
ನವದೆಹಲಿ (ಆ.28) ದೇಶಾದ್ಯಂತ ಆತಂಕಕ್ಕೆ ಕಾರಣವಾಗಿದ್ದ ಸಂಭಲ್ ಗಲಭೆಯನ್ನು ನಿಯಂತ್ರಿಸಿ ಶಾಂತಿ ಸ್ಥಾಪಿಸಿದ್ದ ಉತ್ತರ ಪ್ರದೇಶ ಸರ್ಕಾರ ಸಮಿತಿಯೊಂದನ್ನು ನೇಮಕ ಮಾಡಿ ವರದಿಗೆ ಸೂಚಿಸಿತ್ತು. ಮೂವರು ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ಸಂಭಲ್ ಗಲಭೆ, ವಾದ ವಿವಾದ, ಸಂಭಲ್‌ನ ಗಲಭೆಗಳಿಗೆ ಕಾರಣಗಳನ್ನು ಹುಡುಕು ವರದಿ ತಯಾರಿಸಿದೆ. ಈ ವರದಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿನ ಕೆಲ ಸ್ಫೋಟಕ ಅಂಶಗಳು ಬಯಲಾಗಿದೆ. ಪ್ರಮುಖವಾಗಿ ಸಂಭಲ್ ಜನಸಂಖ್ಯೆಲ್ಲಿ ಆಗಿರುವ ಆತಂಕಕಾರಿ ಬೆಳವಣಿಗೆ ಹಾಗೂ ಸಂಬಲ್ ಮಸೀದಿ ವಿವಾದದ ಕುರಿತು ಮಾಹಿತಿ ನೀಡಿದೆ. ದೇಶದ ಸ್ವಾತಂತ್ರ್ಯದ ವೇಳೆ ಸಂಭಲ್ ನಲ್ಲಿ ಹಿಂದೂಗಳ ಜನಸಂಖ್ಯೆ ಶೇಕಡಾ 45ರಷ್ಟಿತ್ತು. ಆದರೆ ಇದೀಗ ಹಿಂದೂಗಳ ಜನಸಂಖ್ಯೆಯ ಶೇಕಡಾ 15ಕ್ಕೆ ಕುಸಿದಿದೆ ಎಂದು ವರದಿ ಹೇಳುತ್ತಿದೆ.
ಸಂಭಲ್ ನಲ್ಲಿ ಸ್ವಾತಂತ್ರ್ಯ ಬಂದ ಬಳಿಕ ಇಲ್ಲೀವರೆಗೆ ಅಂದರೆ 1947 ರಿಂದ 2024-25ರ ವರೆಗೆ ಬರೋಬ್ಬರಿ 15 ಗಲಭೆಗಳು ನಡೆದಿದೆ. ಅತೀ ದೊಡ್ಡ ಗಲಭೆಗಳು ಇದಾಗಿದೆ. ಸಂಭಲ್‌ನಲ್ಲಿ 1947ರಲ್ಲಿ ಮುಸ್ಲಿಮರ ಜನಸಂಖ್ಯೆ ಶೇಕಡಾ 55ರಷ್ಟಿತ್ತು. ಆದರೆ ಈ ಜನಸಂಖ್ಯೆ ಇದೀಗ ಶೇಕಡಾ 85ರಷ್ಟಾಗಿದೆ. ಆದರೆ ಹಿಂದೂಗಳ ಜನಸಂಖ್ಯೆ 45 ರಿಂದ ಶೇಕಡಾ 15ಕ್ಕೆ ಕುಸಿತ ಕಂಡಿದೆ ಎಂದು ವರದಿ ನೀಡಿದೆ.
ಸಂಭಲ್ ನಲ್ಲಿ ಶಾಹಿ ಜಾಮಾ ಮಸೀದಿ ಹರಿಹರ ದೇವಾಲಯದ ಅವಶೇಷಗಳ ಮೇಲೆ ನಿರ್ಮಾಣವಾಗಿದೆ ಎಂದು ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಸಂಬಲ್ ಮಸೀದಿ ಹಾಗೂ ಆವರಣದಲ್ಲಿ ಹರಿಹರ ದೇವಾಲಯದ ಅವಶೇಷಗಳು ಪತ್ತೆಯಾಗಿದೆ. ಈ ಮೂಲಕ ಹಿಂದೂಗಳು ವಾದಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.
ಮಸೀದಿಯ ಸ್ಥಳದಲ್ಲಿ ಮೊದಲು ಹರಿಹರ ದೇವಸ್ಥಾನ ಇತ್ತು: ಕೋರ್ಟ್‌ಗೆ ವರದಿ ಸಲ್ಲಿಕೆ
ಸಂಬಲ್ ಶಾಹಿ ಜಾಮಾ ಮಸೀದಿ ಸರ್ವೆಯಿಂದ 2024ರ ಗಲಭೆ ನಡೆದಿತ್ತು. ಸಂಬಲ್ ಮಸೀದಿಯನ್ನು ಹಿಂದೂ ದೇವಾಲಯ ಕೆಡವಿ ನಿರ್ಮಾಣ ಮಾಡಲಾಗಿದೆ ಅನ್ನೋ ಹಿಂದೂಗಳ ಆರೋಪದ ಸತ್ಯಾಸತ್ಯತೆ ತಿಳಿಯಲು ಭಾರತೀಯ ಪುರಾತತ್ವ ಇಲಾಖೆಗೆ ಸಮೀಕ್ಷೆ ನಡೆಸುವಂತೆ ಕೋರ್ಟ್ ಸೂಚಿಸಿತ್ತು. ಆದರೆ ಸಮೀಕ್ಷೆ ತೆರಳಿದ ವೇಳೆ ಮಸೀದಿಯನ್ನು ಒಡೆಯಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಗಲಭೆ ಸೃಷ್ಟಿಸಲಾಗಿತ್ತು. ಸಂಬಲ್ ಗಲಭೆ ಹತ್ತಿಕ್ಕಲು ಉತ್ತರ ಪ್ರದೇಶ ಸರ್ಕಾರ ಹರಸಾಹಸ ಮಾಡಿತ್ತು. ಇದೇ ವೇಳೆ ಸಂಬಲ್‌ನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿತ್ತು. ಹೀಗಾಗಿ ಸಂಬಲ್ ಕುರಿತು ಸಂಪೂರ್ಣ ವರದಿಗೆ ಯೋಗಿ ಆದಿತ್ಯನಾಥ್ ಸರ್ಕಾರ ಸೂಚಿಸಿತ್ತು.
ಸಂಭಲ್ ಭಯೋತ್ಪಾದಕ ಚಟುವಟಿಕೆಗಳ ತಾಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ ಖೈದಾ ಸೇರಿದಂತೆ ಹಲವು ಉಗ್ರ ಸಂಘಟನೆಗಳು ಇಲ್ಲಿ ಸಕ್ರಿಯವಾಗಿದೆ. ಸಂಬಲ್‌ನಲ್ಲಿ ಉಗ್ರ ಚಟುವಟಿಕೆಗಳ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ. 450 ಪುಟಗಳ ವರದಿಯಲ್ಲಿ ಸಂಬಲ್ ಕುರಿತು ಹಲವು ಸ್ಫೋಟಕ ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ.
ಸಂಭಲ್‌ನಲ್ಲಿ ನಡೆದ ಹಲವು ಗಲಭೆ ಸಂದರ್ಭಗಳಲ್ಲಿ ಬಳಸಿರುವ ಮಾರಾಕಸ್ತ್ರಗಳು, ಮದ್ದು ಗುಂಡಗಳ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಂಬಲ್ ಗಲಭೆಯಲ್ಲಿ ಬಳಸಿರುವ ಹಲವು ವೆಪನ್‌ಗಳು ಯುಕೆ, ಯುಎಸ್ಎ, ಜರ್ಮನಿಯಲ್ಲಿ ತಯಾರಿಸಿದ ಉತ್ಪನ್ನಗಳಾಗಿದೆ ಎಂದು ವರದಿ ಹೇಳಿದೆ. ಇನ್ನು ಉತ್ತರ ಪ್ರದೇಶ ಪೊಲೀಸರು ಸಂಬಲ್‍ನ 12 ಪ್ರಕರಣ ಕುರಿತು ಬರೋಬ್ಬರಿ 4,000 ಪುಟಗಳ ಚಾರ್ಟ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ವರದಿ ಯೋಗಿ ಆದಿತ್ಯನಾಥ್ ಕೈಸೇರಿದೆ. ಶೀಘ್ರದಲ್ಲೇ ವರದಿ ಕುರಿತು ಸಂಪುಟದಲ್ಲಿ ಸಭೆ ನಡೆಯಲಿದೆ.
ಸಂಭಲ್ ಮಸೀದಿ ಪ್ರತಿ ಹೆಜ್ಜೆಯಲ್ಲೂ ದೇವಸ್ಥಾನ ಇರುವ ಸಾಕ್ಷ್ಯ ಪತ್ತೆ: ಸಮೀಕ್ಷೆ ವರದಿಯಲ್ಲಿದೆ ವಿವರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ