ರಾಹುಲ್ ಗಾಂಧಿಯವರ ಆಪ್ತ ಮತ್ತು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ವಿರುದ್ಧ ಭಾರತವನ್ನು ದೂಷಣೆ ಮಾಡಿದ ಆರೋಪ ಎದುರಾಗಿದೆ. ಇನ್ನೊಂದೆಡೆ ಅವರ ಮಾತುಗಳಿಗೆ ಸಮ್ಮತಿ ಎನ್ನುವಂತೆ ರಾಹುಲ್ ಗಾಂಧಿ ಅವರು ಪಿತ್ರೋಡಾ ಮಾತನಾಡುವಾಗ ಸುಮ್ಮನಿದ್ದದ್ದು ಕೂಡ ಭಾರತೀಯರ ಕೋಪಕ್ಕೆ ಕಾರಣವಾಗಿದೆ.
ನವದೆಹಲಿ (ಜೂ.6): ರಾಹುಲ್ ಗಾಂಧಿಯವರ ಮೆಂಟರ್ ಸ್ಯಾಮ್ ಪಿತ್ರೋಡಾ, ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಗವಾನ್ ರಾಮ, ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದಿರ ಮತ್ತು ಇತರ ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ವಿವಾದ ಎಬ್ಬಿಸಿದ್ದಾರೆ. ರಾಹುಲ್ ಗಾಂಧಿ ಇದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಯಾಮ್ ಪಿತ್ರೋಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಸರ್ಕಾರದ ವಿರುದ್ಧ ಕಿಡಿಕಾರಿದರು. ದೇಶದ ಅಭಿವೃದ್ಧಿ ಹಾಗೂ ಆರ್ಥಿಕತೆಯ ಬಗ್ಗೆ ಗಮನ ನೀಡುವ ಬದಲು ಸರ್ಕಾರ ಧಾರ್ಮಿಕ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದೆ ಎಂದು ಹೇಳಿದ್ದಾರೆ. “ನಮಗೆ ನಿರುದ್ಯೋಗ, ಹಣದುಬ್ಬರ, ಶಿಕ್ಷಣ, ಆರೋಗ್ಯ ವಿಚಾರದಲ್ಲಿ ಸಮಸ್ಯೆ ಇದೆ. ಈ ವಿಷಯಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ. ಆದರೆ ಎಲ್ಲರೂ ರಾಮ, ಹನುಮಾನ್, ಮಂದಿರದ ಬಗ್ಗೆ ಮಾತನಾಡುತ್ತಾರೆ' ಎಂದು ಸ್ಯಾಮ್ ಪಿತ್ರೋಡಾ ತಮ್ಮ ಭಾಷಣದಲ್ಲಿ ಹೇಳಿದರು. ನಾನು ಈಗಾಗಲೇ ಹಲವು ಬಾರಿ ಹೇಳಿದ್ದೇನೆ. ರಾಮ, ಹನುಮಂತ ಹಾಗೂ ಮಂದಿರಗಳು ಎಂದಿಗೂ ಕೆಲಸ ಕೊಡಿಸೋದಿಲ್ಲ ಎಂದಿದ್ದಾರೆ.
ಅಮೆರಿಕ ಪ್ರವಾಸದಲ್ಲಿ ಸ್ಯಾಮ್ ಪ್ರಿತ್ರೋಡಾ ಮಾತ್ರವಲ್ಲದೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಇದೇ ರೀತಿಯ ಮಾತುಗಳನ್ನು ಪುನರುಚ್ಚರಿಸಿದ್ದಾರೆ. ಇನ್ನು ಸ್ಯಾಮ್ ಪಿತ್ರೋಡಾ ಅವರ ಮಾತಿಗೆ ಕಿಡಿಕಾರಿರುವ ಬಿಜೆಪಿ ನಾಯಕರು, ವಿಶ್ವದ ಉಳಿದೆಲ್ಲಾ ದೇಶದ ಆರ್ಥಿಕತೆಗಿಂತ ಭಾರತ ಚೆನ್ನಾಗಿ ಅಭಿವೃದ್ಧಿ ಸಾಧಿಸುತ್ತಿದೆ ಎಂದಿದ್ದಾರೆ. ಈ ಕುರಿತಾಗಿ ಅಮಿತ್ ಮಾಳವಿಯಾ ದೀರ್ಘ ಟ್ವಿಟರ್ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.
“ರಾಜೀವ್ ಗಾಂಧಿಯವರ ಸಹವರ್ತಿ ಸ್ಯಾಮ್ ಪಿತ್ರೋಡಾ ಅವರಿಗೆ ಭಾರತದಲ್ಲಿ ಏನಾಗುತ್ತಿದೆ ಎನ್ನುವುದೇ ಗೊತ್ತಿಲ್ಲದ ವಿಷಕಾರಿ ಮನುಷ್ಯ. ಈತ ತನ್ನ ಸಹೋದ್ಯೋಗಿಯ ಅತಿಯಾಗಿ ಬೆಳೆದ ಮಗುವನ್ನು ಬೇಬಿ ಸಿಟಿಂಗ್ ಮಾಡಬಹುದು. ಆದರೆ, ಭಾರತವನ್ನು ದೂಷಿಸುವ ಅರ್ಹತೆಯಿಲ್ಲ. ಭಾರತದ ಬಗ್ಗೆ ಯಾವ ಮಾಹಿತಿಯೂ ಆತನಿಗಿಲ್ಲ. ಉದಾಹರಣೆಗೆ, ಭಾರತದಲ್ಲಿ ಚಿಲ್ಲರೆ ಹಣದುಬ್ಬರವು ಏಪ್ರಿಲ್ 2023 ರಲ್ಲಿ 4.7% ಕ್ಕೆ ಇಳಿದಿದೆ, ಇದು 18 ತಿಂಗಳುಗಳಲ್ಲಿ ಕಡಿಮೆಯಾಗಿದೆ. ಸಗಟು ಹಣದುಬ್ಬರವು ಋಣಾತ್ಮಕ ವಲಯದಲ್ಲಿದೆ ಮತ್ತು ಅದೇ ಅವಧಿಯಲ್ಲಿ -0.92% ಆಗಿತ್ತು, ಇದು 34 ತಿಂಗಳುಗಳಲ್ಲಿ ಕಡಿಮೆಯಾಗಿದೆ, ”ಎಂದು ಬಿಜೆಪಿ ನಾಯಕ ಟ್ವೀಟ್ ಮಾಡಿದ್ದಾರೆ.
"ಭಾರತದ ಹಣದುಬ್ಬರವು ಅಮೆರಿಕದ ಹಣದುಬ್ಬರಕ್ಕಿಂತ ತುಂಬಾ ಕಡಿಮೆಯಾಗಿದೆ. ಇದು ಪಿತ್ರೋಡಾ ವಾಸ ಮಾಡುವ ದೇಶ. ಅದೇ ರೀತಿ, ವಿಶ್ವ ಆರ್ಥಿಕತೆಗಳಿಗೆ ಹೋಲಿಸಿದರೆ ಸಾಂಕ್ರಾಮಿಕ ಮತ್ತು ಉಕ್ರೇನ್-ರಷ್ಯಾ ಯುದ್ಧದ ಹೊರತಾಗಿಯೂ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದಲ್ಲಿ ಭಾರತವು ಉತ್ತಮ ಸ್ಥಾನದಲ್ಲಿದೆ" ಎಂದು ಮಾಹಿತಿ ನೀಡಿದ್ದಾರೆ.
Sam Pitroda, an associate of Rajiv Gandhi, is as clueless as vicious. He can baby sit his colleague’s overgrown son but need not berate India, of which he has no clue…
For instance, retail inflation in India is down to 4.7% in April 2023, lowest in 18 months. Wholesale… pic.twitter.com/XhLzUpCOOQ
ಮನ್ ಕೀ ಬಾತ್ ಮಾಡಲು ಬಂದಿಲ್ಲ, ನಿಮ್ಮೊಂದಿಗೆ ಸಂಬಂಧ ಬೆಳೆಸಲು ಬಂದಿದ್ದೇನೆ: ಮೋದಿ ವಿರುದ್ಧ ರಾಹುಲ್ ವ್ಯಂಗ್ಯ
ಸ್ಯಾಮ್ ಪಿತ್ರೋಡಾ ಹಿಂದೂ ಧರ್ಮವನ್ನು ಅವಮಾನಿಸಿದ್ದು ಮಾತ್ರವಲ್ಲದೆ, ಭಾರತ ವಿರೋಧಿ ಅಜೆಂಡಾಗಳನ್ನು ಹೊಂದಿರುವ ಮೂಲಭೂತ ಸಂಘಟನೆಗಳೊಂದಿಗೆ ಸಂಬಂಧವನ್ನು ಬೆಳೆಸುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದೂಗಳ ಮೇಲೆ ವಿಷ ಉಗುಳುವುದು ಮತ್ತು ಆರ್ಥಿಕತೆಗಳನ್ನು ಮಾತ್ರವಲ್ಲದೆ ನಾಗರಿಕತೆಗಳನ್ನು ಉಳಿಸಿಕೊಂಡಿರುವ ದೇವಾಲಯಗಳನ್ನು ಅವಮಾನಿಸುವ ಸ್ಯಾಮ್ ಉದ್ದೇಶವು ಬಹುಶಃ ನ್ಯೂಯಾರ್ಕ್‌ನಲ್ಲಿ ಕಾರ್ಯಕ್ರಮದ ಸಂಯೋಜಕರನ್ನು ಮತ್ತು ಅವರು ಸೆಳೆದ ಪ್ರೇಕ್ಷಕರನ್ನು ಮೆಚ್ಚಿಸಲು ಹೇಳಿದ ಮಾತಾಗಿರಬಹುದು ಎಂದು ಮಾಳವಿಯಾ ಬರೆದಿದ್ದಾರೆ.
ಅಮೆರಿಕದಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಆರ್‌ಎಸ್‌ಎಸ್ ವಿರುದ್ಧ ರಾಹುಲ್ ವಾಗ್ದಾಳಿ
ರಾಹುಲ್ ಗಾಂಧಿ ಪ್ರಸ್ತುತ ಯುಎಸ್‌ನಲ್ಲಿದ್ದು, ಅಲ್ಲಿ ಅವರು 10 ದಿನಗಳ ಭೇಟಿಗಾಗಿ ಜೂನ್ 2 ರಂದು ತೆರಳಿದ್ದಾರೆ. ಮಾಜಿ ವಯನಾಡ್ ಸಂಸದರು ಅಲ್ಲಿನ ಕೆಲವು ವಿವಿಗಳಲ್ಲಿ ಉಪನ್ಯಾಸಗಳನ್ನು ನೀಡುತ್ತಿದ್ದಾರೆ ಮತ್ತು ಅಲ್ಲಿನ ಭಾರತೀಯ ಪ್ರಜೆಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಜೂನ್ 5 ರಂದು, ಅಮೆರಿಕದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನ್ಯೂಯಾರ್ಕ್‌ನ ಜಾವಿಟ್ಸ್ ಸೆಂಟರ್‌ನಲ್ಲಿ ಭಾರತೀಯ ಮೂಲದವರೊಂದಿಗೆ ಸಂವಾದ ನಡೆಸಿದರು.