
ಪಂಜಾಬ್(ಜು.26): ಕೇಂದ್ರದ ಕೃಷಿ ಕಾಯ್ದೆ ವಿರೋಧಿ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಖಲಿಸ್ತಾನ ಉಗ್ರರು ನಿಯಂತ್ರಿಸುತ್ತಿದ್ದಾರೆ ಅನ್ನೋ ಆರೋಪ ಹೋರಾಟದ ಆರಂಭದಿಂದಲೂ ಕೇಳಿಬರುತ್ತಿದೆ. ಇನ್ನು ಜನವರಿ 26ರಂದು ರೈತ ಸಂಘಟನೆಗಳು ಆಯೋಜಿಸಿದ ಟ್ರಾಕ್ಟರ್ ರ್ಯಾಲಿ ಈ ಆರೋಪಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು. ಇದೀಗ ಈ ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡ ಪಂಜಾಬ್ ಕಿಸಾನ್ ಯೂನಿಯನ್ ಅಧ್ಯಕ್ಷ ಈ ಮಾತನ್ನು ಹೇಳಿದ್ದಾರೆ. ರೈತ ಪ್ರತಿಭಟನೆಯನ್ನು ಖಲಿಸ್ತಾನ ಉಗ್ರ ಸಂಘಟನೆ ಹೈಜಾಕ್ ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಈ ವಿಚಾರ ಬಹಿರಂಗ ಪಡಿಸಿದ ಮುಖಂಡನಿಗೆ ಸಂಯುಕ್ತ ಕಿಸಾನ್ ಮೋರ್ಚಾ ಗೇಟ್‌ಪಾಸ್ ನೀಡಿದೆ.
ಪಂಜಾಬ್ ಕಿಸಾನ್ ಯುನಿಯನ್ ಕೇಂದ್ರದ ವಿರುದ್ಧ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಕಳೆದ 9 ತಿಂಗಳಿನಿಂದಲೂ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಕೇಂದ್ರದ ಕೃಷಿ ಮಸೂದೆ ರದ್ದು ಮಾಡಲು ಆಗ್ರಹಿಸಿದ್ದಾರೆ. ಇದೀಗ ರೈತ ಸಂಘಟನೆಗಳು ರಾಜ್ಯಗಳಲ್ಲಿ ತಮ್ಮ ಹೋರಾಟ ಚುರುಕುಗೊಳಿಸಲು ಅಗಸ್ಟ್ 15 ರಂದು ಟ್ರಾಕ್ಟರ್ ರ್ಯಾಲಿ ಆಯೋಜಿಸಿದೆ. ಈ ರ್ಯಾಲಿ ಕುರಿತು ಮಾತನಾಡಿದ ಪಂಜಾಬ್ ಕಿಸಾನ್ ಯುನಿಯನ್ ಅಧ್ಯಕ್ಷ ರುಲ್ಡು ಸಿಂಗ್ ಮಾನಸ, ಖಲಿಸ್ತಾನ ಆತಂಕ ವ್ಯಕ್ತಪಡಿಸಿದ್ದಾರೆ.
ರೈತ ಹೋರಾಟವನ್ನು ಖಲಿಸ್ತಾನ ಉಗ್ರ ಸಂಘಟನೆ ಹೈಜಾಕ್ ಮಾಡುವ ಆತಂಕವಿದೆ. ರ್ಯಾಲಿ ಆಯೋಜನೆ ಮೂಲಕ ಖಲಿಸ್ತಾನ ತನ್ನ ಉದ್ದೇಶ ಈಡೇರಿಸಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಖಲಿಸ್ತಾನ ರೈತ ಸಂಘಟನೆಯನ್ನು ಹೈಜಾಕ್ ಮಾಡಿದಂತೆ ಕಾಣುತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದೇ ವೇಳೆ ಖಲಿಸ್ತಾನ ಉಗ್ರ ಸಂಘಟನೆ ಮುಖಂಡ ಜರ್ನೈಲ್ ಸಿಂಗ್ ಬಿಂದ್ರನ್‌ವಾಲೆ ಸೇರಿದಂತೆ ಖಲಿಸ್ತಾನ ಉಗ್ರರು ವಿದೇಶದಲ್ಲಿ ಕುಳಿತು ಭಾರತದಲ್ಲಿ ದೇಶ ವಿರೋಧಿ ಚಟುವಟಿಕೆಗೆ ಸಂಚು ರೂಪಿಸುತ್ತಾರೆ ಎಂದು ಹರಿಹಾಯ್ದಿದ್ದರು.
ರುಲ್ಡು ಸಿಂಗ್ ಹೇಳಿಕೆಗೆ ಪಂಜಾಬ್ ರೈತ ಸಂಘಟನೆಗಳ ಮೂಲ ಸಂಘಟನೆ ಸಂಯುಕ್ತ ಕಿಸಾನ್ ಗರಂ ಆಗಿದೆ. ಇಷ್ಟೇ ಅಲ್ಲ ರುಲ್ಡು ಸಿಂಗ್ ಮಾನಸರನ್ನು ಪಂಜಾಬ್ ಕಿಸಾನ್ ಯೂನಿಯನ್ ಅಧ್ಯಕ್ಷಸ್ಥಾನದಿಂದ ಕಿತ್ತೆಸೆದಿದೆ.
ಕೃಷಿ ಮಸೂದೆ ವಿರುದ್ಧ ಹೋರಾಟ ಮಾಡುತ್ತಾ ದೆಹಲಿ, ಪಂಜಾಬ್‌ನಲ್ಲಿ ರೈತರನ್ನು ಸಂಘಟಿಸಿದ ರುಲ್ಡು ಸಿಂಗ್ ಆಂತರಿಕ ವಿಚಾರ ಬಹಿರಂಗಪಡಿಸಿದ ಕಾರಣಕ್ಕೆ ಸಂಘಟನೆಯಿಂದ ಕಿತ್ತೆಸೆಯಲಾಗಿದೆ. ರೈತ ಸಂಘಟನೆಗಳ ಈ ನಡೆ ಇದೀಗ ಹಲವು ಅನುಮಾನ ಮೂಡಿಸಿದೆ. ಇಷ್ಟೇ ಅಲ್ಲ ರೈತ ಸಂಘಟನೆಗಳ ಹೋರಾಟದ ಹಿಂದೆ ಖಲಿಸ್ತಾನ ಉಗ್ರ ಸಂಘಟನೆ ಕೈವಾಡದ ಶಂಕೆಗಳು ಬಲಗೊಳ್ಳುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ