ಪ್ರವಾದಿ ಮೊಹಮ್ಮದ್ ನಿಂದನೆ, ಸೌದಿ ಆರೇಬಿಯಾದ ಸ್ಟೋರ್‌ಗಳಲ್ಲಿ ಭಾರತದ ಉತ್ಪನ್ನಕ್ಕೆ ನಿರ್ಬಂಧ!

Published : Jun 05, 2022, 08:10 PM IST
ಪ್ರವಾದಿ ಮೊಹಮ್ಮದ್ ನಿಂದನೆ, ಸೌದಿ ಆರೇಬಿಯಾದ ಸ್ಟೋರ್‌ಗಳಲ್ಲಿ ಭಾರತದ ಉತ್ಪನ್ನಕ್ಕೆ ನಿರ್ಬಂಧ!

ಸಾರಾಂಶ

ಕಾನ್ಪುರ ಹಿಂಸಾಚಾರಕ್ಕೆ ಕಾರಣವಾಗಿದ್ದ ಪ್ರವಾದಿ ನಿಂದನೆ ಆರೋಪ ಭಾರತದ ಉತ್ಪನ್ನ ನಿರ್ಬಂಧಿಸಿದ ಸೌದಿ ಸ್ಟೋರ್ಸ್ ವೈಯುಕ್ತಿಕ ಟ್ವೀಟ್ ಭಾರತ ಸರ್ಕಾರದ ನಿಲುವಲ್ಲ, ರಾಯಭಾರ ಅಧಿಕಾರಿಗಳ ಸಭೆ

ನವದೆಹಲಿ(ಜೂ.05): ಪ್ರವಾದಿ ಮೊಹಮ್ಮದ್ ನಿಂದನೆ ಮಾಡಲಾಗಿದೆ ಅನ್ನೋ ಆರೋಪದ ಮೇಲೆ ಕಾನ್ಪುರದಲ್ಲಿ ಭಾರಿ ಹಿಂಸಾಚಾರವೇ ನಡೆದು ಹೋಗಿದೆ. ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಗಲಭೆ ನಡೆದಿದೆ. ಇದೀಗ ಈ ವಿವಾದ ಸೌದಿ ಅರೇಬಿಯಾಗೂ ತಲುಪಿದೆ. ಪ್ರವಾದಿ ನಿಂದನೆ ಕಾರಣದಿಂದ ಸೌದಿ ಸ್ಟೋರ್‌ಗಳಲ್ಲಿ ಭಾರತ ಉತ್ಪನ್ನವನ್ನು ತೆಗೆದು ಹಾಕಲಾಗಿದೆ. ಇದರ ಬೆನ್ನಲ್ಲೇ ಭಾರತ ರಾಯಭಾರಿ ಅಧಿಕಾರಿಗಳು ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ನೂಪುರ್ ಶರ್ಮಾ ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಪ್ರವಾದಿ ಮೊಹಮ್ಮದ್‌ಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ಪರಿಣಾಮ ಕಾನ್ಪುರದಲ್ಲಿ ಭಾರಿ ಗಲಭೆ ಸೃಷ್ಟಿಯಾಗಿತ್ತು. ಇದರ ಬಿಸಿ ಅರಬ್ ರಾಷ್ಟ್ರಕ್ಕೂ ತಟ್ಟಿದೆ. ಸೌದಿ ಅರೇಬಿಯಾ, ಬಹ್ರೇನ್ ಹಾಗು ಕುವೈಟ್ ಸೂಪರ್‌ಸ್ಟೋರ್ಸ್‌ಗಳಿಂದ ಭಾರತ ಉತ್ಪನ್ನವನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಸೌದಿಯಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಸೌದಿ ವಿದೇಶಾಂಗ ಸಚಿವಾಲಯ ಕಚೇರಿಯಲ್ಲಿ ಸಭೆ ಸೇರಿ ಭಾರತದ ನಿಲುವು ಸ್ಪಷ್ಟಪಡಿಸಿದ್ದಾರೆ.

Kanpur Violence ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ನೂಪುರ್ ಶರ್ಮಾ ಅಮಾನತು!

ಪ್ರವಾದಿ ಮೊಹಮ್ಮದ್ ನಿಂದನೆ ಹೇಳಿಕೆ, ಟ್ವೀಟ್‌ಗಳು ಭಾರತ ಸರ್ಕಾರದ ನಿಲುವಲ್ಲ. ಕೆಲ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ. ಜನಪ್ರತಿನಿಧಿ ಹೇಳಿಕೆಗೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಟ್ವೀಟ್ ಮುಂದಿಟ್ಟುಕೊಂಡು ಇದು ಭಾರತ ಸರ್ಕಾರದ ನಿಲುವು ಎಂದು ನಿರ್ಧಾರ ತೆಗೆದುಕೊಳ್ಳುವುದು ಸಮಂಜವಲ್ಲ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ. ಇಲ್ಲಿ ಎಲ್ಲಾ ಧರ್ಮಕ್ಕೂ ಗೌರವವಿದೆ. ನಿಯಮ ಉಲ್ಲಂಘನೆ ಮಾಡಿದವರನ್ನೂ ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುತ್ತದೆ ಎಂದು ರಾಯಭಾರ ಕಚೇರಿ ಅಧಿಕಾರಿಗಳು ಹೇಳಿದ್ದಾರೆ.

ಭಾರತ ಹಾಗೂ ಕತಾರ್ ಸಂಬಂಧ ವಿರುದ್ಧವಾಗಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಈ ರೀತೀಯ ಕಾಮೆಂಟ್ ಮಾಡುತ್ತಿದೆ. ಈ ಮೂಲಕ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ. ಈ ರೀತಿಯ ಕಮೆಂಟ್, ನಿಂದನೆ, ಅವಹೇಳನವನ್ನು ಭಾರತ ಸರ್ಕಾರ ಎಂದಿಗೂ ಬೆಂಬಲಿಸುವುದಿಲ್ಲ. ಇದರ ಪರವಾಗಿಯೂ ಇಲ್ಲ. ನಮ್ಮ ದ್ವಿಪಕ್ಷೀಯ ಸಂಬಂಧ ವೃದ್ಧಿಸಲು ಇಂತಹ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳು ಸಭೆಯಲ್ಲಿ ಹೇಳಿದ್ದಾರೆ. ರಾಯಭಾರ ಕಚೇರಿ ಅಧಿಕಾರಗಳ ಮಧ್ಯಪ್ರವೇಶದಿಂದ ಸೌದಿ ಅರೆಬಿಯಾದಲ್ಲಿ ಪರಿಸ್ಥಿತಿ ತಿಳಿಗೊಂಡಿದೆ. 

ಇತ್ತೀಚೆಗೆ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಟೀವಿ ಚರ್ಚೆಯೊಂದರಲ್ಲಿ ಪ್ರವಾದಿ ಮೊಹಮ್ಮದ್‌ರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಶುಕ್ರವಾರದ ನಮಾಜ್‌ ನಂತರ ಒಂದು ಗುಂಪಿನವರು ಕಾನ್ಪುರದ ಪರೇಡ್‌, ನಯಿ ಸಡಕ್‌ ಹಾಗೂ ಯತೀಮ್‌ಖಾನಾ ಪ್ರದೇಶಗಳಲ್ಲಿ ಪೊಲೀಸ್‌ ಠಾಣೆಗಳ ಮೇಲೆ ಬಾಂಬ್‌ ಎಸೆದು, ಕಲ್ಲು ತೂರಾಟ ನಡೆಸಿ, ಸುತ್ತಮುತ್ತಲಿನ ಅಂಗಡಿಗಳ ಮೇಲೂ ದಾಳಿ ನಡೆಸಿದ್ದರು. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು.

Kanpur violence: ಸಿಎಎ ವಿರೋಧಿ, ಮುಸ್ಲಿಂ ನಾಯಕ ಹಯಾತ್ ಜಫಾರಿ ಹಶ್ಮಿ ಬಂಧನ

‘ಶನಿವಾರ ವಿಡಿಯೋ ದೃಶ್ಯಗಳ ಆಧಾರದ ಮೇಲೆ ಗಲಭೆಕೋರರನ್ನು ಬಂಧಿಸಿ, ಇನ್ನಷ್ಟುಜನರ ಮೇಲೆ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಾಗಿದೆ. ಬೀದಿಗಿಳಿದು ದಾಂಧಲೆ ನಡೆಸುವವರ ಆಸ್ತಿ ಜಪ್ತಿ ಮಾಡುವ ಅಥವಾ ಸದರಿ ಪ್ರದೇಶದ ಅಕ್ರಮ ಮನೆಗಳನ್ನು ಬುಲ್ಡೋಜರ್‌ ಹರಿಸಿ ನೆಲಸಮಗೊಳಿಸುವ ಕಠಿಣ ಕ್ರಮವನ್ನೇ ಇವರ ಮೇಲೂ ಪ್ರಯೋಗಿಸಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಂಗ್ಲಾ ಹಿಂದೂ ಹಂತಕರ ಶಿಕ್ಷಿಸಿ : ಭಾರತ ಆಗ್ರಹ
ತಿರುವನಂತಪುರ ಪಾಲಿಕೆಗೆ ಬಿಜೆಪಿ ಮೇಯರ್‌: ಇದೇ ಮೊದಲು