ಹಿಮಾಚಲ ಭೂಕುಸಿತದಲ್ಲಿ ಸಾಯುವ ನಿಮಿಷಗಳ ಮೊದಲು ಫೋಟೋ ಶೇರ್ ಮಾಡಿದ್ದ ದೀಪಾ

Published : Jul 26, 2021, 03:44 PM ISTUpdated : Jul 26, 2021, 06:49 PM IST
ಹಿಮಾಚಲ ಭೂಕುಸಿತದಲ್ಲಿ ಸಾಯುವ ನಿಮಿಷಗಳ ಮೊದಲು ಫೋಟೋ ಶೇರ್ ಮಾಡಿದ್ದ ದೀಪಾ

ಸಾರಾಂಶ

ಹಿಮಾಚಲ ಪ್ರದೇಶ ಭೂಕುಸಿತದಲ್ಲಿ ಸಾವನ್ನಪ್ಪಿದ್ದ ಡಾ. ದೀಪಾ ಕೆಲವೇ ನಿಮಿಷ ಮೊದಲು ಚಂದದ ಫೋಟೋ ಟ್ವೀಟ್ ಮಾಡಿದ್ದ ವೈದ್ಯೆ

ನವದೆಹಲಿ(ಜು.26): ಹಿಮಾಚಲ ಪ್ರದೇಶದ ಪರ್ವತ ಕಿನ್ನೌರ್ ಜಿಲ್ಲೆಯಲ್ಲಿ ಭೂಕುಸಿತದಿಂದ ವಾಹನಗಳ ಮೇಲೆ ಬಂಡೆಗಳು ಬಿದ್ದು ಸಾವನ್ನಪ್ಪಿದ ಒಂಬತ್ತು ಪ್ರವಾಸಿಗರಲ್ಲಿ ಜೈಪುರದ ಆಯುರ್ವೇದ ವೈದ್ಯರೊಬ್ಬರು ಸೇರಿದ್ದಾರೆ. ದುರಂತದ ಕೆಲವೇ ನಿಮಿಷಗಳ ಮೊದಲು ಪೋಸ್ಟ್ ಮಾಡಿದ ಡಾ. ದೀಪಾ ಶರ್ಮಾ ಅವರ ಕೊನೆಯ ಟ್ವೀಟ್‌ ಈಗ ವೈರಲ್ ಆಗಿದೆ.

ನಾಗರಿಕರಿಗೆ ಅವಕಾಶವಿರುವ ಭಾರತದ ಕೊನೆಯ ಪ್ರದೇಶದಲ್ಲಿ ನಿಂತಿದ್ದೇನೆ ಎಂದು ದೀಪಾ ಕ್ಯಾಪ್ಶನ್ ಕೊಟ್ಟಿದ್ದಾರೆ. ಹಿಮಾಚಲ ಪ್ರವಾಸದ ಸುಂದರವಾದ ಫೋಟೋಸ್ ಟ್ವಿಟ್ಟರ್ ಫೀಡ್ ಮಾಡಿರುವ 34 ವರ್ಷದ ವೈದ್ಯೆ ನಾಗಸ್ತಿ ಐಟಿಬಿಪಿ ಚೆಕ್-ಪೋಸ್ಟ್ನಲ್ಲಿ ಮಧ್ಯಾಹ್ನ 12.59 ಕ್ಕೆ ತನ್ನ ಕೊನೆಯ ಪೋಸ್ಟ್ನಲ್ಲಿ ಕ್ಯಾಮೆರಾಗೆ ಸಂತೋಷದಿಂದ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಎಂ.ಎಸ್.ಶರ್ಮಾ ಪ್ರಯಾಣದ ಫೋಟೋವನ್ನು ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ, ಮಧ್ಯಾಹ್ನ 1.25 ಕ್ಕೆ ಸಾಂಗ್ಲಾ-ಚಿಟ್ಕುಲ್ ರಸ್ತೆಯ ಬಸ್ತೇರಿ ಬಳಿ ಭೂಕುಸಿತ ಸಂಭವಿಸಿದೆ.

ಉತ್ತರಾಖಂಡ್ ಯುದ್ಧ ಸ್ಮಾರಕಕ್ಕೆ ಬೇಕಿದೆ ಸಹೃದಯಿಗಳ ಕೊಡುಗೆ!

ಘಟನೆಯ ವಿಡಿಯೋ ತುಣುಕಿನಲ್ಲಿ ದೊಡ್ಡ ಬಂಡೆಗಳು ಒಡೆದು ಕೆಳಗಿನ ಕಣಿವೆಯಲ್ಲಿ ಉರುಳುತ್ತಿರುವುದು ಕಂಡುಬಂತು. ಸೇತುವೆಯ ಒಂದು ಭಾಗವು ಬಂಡೆಯೊಂದನ್ನು ಹೊಡೆದ ನಂತರ ನದಿಯಲ್ಲಿ ಮುಳುಗುತ್ತಿರುವುದನ್ನು ಕಾಣಬಹುದು.

ಅಪಘಾತದಲ್ಲಿ ಪ್ರಾಣಹಾನಿ ಸಂಭವಿಸಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ2 ಲಕ್ಷ ಮತ್ತು ಪ್ರಧಾನ ಮಂತ್ರಿ ರಾಷ್ಟ್ರೀಯದಿಂದ ಗಾಯಗೊಂಡವರಿಗೆ ₹ 50,000 ನೆರವು ನೀಡುವುದಾಗಿ ಮೋದಿ ಘೋಷಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು