ಫ್ರಾನ್ಸ್‌ನಿಂದಲೇ ಗೃಹ ಸಚಿವ ಅಮಿತ್‌ ಶಾಗೆ ಪ್ರಧಾನಿ ಫೋನ್‌, ದೆಹಲಿ ಪರಿಸ್ಥಿತಿ ವಿಚಾರಿಸಿದ ಮೋದಿ!

By Santosh NaikFirst Published Jul 13, 2023, 11:45 PM IST
Highlights


ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ ಹಾಗೂ ಯುಎಇ ಪ್ರವಾಸದಲ್ಲಿದ್ದಾರೆ. ಈ ನಡುವೆ ದೆಹಲಿಯಲ್ಲಿ ಯಮುನಾ ನದಿ ಉಕ್ಕುವ ಹಂತದಲ್ಲಿದ್ದು, ದೆಹಲಿ ಕೆಲವು ಪ್ರದೇಶಗಳಲ್ಲಿ ಈಗಾಗಲೇ ನೀರು ನುಗ್ಗಿದೆ.
 

ನವದೆಹಲಿ (ಜು.13): ಉತ್ತರ ಭಾರತದ ಹಿಮಾಚಲ ಪ್ರದೇಶದ ಸೇರಿದಂತೆ ದೆಹಲಿ ಅಕ್ಕಪಕ್ಕದ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ದೆಹಲಿಯ ಪ್ರಮುಖ ನದಿಯಾಗಿರುವ ಯಮುನಾ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ ಹಾಗೂ ಯುಎಇ ಪ್ರವಾಸದಲ್ಲಿದ್ದು, ಅಲ್ಲಿಂದಲೇ ದೆಹಲಿಯ ಪರಿಸ್ಥಿತಿಯನ್ನು ಆಲಿಸಿದ್ದಾರೆ. ಗುರುವಾರ ರಾತ್ರಿಯ ವೇಳೆಗೆ ಗೃಹ ಸಚಿವ ಅಮಿತ್‌ ಶಾ ಹಾಗೂ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ಗೆ ಕರೆ ಮಾಡಿದ ಪ್ರಧಾನಿ ಮೋದಿ ದೆಹಲಿಯಲ್ಲಿ ಆಗಿರುವ ಪರಿಸ್ಥಿತಿಯ ಅವಲೋಕನ ಪಡೆದುಕೊಂಡಿದ್ದಾರೆ.  'ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ನಿಂದ ಕರೆ ಮಾಡಿ ದೆಹಲಿಯ ಜಲಾವೃತ ಮತ್ತು ಪ್ರವಾಹ ಪರಿಸ್ಥಿತಿ ಮತ್ತು ಅದನ್ನು ಎದುರಿಸಲು ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ವಿವರವಾಗಿ ವಿಚಾರಿಸಿದರು. ಅವರು ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ತೆಗೆದುಕೊಳ್ಳುವ ಮೂಲಕ ದೆಹಲಿಯ ಹಿತದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು' ಎಂದು ದೆಹಲಿಯ ಎಲ್ಜಿ ವಿನಯ್ ಕುಮಾರ್ ಸಕ್ಸೇನಾ ಟ್ವೀಟ್ ಮಾಡಿದ್ದಾರೆ.
 

click me!