲಿ  ಬಾಗಿಲಿನ ಪಕ್ಕದ ಜಾಗದಲ್ಲಿ ಸೀಟು ಇಲ್ಲದಿದ್ದರೂ ಸೀಟು ಇರುವಂತೆ ಕುಳಿತುಕೊಂಡಿರುತ್ತಾನೆ.  ನಿಮಿಷಗಳ ಕಾಲ ಕುಳಿತ ಈತ  ಮುಂದಿನ ಮೆಟ್ರೋ ಸ್ಟೇಷನ್‌ ಬರುತ್ತಿದ್ದಂತೆ ಅಲ್ಲಿಂದ ಎದ್ದು ಮುಂದೆ ಸಾಗಿದ್ದಾನೆ. ಇದೇ ವೇಳೆ ಆ ಮೆಟ್ರೋ ರೈಲಿನಲ್ಲಿ ಇನ್ನು ಅನೇಕ ಪ್ರಯಾಣಿಕರಿದ್ದು,  ಈ ಹುಡುಗ ಕುಳಿತಂತೆ ಮಾಡಿದ ಸ್ಥಳದ ಪಕ್ಕದಲ್ಲೇ  ಒಬ್ಬಳು ಹುಡುಗಿ  ಮೊಬೈಲ್ ಒತ್ತುತ್ತಾ ನಿಂತಿದ್ದು, ಈತ ಎದ್ದು ಹೋಗಿದ್ದೆ ತಡ ಆಕೆ ಆ ಸ್ಥಳದಲ್ಲಿ ಹೋಗಿ ಕುಳಿತುಕೊಳ್ಳಲು ನೋಡಿದ್ದಾಳೆ. ಆದರೆ ಅಲ್ಲಿ ಸೀಟೆ ಇರಲಿಲ್ಲ, ಇದರಿಂದ ಯುವತಿ ಕ್ಷಣಕಾಲ ಅಚ್ಚರಿಯಿಂದ ನೋಡಿ ಸುಮ್ಮನಾಗಿದ್ದಾಳೆ. ಜೊತೆಗೆ ಬರುತ್ತಿದ್ದ ನಗುವನ್ನು ಆಕೆ ಕಂಟ್ರೋ ಮಾಡಿಕೊಂಡಿದ್ದಾಳೆ. 

ಮೋದಿ ಹೇಳಿದ ‘ಆತ್ಮಹತ್ಯೆ ಜೋಕಿಗೆ’ ರಾಹುಲ್‌, ಪ್ರಿಯಾಂಕಾ ಕಿಡಿ

ಪುಣ್ಯಕ್ಕೆ ಈ ಹುಡುಗಿ ಸೀಟನ್ನು ನೋಡಿದ ಬಳಿಕ ಕುಳಿತುಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಹುಡುಗ ಕುಳಿತಿದ್ದಿದ್ದನ್ನು ನಂಬಿ ಮೊಬೈಲ್ ನೋಡುತ್ತಿದ್ದ ಈ ಹುಡುಗಿ ಒಂದು ವೇಳೆ  ಅಲ್ಲಿ ಸೀಟಿದೆ ಎಂದು ಭಾವಿಸಿ ಸೀದಾ ಹೋಗಿ ಕುಳಿತಿದ್ದರೆ ಆಕೆ ಕೆಳಗೆ ಮುಗ್ಗರಿಸುತ್ತಿದ್ದಿದ್ದಂತು ಪಕ್ಕಾ, ವೈರಲ್ ಭಯಾನಿ ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು,  ಎಲ್ಲರನ್ನು ನಕ್ಕು ನಗಿಸುತ್ತಿದೆ. ವೀಡಿಯೋ ನೋಡಿದ ಅನೇಕರು ಇದಕ್ಕೆ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. 

ಹುಡುಗ ಸೀಟನ್ನು ಜೊತೆಯಲ್ಲೇ ತೆಗೆದುಕೊಂಡು ಹೋದನಾ ಹೇಗೆ ಎಂದು ಹುಡುಗಿ ಯೋಚಿಸುತ್ತಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಪುಣ್ಯ ಆಕೆ ಕುಳಿತುಕೊಳ್ಳುವ ಮೊದಲು ನೋಡಿದ್ದಕ್ಕೆ ಬಚಾವಾದಳು ಇಲ್ಲದಿದ್ದರೆ ಕತೆ ಬೇರಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಆತನ ಬಳಿ ಪೋರ್ಟೆಬಲ್ ಮ್ಯಾಜಿಕಲ್ ಸೀಟ್ ಇದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ತುಂಬಾ ತಮಾಷೆಯಾಗಿದೆ ನಗು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಇದು ಯಾವ ಮೆಟ್ರೋದಲ್ಲಿ ನಡೆದ ಘಟನೆ ಎಂಬ ಬಗ್ಗೆ ಯಾವುದೇ ವಿವರ ಈ ವೀಡಿಯೋದಲ್ಲಿ ಇಲ್ಲ, 

Trending Video: ತಮಾಷೆಗೆ ಮಾಡಿದ ವಿಡಿಯೋ ವಿವಾದ ಹೊತ್ತು ತಂತು!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..