2022ರ ವಿಶ್ವದ ಅತ್ಯಂತ ಕಲುಷಿತ ದೇಶಗಳ ಪಟ್ಟಿಯಲ್ಲಿ ಭಾರತ ಈ ಬಾರಿ ಮೂರು ಸ್ಥಾನ ಕುಸಿತ ಕಂಡು 8ನೇ ಸ್ಥಾನ ಪಡೆದಿದ್ದರೂ, ದೇಶದ ನಗರಗಳ ವಾಯು ಗುಣಮಟ್ಟ ಸುಧಾರಿಸಿದಂತೆ ಕಾಣುತ್ತಿಲ್ಲ.
ನವದೆಹಲಿ (ಜೂ.6): ಕೆಲ ದಿನಗಳ ಹಿಂದೆ ಬಿಡುಗಡೆಯಾದ ಐದನೇ ವಾರ್ಷಿಕ ವಿಶ್ವ ವಾಯು ಗುಣಮಟ್ಟ ವರದಿ 2022 ರಲ್ಲಿ ಭಾರತವು ವಿಶ್ವದ ಎಂಟನೇ ಅತ್ಯಂತ ಕಲುಷಿತ ದೇಶವಾಗಿದೆ. 2022 ರ ವಾಯು ಮಾಲಿನ್ಯ ಸೂಚ್ಯಂಕದಲ್ಲಿ ಭಾರತವು ಅತ್ಯಂತ ಕೆಟ್ಟ ಸ್ಥಾನ ಪಡೆದಿದೆ ಎಂದು ಸ್ವಿಸ್ ವಾಯು ಗುಣಮಟ್ಟದ ತಂತ್ರಜ್ಞಾನ ಕಂಪನಿ IQAir ವರದಿ ಮಾಡಿದೆ. ತನ್ನ ವರದಿಯಲ್ಲಿ, ಸ್ವಿಸ್ ಕಂಪನಿಯು ವಿಶ್ವದ 20 ಕಲುಷಿತ ನಗರಗಳ ಪಟ್ಟಿಯನ್ನೂ ಪ್ರಕಟಿಸಿದ್ದು, ಇದರಲ್ಲಿ ಭಾರತದ 15 ನಗರಗಳು ಸ್ಥಾನ ಪಡೆದಿದೆ. ಟಾಪ್ 50 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ, 39 ಭಾರತೀಯ ನಗರಗಳನ್ನು ಸ್ಥಾನ ಪಡೆದಿದೆ. ಇದು ದೇಶದಲ್ಲಿ ಗಾಳಿಯ ಗುಣಮಟ್ಟವು ಅತ್ಯಂತ ಕೆಟ್ಟದಾಗಿದೆ ಎಂದು ಸೂಚಿಸುತ್ತದೆ. ಭಾರತವು ತನ್ನ ಕಳೆದ ವರ್ಷದ ಶ್ರೇಯಾಂಕದಿಂದ ಮೂರು ಸ್ಥಾನಗಳನ್ನು ಕುಸಿದು ವಿಶ್ವದ ಅತ್ಯಂತ ಕಲುಷಿತ ದೇಶಗಳಲ್ಲಿ ಎಂಟನೇ ಸ್ಥಾನದಲ್ಲಿದ್ದರೂ, ಭಾರತೀಯ ನಗರಗಳು ಗಾಳಿಯ ಗುಣಮಟ್ಟವನ್ನು ಸುಧಾರಿಸಿದಂತಿಲ್ಲ. ಚಾಡ್, ಇರಾಕ್, ಪಾಕಿಸ್ತಾನ, ಬಹ್ರೇನ್ ಮತ್ತು ಬಾಂಗ್ಲಾದೇಶವು 2022 ರಲ್ಲಿ ವಿಶ್ವದ ಐದು ಅತ್ಯಂತ ಕಲುಷಿತ ದೇಶಗಳಾಗಿವೆ.
ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿ ಇಲ್ಲಿದೆ:
1) ಲಾಹೋರ್, ಪಾಕಿಸ್ತಾನ
2) ಹೊಟಾನ್, ಚೀನಾ
3) ಭಿವಂಡಿ, ಭಾರತ
4) ದೆಹಲಿ, ಭಾರತ
5) ಪೇಶಾವರ, ಪಾಕಿಸ್ತಾನ
6) ದರ್ಭಾಂಗ, ಭಾರತ
7) ಅಸೋಪುರ್, ಭಾರತ
8) ಎನ್'ಜಮೆನಾ, ಚಾಡ್
9) ನವದೆಹಲಿ, ಭಾರತ
10) ಪಾಟ್ನಾ, ಭಾರತ
11) ಘಾಜಿಯಾಬಾದ್, ಭಾರತ
12) ಧರುಹೆರಾ, ಭಾರತ
13) ಬಾಗ್ದಾದ್, ಇರಾಕ್
14) ಚಾಪ್ರಾ, ಭಾರತ
15) ಮಿಜಾಫರ್‌ಪುರ ನಗರ, ಭಾರತ
16) ಫೈಸಲಾಬಾದ್, ಭಾರತ
17) ಗ್ರೇಟರ್ ನೋಯ್ಡಾ, ಭಾರತ
18) ಬಹದ್ದೂರ್ಗಢ, ಭಾರತ
19) ಫರಿದಾಬಾದ್, ಭಾರತ
20) ಮಿಜಾಫರ್‌ಪುರ, ಭಾರತ
100 ಅತಿಯಾದ ಮಾಲಿನ್ಯ ಸ್ಥಳಗಳ ಪಟ್ಟಿಯಲ್ಲಿ ಭಾರತದಲ್ಲೇ 63 ಪ್ರದೇಶ!
ವಿಶ್ವದ ಅತ್ಯಂತ ಮಾಲಿನ್ಯ ನಗರ ಪಟ್ಟಿ ಬಿಡುಗಡೆ, 50ರ ಪೈಕಿ 39 ಸಿಟಿ ಭಾರತದಲ್ಲೇ ಇದೆ!