ಇಂದಿನಿಂದ ರಿಯಾಯ್ತಿ ದರದಲ್ಲಿ ಟೊಮೆಟೋ ಮಾರಾಟ..!

Published : Jul 14, 2023, 04:00 AM IST
ಇಂದಿನಿಂದ ರಿಯಾಯ್ತಿ ದರದಲ್ಲಿ ಟೊಮೆಟೋ ಮಾರಾಟ..!

ಸಾರಾಂಶ

ಚಿಲ್ಲರೆ ಅಂಗಡಿಗಳಲ್ಲಿ ಈಗ 150 ರು.ಗೆ ಕೇಜಿಯಂತೆ ಟೊಮೆಟೋ ಮಾರಾಲಾಗುತ್ತಿದ್ದು, ಶುಕ್ರವಾರದಿಂದ 90 ರು..ಗೆ ಮಾರಾಟ ಮಾಡಲು ಎನ್‌ಸಿಸಿಎಫ್‌ ನಿರ್ಧರಿಸಿದೆ. ದಿಲ್ಲಿ ಮಾತ್ರವಲ್ಲ, ಲಖನೌ, ಕಾನ್ಪುರ ಹಾಗೂ ಜೈಪುರದಲ್ಲೂ ರಿಯಾಯ್ತಿ ದರದಲ್ಲಿ ಟೊಮೆಟೋ ಮಾರಲಾಗುತ್ತದೆ.

ನವದೆಹಲಿ(ಜು.14):  ಕರ್ನಾಟಕದ ಕೋಲಾರ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಗಳಿಂದ ದಿಲ್ಲಿ ಹಾಗೂ ವಿವಿಧ ಉತ್ತರ ಭಾರತದ ನಗರಗಳಿಗೆ ಟೊಮೆಟೋ ಖರೀದಿಸಿ ತರಲಾಗುತ್ತಿದ್ದು, ಇಂದು(ಶುಕ್ರವಾರ) ಇವನ್ನು ರಿಯಾಯ್ತಿ ದರದಲ್ಲಿ- ಅಂದರೆ ಕೇಜಿಗೆ 90 ರು. ದರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಸಹಕಾರ ಒಕ್ಕೂಟವಾದ ಎನ್‌ಸಿಸಿಎಫ್‌, ಟೊಮೆಟೋಗಳನ್ನು ತನ್ನದೇ ಆದ ಮೊಬೈಲ್‌ ವ್ಯಾನ್‌ಗಳಲ್ಲಿ ಮಾರಲಿದೆ. ಚಿಲ್ಲರೆ ಅಂಗಡಿಗಳಲ್ಲಿ ಈಗ 150 ರು.ಗೆ ಕೇಜಿಯಂತೆ ಟೊಮೆಟೋ ಮಾರಾಲಾಗುತ್ತಿದ್ದು, ಶುಕ್ರವಾರದಿಂದ 90 ರು..ಗೆ ಮಾರಾಟ ಮಾಡಲು ಎನ್‌ಸಿಸಿಎಫ್‌ ನಿರ್ಧರಿಸಿದೆ. ದಿಲ್ಲಿ ಮಾತ್ರವಲ್ಲ, ಲಖನೌ, ಕಾನ್ಪುರ ಹಾಗೂ ಜೈಪುರದಲ್ಲೂ ರಿಯಾಯ್ತಿ ದರದಲ್ಲಿ ಟೊಮೆಟೋ ಮಾರಲಾಗುತ್ತದೆ.

ಕೋಲಾರ: ಟೊಮೆಟೋ ಕಳ್ಳತನ ತಪ್ಪಿಸಲು ಹೊಲದಲ್ಲೇ ಟೆಂಟ್‌ ಹಾಕಿದ ರೈತರು..!

ಟೊಮೆಟೋ ದರ ದೇಶದ ವಿವಿಧ ಭಾಗಗಳಲ್ಲಿ 150 ರು. ದಾಟಿ ತಲೆಬಿಸಿ ಸೃಷ್ಟಿಸಿದ್ದು ಇಲ್ಲಿ ಗಮನಾರ್ಹ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!