ವಿದ್ಯಾರ್ಥಿನಿ ನೀರಿನ ಬಾಟಲಿಯೊಳಗೆ ಮೂತ್ರ ಬೆರೆಸಿದ ಕಿಡಿಗೇಡಿಗಳು, ಶುರುವಾಯ್ತು ಕೋಮು ಸಂಘರ್ಷ!

By Suvarna NewsFirst Published Jul 31, 2023, 5:23 PM IST
Highlights

ಶಾಲಾ ವಿದ್ಯಾರ್ಥಿನಿ ನೀರಿನ ಬಾಟಲಿಯೊಳಗೆ ಅದೇ ಕ್ಲಾಸಿನ ಕೆಲ ಕಿಡಿಗೇಡಿ ಹುಡುಗರ ಮೂತ್ರ ಬೆರೆಸಿದ್ದಾರೆ. ಮಧ್ಯಾಹ್ನ ಊಟದ ಮೇಳೆ ನೀರು ಕುಡಿಯುವ ವೇಳೆ ವಿದ್ಯಾರ್ಥಿನಿ ಮೂತ್ರ ಬೆರೆಸಿರುವುದು ತಿಳಿದಿದೆ. ತಕ್ಷಣವೇ ದೂರು ದಾಖಲಿಸಲಾಗಿದೆ. ಆದರೆ ಶಾಲಾ ಆಡಳಿತ ಮಂಡಳಿ ಕ್ರಮ ಕೈಗೊಂಡಿಲ್ಲ. ಇತ್ತ ಈ ಘಟನೆ ಕೋಮುಸಂಘರ್ಷಕ್ಕೂ ಕಾರಣವಾಗಿದೆ.

ಭಿಲ್ವಾರ(ಜು.31) ಶಾಲಾ ವಿದ್ಯಾರ್ಥಿನಿ ನೀರಿನ ಬಾಟಲಿಯಲ್ಲಿ ಮೂತ್ರ ಬೆರೆಸಿ, ಆಕೆಯ ಬ್ಯಾಗ್‌ನಲ್ಲಿ ಲವ್ ಲೆಟರ್ ಇಟ್ಟ ಘಟನೆ ರಾಜಸ್ಥಾನದ ಬಿಲ್ವಾರ ಜಿಲ್ಲೆಯಲ್ಲಿ ನಡೆದಿದೆ. ಮಧ್ಯಾಹ್ನ ಊಟದ ಸಮಯದಲ್ಲಿ ನೀರು ಕುಡಿಯುವ ವೇಳೆ ಗಬ್ಬು ನಾತದಿಂದ ವಿದ್ಯಾರ್ಥಿನಿ ಬಾಯಲ್ಲಿದ್ದ ಆಹಾರ ಸೇರಿದಂತೆ ಎಲ್ಲವನ್ನೂ ಒಮ್ಮಲೆ ಉಗುಳಿದ್ದಾಳೆ. ನೀರಿನ ಬಾಟಲಿಯಲ್ಲಿ ಮೂತ್ರ ಬೆರೆಸಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಶಾಲಾ ಪ್ರಾಂಶುಪಾಲರಿಗೆ ದೂರು ನೀಡಿದ್ದಾಳೆ.ಕಿಡಿಗೇಡಿಗಳು ಅನ್ಯಕೋಮಿನ ಹುಡುಗರಾಗಿದ್ದು, ಅದೇ ತರಗತಿಯಲ್ಲಿ ಓದುತ್ತಿದ್ದಾರೆ. ಶಾಲಾ ಆಡಳಿತ ಮಂಡಳಿ ಕ್ರಮ ಕೈಗೊಳ್ಳದ ಕಾರಣ, ಬಾಲಕಿ ಕುಟುಂಬಸ್ಥರು ಹೋರಾಟ ಆರಂಭಿಸಿದ್ದಾರೆ.

ಭಿಲ್ವಾರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಎಂದಿನಂತೆ ಶಾಲೆಗೆ ನೀರಿನ ಬಾಟಲಿ ಹಾಗೂ ಮಧ್ಯಾಹ್ನದ ಆಹಾರ ತಂದಿದ್ದಾಳೆ. ತರಗತಿ ನಡುವೆ ನೀರು ಕುಡಿದಿದ್ದಾಳೆ. ಬಳಿಕ ಪಿಟಿ ವೇಳೆ ಶಾಲಾ ಮೈದಾನಕ್ಕೆ ತೆರಳಿದ್ದ ವಿದ್ಯಾರ್ಥಿಗಳು ಬಳಿಕ ಶಾಲೆಗೆ ಮರಳಿದ್ದಾರೆ. ಇದೇ ವೇಳೆ ವಿದ್ಯಾರ್ಥಿನಿಯ ತರಗತಿಯ ಅನ್ಯ ಕೋಮಿನ ಕೆಲ ಹುಡುಗರು, ನೀರಿನ ಬಾಟಲಿಯೊಳಗೆ ಮೂತ್ರ ಬೆರೆಸಿದ್ದಾರೆ. ಬಾಟಲಿಯಲ್ಲಿದ್ದ ನೀರನ್ನು ಸ್ವಲ್ಪ ಚೆಲ್ಲಿ, ಮೂತ್ರ ಬೆರೆಸಿದ್ದಾರೆ. ಬಳಿಕ ವಿದ್ಯಾರ್ಥಿನಿ ಬ್ಯಾಗ್ ಒಳಗೆ ಐ ಲವ್ ಯೂ ಎಂಬ ಪತ್ರವನ್ನೂ ಇಟ್ಟಿದ್ದಾರೆ.

 

ಶಾಲಾ ಬಾಲಕಿಯರ ಕುಡಿಯುವ ನೀರಿನ ಬಾಟಲ್‌ನಲ್ಲಿ ಮೂತ್ರ ಮಿಕ್ಸ್, ಮಧ್ಯಪ್ರದೇಶದಲ್ಲಿ ಮತ್ತೊಂದು ಘಟನೆ!

ಪಿಟಿ ಸಮಯದ ಬಳಿಕ ಮರಳಿ ತರಗತಿಗೆ ಆಗಮಿಸಿದಿ ವಿದ್ಯಾರ್ಥಿಗಳು ಭೋಜನ ಸವಿಯಲು ಮುಂದಾಗಿದ್ದಾರೆ. ಇದೇ ವೇಳೆ ನೀರಿನ ಬಾಟಲಿ ತೆಗೆದಾಗ ಗಬ್ಬು ನಾಥ ಬಂದಿದೆ. ಅನುಮಾನಗೊಂಡ ವಿದ್ಯಾರ್ಥಿನಿ ತಕ್ಷಣವೆ ಇತರ ವಿದ್ಯಾರ್ಥಿನಿಯರ ಜೊತೆ ಪ್ರಾಂಶುಪಾಲರಿಗೆ ದೂರು ನೀಡಿದ್ದಾಳೆ. ನೀರಿನ ಬಾಟಲಿಯಲ್ಲಿ ಯಾರೋ ಮೂತ್ರ ಬೆರೆಸಿದ್ದಾರೆ ಎಂದು ನೀರಿನ ಬಾಟಲಿ ಸಮೇತೆ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ಇದೇ ವೇಳೆ ಬ್ಯಾಗ್‌ನಲ್ಲಿ ಪತ್ತಯಾದ ಲವ್ ಲೆಟರ್ ಕುರಿತು ಪ್ರಾಂಶುಪಾಲರಿಗೆ ದೂರು ನೀಡಿದ್ದಾಳೆ.

ದೂರಿನಲ್ಲಿ ಈ ಕಿಡಿಗೇಡಿ ಕೃತ್ಯದ ಹಿಂದಿರುವ ವಿದ್ಯಾರ್ಥಿಗಳ ಹೆಸರನ್ನು ಹೇಳಿದ್ದಾಳೆ. ದೂರು ಸ್ವೀಕರಿಸಿದ ಪ್ರಾಂಶುಪಾಲರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಬಳಿಕ ಈ ವಿಚಾರವನ್ನು ಇಲ್ಲಿಗೆ ಅಂತ್ಯಗೊಳಿಸುತ್ತಿರುವುದಾಗಿ ಹೇಳಿದ್ದಾರೆ. ಅಂದು ಶಾಲೆಯಿಂದ ಮನೆಗೆ ಮರಳಿ ವಿದ್ಯಾರ್ಥಿನಿ ನಡೆದ ಘಟನೆಯನ್ನು ಪೋಷಕರ ಬಳಿ ಹೇಳಿದ್ದಾಳೆ. ಇತ್ತ ಪೋಷಕರು ಆಕ್ರೋಶಗೊಂಡಿದ್ದಾರೆ. ಮರು ದಿನ ಪೋಷಕರು ಸೇರಿದಂತೆ ವಿದ್ಯಾರ್ಥಿನಿ ಕುಟುಂಬಸ್ಥರು ಶಾಲೆಗೆ ತೆರಳಿ ಪ್ರಶ್ನಿಸಿದ್ದಾರೆ. 

 

ಮದರಸಾ ವಿದ್ಯಾರ್ಥಿನಿಯರಿಗೆ ಅಮಲು ಆಹಾರ ನೀಡಿ ರೇಪ್, ಮೌಲ್ವಿ ಕಾಮಕೇಳಿ ವಿಡಿಯೋ ರೆಕಾರ್ಡ್!

ಈ ಘಟನೆ ಕುರಿತು ಆತಂರಿಕ ತನಿಖೆ ನಡೆಸಲು ಪ್ರಾಂಶುಪಾಲರು ಯಾವುದೇ ಸೂಚನೆ ನೀಡಿಲ್ಲ. ಕೆಲ ವಿದ್ಯಾರ್ಥಿಗಳ ಮೇಲೆ ವಿದ್ಯಾರ್ಥಿನಿ ಅನುಮಾನ ವ್ಯಕ್ತಪಡಿಸಿದ್ದರೂ ವಿಚಾರಣೆ ನಡೆದಿಲ್ಲ. ಈ ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳ ಮನೆ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಇತ್ತ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಇದೀಗ ಶಾಲಾ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಶಾಲಾ ಆತಂರಿಕ ತನಿಖೆ ನಡೆಸಲು ಪೋಷಕರು ಒತ್ತಾಯಿಸಿದ್ದಾರೆ.

click me!