ಟಚ್ ಆಯ್ತು ಅಂತ ಹೊಡೆಯಲು ಬಂದ ಕಾರು ಚಾಲಕ: ತಳ್ಳುಗಾಡಿಯವನ ಪವರ್‌ಫುಲ್ ಪಂಚ್‌ಗೆ ಶಾಕ್

Published : Apr 13, 2025, 05:48 PM ISTUpdated : Apr 13, 2025, 07:02 PM IST
ಟಚ್ ಆಯ್ತು ಅಂತ ಹೊಡೆಯಲು ಬಂದ ಕಾರು ಚಾಲಕ: ತಳ್ಳುಗಾಡಿಯವನ ಪವರ್‌ಫುಲ್ ಪಂಚ್‌ಗೆ ಶಾಕ್

ಸಾರಾಂಶ

ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಕಾರು ತಳ್ಳುಗಾಡಿಗೆ ತಗುಲಿತೆಂದು ತರಕಾರಿ ವ್ಯಾಪಾರಿಗೆ ಥಳಿಸಲು ಬಂದ ಕಾರು ಮಾಲೀಕನಿಗೆ ವ್ಯಾಪಾರಿಯೇ ತಿರುಗೇಟು ನೀಡಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

ಸಂಭಾಲ್‌: ಕಾರಿಗೆ ತರಕಾರಿ ಮಾರುತ್ತಿದ್ದ ತಳ್ಳುಗಾಡಿ ಟಚ್‌ ಆಯ್ತು ಎಂದು ಥಳಿಸಲು ಬಂದ ಕಾರು ಮಾಲೀಕನಿಗೆ ತಳ್ಳುಗಾಡಿಯಲ್ಲಿ ತರಕಾರಿ ಮಾರ್ತಿದ್ದ ಬೀದಿ ವ್ಯಾಪಾರಿಯೊಬ್ಬ ಸರಿಯಾಗಿ ಬಾರಿಸಿದ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹಲವರು ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಈ ಘಟನೆ ನಡೆದಿದೆ. ಟೊಮೆಟೋ, ಹೀರೆಕಾಯಿ ಮುಂತಾದ ಹಲವು ತರಕಾರಿಗಳನ್ನು ಇರಿಸಿಕೊಂಡು ಬೀದಿಯಲ್ಲಿ ತಳ್ಳುಗಾಡಿಯ ಮೂಲಕ ಸಣ್ಣ ವ್ಯಾಪಾರಿಯೊಬ್ಬ ಗಾಡಿಯನ್ನು ತಳ್ಳುತ್ತಾ ತರಕಾರಿ ಮಾರುತ್ತಾ ಸಾಗುತ್ತಿದ್ದ ವೇಳೆ ಘಟನೆ ನಡೆದಿದೆ. ಆದರೆ ಕಾರಿಗೆ ಈ ತಳ್ಳುಗಾಡಿ ಹೇಗೆ ತಾಗಿದೆ ಎಂಬುದು ವೀಡಿಯೋದಲ್ಲಿ ಕಂಡು ಬರುತ್ತಿಲ್ಲ,

ಘರ್ ಕೇ ಕಲೇಶ್ ಎಂಬ ಎಕ್ಸ್‌ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ವೀಡಿಯೋದಲ್ಲಿ ಕಾಣಿಸುವಂತೆ ಸಿಟ್ಟಿಗೆದ್ದು ಕಾರಿನಿಂದ ಇಳಿದು ಬರುವ ಮಾಲೀಕ ಬೀದಿ ವ್ಯಾಪಾರಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಬಹುಶಃ ಬಡಪಾಯಿ ಬೀದಿ ವ್ಯಾಪಾರಿ ಈತನ ಏಟು ತಿಂದು ಸುಮ್ಮನಿರುತ್ತಾನೆ ಎಂದು ಆತ ಭಾವಿಸಿದನೋ ಏನೋ ಆದರೆ ಆತನ ಊಹೆ ತಪ್ಪಾಗಿದೆ. ಬೀದಿ ವ್ಯಾಪಾರಿಯಾಗಿದ್ದರು ಧೃಡಕಾಯ ಹೊಂದಿದ್ದ ಆತ ತನ್ನ ಮೇಲೆ ಸವಾರಿ ಮಾಡಲು ಬಂದ ಕಾರು ಮಾಲೀಕನಿಗೆ ಸರಿಯಾಗಿ ಬಾರಿಸಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎರಡು ಲಕ್ಷಕ್ಕೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿದ್ದು, ಹಲವರು ಕಾಮೆಂಟ್ ಮಾಡಿದ್ದಾರೆ.

ನೆಟ್ಟಿಗರ ಕಾಮೆಂಟ್ ಹೇಗಿದೆ ನೋಡಿ
ಈ ರೀತಿ ಫೈಟ್ ಮಾಡುವ ಮೊದಲು ಶ್ರೀಮಂತರಾಗಿದ್ದರೆ ಸಾಲದು, ಸಧೃಡವಾಗಿದ್ದೇವಾ ಎಂದು ಕೂಡ ಯೋಚನೆ ಮಾಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಜಗಳ ಮಾಡಲು ಹೋಗಿ ಕಾರು ಮಾಲೀಕನಿಗೆ ಏನ್ ಸಿಕ್ತು ಅತ್ತ ಗಾಡಿಗೂ ಗೀರುಗಳಾಯ್ತು ಹಾಗೂ ತರಕಾರಿ ವ್ಯಾಪಾರಿಯಿಂದ ಏಟುಗಳನ್ನು ತಿನ್ನಬೇಕಾಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಫಿಟ್‌ನೆಸ್ ತುಂಬಾ ಅಗತ್ಯ ಎಂಬುದು ಇದರಿಂದ ಸಾಬೀತಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆತ ಬಡವನಾಗಿರಬಹುದು ಆದರೆ ದುರ್ಬಲವಾದ ವ್ಯಕ್ತಿ ಅಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸರಿಯಾಗಿ ವಾಕ್ ಮಾಡೋಕೆ ಆಗದ ಅಂಕಲ್ ಫೈಟ್ ಮಾಡಲು ಹೋದ್ರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರತಿದಿನ ದೈಹಿಕಶಕ್ತಿಯ ಶ್ರಮದ ಕೆಲಸ ಮಾಡುವುದರಿಂದ ಆತ ಶಕ್ತಿಶಾಲಿಯಾಗಿದ್ದಾನೆ ಎಂದು ಕೆಲವರು ತರಕಾರಿ ವ್ಯಾಪಾರಿಯ ಶಕ್ತಿ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದಾರೆ.  ಒಟ್ಟಿನಲ್ಲಿ ಬದನೆ ಕೊಟ್ಟು ಕುದನೆ ತಗೊಂಡ ಎಂಬಂತಾಗಿದೆ ಕಾರು ಚಾಲನ ಸ್ಥಿತಿ, ಸುಮ್ಮನಿರೋದು ಬಿಟ್ಟು ತರಕಾರಿ ವ್ಯಾಪಾರಿಯನ್ನು ಥಳಿಸಲು ಹೋಗಿ ತಾನೇ ಆತನಿಂದ ಸರಿಯಾಗಿ ಏಟು ತಿಂದಿದ್ದಾನೆ. 

ಎಸಿ ಇಲ್ಲದೇಯೂ ಮುಖೇಶ್ ಅಂಬಾನಿ ಅವರ 'ಅಂಟಿಲಿಯಾ' ತಂಪಾಗಿರೋದು ಹೇಗೆ?

ಗೋಡೆ ಕುಸಿದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದವ ಸಾವು

ನವದೆಹಲಿ: 5 ಅಂತಸ್ಥಿನ ಕಟ್ಟಡದ ಗೋಡೆಯೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ ಒಬ್ಬರು ಸಾವನ್ನಪ್ಪಿ ಮೂವರು ಗಾಯಗೊಂಡಂತಹ ಆಘಾತಕಾರಿ ಘಟನೆ ದೆಹಲಿಯ ಚಂದೇರ್ ವಿಹಾರ್‌ನಲ್ಲಿ ನಡೆದಿದೆ. ಈ ಘಟನೆಯ ದೃಶ್ಯಾವಳಿ ಈಗ ಅಲ್ಲಿನ ಸಿಸಿ ಕ್ಯಾಮರಾವೊಂದರಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ಶುಕ್ರವಾರ  ದೆಹಲಿಯಲ್ಲಿ ಅತೀ ಅಪರೂಪದ ಧೂಳಿನ ಸುಂಟರಗಾಳಿ ಸಂಭವಿಸಿತ್ತು. ಇದೇ ಸಮಯದಲ್ಲಿ ನಡೆದ ಘಟನೆ ಇದಾಗಿದ್ದು, ಇದರ ವೀಡಿಯೋ ಈಗ ವೈರಲ್ ಆಗುತ್ತಿದೆ. ಜನಸಂದಣಿಯ ರಸ್ತೆಯ ಮೇಲೆ ಐದಂತಸ್ಥಿನ ಕಟ್ಟಡದ ಗೋಡೆಯೊಂದು ಇದ್ದಕ್ಕಿದ್ದಂತೆ ಬಿದ್ದಿದ್ದು, ರಸ್ತೆಯಲ್ಲಿ ನಡೆದು ಹೋಗುತ್ತಿದ್ದವರ ಪಾಲಿಗೆ ಯಮಸ್ವರೂಪಿಯಾಗಿದೆ. ಘಟನೆಯಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಂದರ್ ವಿಹಾರ್‌ನ ಬೀದಿಯಲ್ಲಿ ಜನ ಎಂದಿನಂತೆ ನಡೆದು ಹೋಗುತ್ತಿದ್ದಾಗ ಕಟ್ಟಡದ ಒಂದು ಭಾಗವು ಮೇಲಿನಿಂದ ಕುಸಿದು ಬಿದ್ದಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?