world environment day ಪರಿಸರಕ್ಕೆ ಪೂರಕವಾದ ಜೀವನ ಶೈಲಿ ರೂಪಿಸಲು ಮೋದಿ ಕರೆ!

Published : Jun 05, 2022, 07:14 PM ISTUpdated : Jun 05, 2022, 07:19 PM IST
world environment day  ಪರಿಸರಕ್ಕೆ ಪೂರಕವಾದ ಜೀವನ ಶೈಲಿ ರೂಪಿಸಲು ಮೋದಿ ಕರೆ!

ಸಾರಾಂಶ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಧಾನಿ ಮೋದಿ ಭಾಷಣ ಕಳೆದ 8 ವರ್ಷಗಳಲ್ಲಿ ಪರಿಸರ ಉಳಿಸಲು ಹಲವು ಯೋಜನೆ ಜಾರಿ ಜಾಗತಿಕ ಕಾರ್ಯಕ್ರಮದಲ್ಲಿ ಪರಿಸರ ಉಳಿಸಲು ಕರೆ ನೀಡಿದ ಮೋದಿ

ನವದೆಹಲಿ(ಜೂ.05): ವಿಶ್ವ ಪರಿಸರ ದಿನಾಚರಣೆಯಿಂದು ಪರಿಸರಕ್ಕಾಗಿ ಜೀವನಶೈಲಿ( LiFE) ಆಂದೋಲವನ್ನು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದಾರೆ. ವಿಶ್ವಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗತಿಕ ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಮೋದಿ ಪರಿಸರ ಉಳಿಸಲು ಕರೆ ನೀಡಿದ್ದಾರೆ.

 ಪರಿಸರಕ್ಕಾಗಿ ಜೀವನಶೈಲಿ( LiFE) ಆಂದೋಲ ಘೋಷಣೆ ಮಾಡಲು ಸಂತಸವಾಗುತ್ತಿದೆ. ಈ ಆಂದೋಲನಕ್ಕೆ ವಿಶ್ವದ ಬಹುತೇಕ ರಾಷ್ಟ್ರಗಳು ಬೆಂಬಲ ಸೂಚಿಸಿದೆ. ಈ ಆಂದೋಲನದ ಉದ್ದೇಶ ಎಂದರೆ ನಾವು ಪರಿಸರಕ್ಕೆ ಪೂರಕವಾಗಿ ಜೀವನ ಶೈಲಿಯನ್ನು ರೂಪಿಸಬೇಕು. ನಮ್ಮ ಜೀವನಶೈಲಿ ಎಂದಿಗೂ ಪರಿಸರಕ್ಕೆ ಮಾರಕವಾಗಿರಬಾರದು ಎಂದು ಮೋದಿ ಹೇಳಿದ್ದಾರೆ.

ಸಬ್‌ಕಾ ವಿಶ್ವಾಸ್, ಸಬ್‌ಕಾ ಪ್ರಯಾಸ್‌: ಎಂಟು ವರ್ಷದ ಸಾಧನೆಯ ಹೈಲೈಟ್ಸ್‌ ಶೇರ್ ಮಾಡಿದ ಮೋದಿ!

ನಮ್ಮ ಪೂರ್ವಜರು ಪರಿಸರದೊಂದಿದೆ ಅವಿನಾಭಾವ ಸಂಬಂಧ ಹೊಂದಿದ್ದರು. ಈ ಮೂಲಕ ಪರಿಸರವನ್ನು ಉಫಿಸಿಕೊಂಡು, ಬೆಳೆಸಿಕೊಂಡು ಬಂದಿದ್ದರು. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ವಿಶ್ವ ಇದೀಗ ಪರಿಸರವನ್ನು ಉಳಿಸಲು ಬೇಕಾದ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಇದಕ್ಕೆ ಕಳೆದ 8 ವರ್ಷಗಳಲ್ಲಿ ಭಾರತ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಮೂಲಕ ಪರಿಸರವನ್ನು ಉಳಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಮೋದಿ ಹೇಳಿದ್ದಾರೆ. 

ನಮ್ಮ ದೇವರು,  ದೇವತೆಗಳು, ಪ್ರಾಣಿಗಳು ಪರಿಸರ ಜೊತೆಗೆ ಹೊಂದಿಕೊಂಡಿದೆ. ನಮ್ಮ ಪೂರ್ವಜರು ಪರಿಸರಕ್ಕೆ ಎಂದಿಗೂ ಧಕ್ಕೆ ಬರದ ರೀತಿ ಜೀವಿಸಿದ್ದರು. ಪುನರ್ ಬಳಕೆ ಇಂಧನಗಳು, ಶಕ್ತಿಗಳ ಕುರಿತು ನಮ್ಮ ಸರ್ಕಾರ ವಿಶೇಷ ಒತ್ತು ನೀಡಿದೆ. ಈ ಮೂಲಕ ಪರಿಸರಕ್ಕೆ ಪೂರಕವಾದ ವಾತಾವರಣ ನಿರ್ಮಿಸಲು ಬದ್ಧವಾಗಿದೆ ಎಂದರು.

ಮಹತ್ಮಾ ಗಾಂಧಿ ಶೂನ್ಯ ಇಂಗಾಲದ ಪರಿಕಲ್ಪನೆ ಒತ್ತು ನೀಡಿದ್ದರು. ಈ ನಿಟ್ಟಿನಲ್ಲಿ ಯಶಸ್ವಿ ರಾಷ್ಟ್ರಗಳಿಂದ ನಾವು ಕಲಿಯುತ್ತೇವೆ. ನಮ್ಮ ಯಶಸ್ವಿ ಕಾರ್ಯತಂತ್ರಗಳನ್ನು ಹಂಚಿಕೊಳ್ಳುತ್ತೇವೆ. ಇದರಿಂದ ಇತರ ದೇಶಗಳಿಗೆ ಸರಿದಾರಿಯಲು ಮುನ್ನಡೆಯಲು ಸಾಧ್ಯವಾಗಲಿದೆ ಎಂದು ಮೋದಿ ಹೇಳಿದ್ದಾರೆ.

ಅಂಗವಿಕಲನಿಗೆ ಆಧಾರ್ ಕಾರ್ಡ್‌ ಕೊಡಿಸಿದ ಪ್ರಧಾನಿ ಮೋದಿ: 2 ವರ್ಷದ ಸಮಸ್ಯೆಗೆ ಎರಡೇ ದಿನದಲ್ಲಿ ಪರಿಹಾರ..!

ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಲು ನಾವೆಲ್ಲ ಬದ್ಧರಾಗಿದ್ದೇವೆ.  ಭಾರತ 2.5 ಟನ್ ಮಿಲಿಯನ್ ಇಂಗಾಲವನ್ನು ಕಡಿಮೆ ಮಾಡಿದೆ. ಕಳೆದ ಕೆಲ ವರ್ಷಗಳಲ್ಲಿ  370 ಮಿಲಿಯನ್ ಎಲ್ಇಡಿ ಬಲ್ಬ್ ನೀಡಲಾಗಿದೆ. ಇದು ವಿದ್ಯುತ್ ಶಕ್ತಿಯನ್ನು ಉಳಿಸುವ ಕೆಲಸ ಮಾಡಿದೆ. ಇದರಿಂದ 40 ಮಿಲಿಯನ್ ಕಾರ್ಬನ್ ಡೈಆಕ್ಸೈಡ್ ಕಡಿತಗೊಂಡಿದೆ ಎಂದರು. ಭಾರತ ಕೈಗೊಂಡಿರುವ ಹಲವು ಕ್ರಮಗಳು ಪರಿಸರಕ್ಕೆ ಪೂರಕವಾಗಿದೆ ಎಂದರು.

 

ಮಣ್ಣು ಉಳಿಸಿ ಅಭಿಯಾನದಲ್ಲಿ ಮೋದಿ ಭಾಗಿ
ಭಾನುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಈಶ ಫೌಂಡೇಶನ್‌ ಮುಖ್ಯಸ್ಥ ಸದ್ಗುರು ಅವರ ‘ಮಣ್ಣು ಉಳಿಸಿ’ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ  ‘ಮಣ್ಣು ಉಳಿಸಿ ಅಭಿಯಾನ’ಕ್ಕೆ ಬೆಂಬಲ ನೀಡದರು.  

ಸದ್ಗುರು 100 ದಿನದ ಅಭಿಯಾನ:
ಅಳಿವಿನಂಚಿನಲ್ಲಿರುವ ಮಣ್ಣನ್ನು ಉಳಿಸಲು ಸದ್ಗುರು ಜಾಗತಿಕ ಅಭಿಯಾನ ನಡೆಸುತ್ತಿದ್ದಾರೆ. ಸದ್ಗುರು ಅವರು 100 ದಿನಗಳ ‘ಮಣ್ಣು ಉಳಿಸಿ’ ಬೈಕ್‌ ರಾರ‍ಯಲಿ ಅಭಿಯಾನವನ್ನು ಕಳೆದ ಮಾಚ್‌ರ್‍ನಲ್ಲಿ ಲಂಡನ್‌ನ ಸಂಸತ್‌ ಚೌಕದಲ್ಲಿ ಆರಂಭಿಸಿದ್ದರು. ಬಳಿಕ 27 ದೇಶ ಸುತ್ತಿ ಅಲ್ಲೆಲ್ಲ ಮಣ್ಣಿನ ಫಲವತ್ತತೆಯ ಅರಿವು ಮೂಡಿಸಿ ಭಾರತಕ್ಕೆ ಇತ್ತೀಚೆಗೆ ಪ್ರವೇಶಿಸಿದ್ದಾರೆ. ‘ಆಜಾದಿ ಕಾ ಅಮೃತ ಮಹೋತ್ಸವ’ ಭಾಗವಾಗಿ ಭಾನುವಾರ ರಾಜಧಾನಿ ದೆಹಲಿಗೆ ಸದ್ಗುರು ತೆರಳುತ್ತಿದ್ದಾರೆ. ಜೂನ್‌ 5ರಂದು ಅವರ ಅಭಿಯಾನದ 75ನೇ ದಿನ ಕೂಡ ಹೌದು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ