ಕೇಂದ್ರ ಸರಕಾರಿ ನೌಕರರಿಗೆ ಡಬಲ್ ಖುಷ್: ಡಿಎ, ದೈನಂದಿನ ಸ್ಯಾಲರಿ ಹೆಚ್ಚಳ!

By Kannadaprabha News  |  First Published Mar 10, 2023, 10:22 AM IST

ಕೇಂದ್ರ ಸರ್ಕಾರಿ ನೌಕರರಿಗೆ ಪ್ರಾಯಶಃ ಇದೇ ತಿಂಗಳು ವೇತನ ಹೆಚ್ಚಳ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ನೌಕರರ ಕನಿಷ್ಠ ವೇತನದಲ್ಲಿ ಬದಲಾವಣೆ ಮಾಡುವ ಫಿಟ್‌ಮೆಂಟ್‌ ಅಂಶ ಹಾಗೂ ತುಟ್ಟಿಭತ್ಯೆಯನ್ನು ಶೀಘ್ರದಲ್ಲೇ ಸರ್ಕಾರ ಪ್ರಕಟಿಸುವ ಸಂಭವವಿದೆ ಎಂದು ವರದಿಗಳು ತಿಳಿಸಿವೆ.


ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಪ್ರಾಯಶಃ ಇದೇ ತಿಂಗಳು ವೇತನ ಹೆಚ್ಚಳ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ನೌಕರರ ಕನಿಷ್ಠ ವೇತನದಲ್ಲಿ ಬದಲಾವಣೆ ಮಾಡುವ ಫಿಟ್‌ಮೆಂಟ್‌ ಅಂಶ ಹಾಗೂ ತುಟ್ಟಿಭತ್ಯೆಯನ್ನು ಶೀಘ್ರದಲ್ಲೇ ಸರ್ಕಾರ ಪ್ರಕಟಿಸುವ ಸಂಭವವಿದೆ ಎಂದು ವರದಿಗಳು ತಿಳಿಸಿವೆ. ಫಿಟ್‌ಮೆಂಟ್‌ ಅಂಶದಲ್ಲಿ ಏರಿಕೆಯಾದ ಬಳಿಕ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಸಂಬಳ 18 ಸಾವಿರದಿಂದ 26 ಸಾವಿರ ರು.ಗೆ ಹೆಚ್ಚಾಗುವ ನಿರೀಕ್ಷೆ ಇದೆ. ಮಾಚ್‌ರ್‍ ತಿಂಗಳಿನಲ್ಲೇ ಕೇಂದ್ರ ಸರ್ಕಾರ ಫಿಟ್‌ಮೆಂಟ್‌ ಅಂಶ ಹಾಗೂ ತುಟ್ಟಿಭತ್ಯೆ (ಡಿಎ)ಯನ್ನು ಪರಿಷ್ಕರಿಸುವ ಸಾಧ್ಯತೆ ಇದೆ ಎಂದು ವರದಿಗಳು ವಿವರಿಸಿವೆ.

ಸಾಮಾನ್ಯ ಫಿಟ್‌ಮೆಂಟ್‌ ಅಂಶ ಹಾಲಿ ಶೇ.2.57ರಷ್ಟಿದೆ. ಇದರರ್ಥ, 4200 ಗ್ರೇಡ್‌ ಪೇನಲ್ಲಿರುವ ನೌಕರ 15,500 ರು. ಮೂಲ ವೇತನ ಗಳಿಸುತ್ತಿದ್ದಾನೆ ಎಂದರೆ, ಅದನ್ನು 2.57ರಿಂದ ಗುಣಿಸಬೇಕಾಗುತ್ತದೆ. 6ನೇ ವೇತನ ಆಯೋಗ ಶೇ.1.86ರಷ್ಟುಫಿಟ್‌ಮೆಂಟ್‌ ಅಂಶಕ್ಕೆ ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರಿ ನೌಕರರು (central government employees) ಇದೀಗ ಫಿಟ್‌ಮೆಂಟ್‌ ಅಂಶವನ್ನು ಶೇ.3.68 ಕ್ಕೆ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಇಡುತ್ತಿದ್ದಾರೆ ಎಂದು ಹೇಳಲಾಗಿದೆ.

Tap to resize

Latest Videos

ಸರ್ಕಾರಿ ನೌಕರರಿಗೆ ಶುಭ ಸುದ್ದಿ; ಹೊಸ ಮನೆ ಖರೀದಿಗೆ ಕಡಿಮೆ ಬಡ್ಡಿಯಲ್ಲಿ 25ಲಕ್ಷ ರೂ. ಸಾಲ!

ತುಟ್ಟಿಭತ್ಯೆ (ಡಿಎ) ಹಾಗೂ ತುಟ್ಟಿಪರಿಹಾರ (ಡಿಆರ್‌)ಗಳನ್ನು ಜ.1 ಹಾಗೂ ಜು.1ರಂತೆ ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. 2022ರ ಸೆಪ್ಟೆಂಬರ್‌ನಲ್ಲಿ ಕೊನೆಯ ಬಾರಿ ಪರಿಷ್ಕರಣೆ ಆಗಿತ್ತು. ಡಿಎ ಶೇ.4ರಷ್ಟುಹೆಚ್ಚಾಗಿ ಶೇ.38ಕ್ಕೆ ತಲುಪಿತ್ತು. ಇದರಿಂದ 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 68 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಿತ್ತು. ಇದಕ್ಕೂ ಮುಂಚೆ 7ನೇ ವೇತನ ಆಯೋಗದಡಿ ಕಳೆದ ವರ್ಷ ಮಾರ್ಚ್‌ನಲ್ಲಿ ಡಿಎಯನ್ನು (DA) ಶೇ.3ರಷ್ಟು ಹೆಚ್ಚಿಸಿದ್ದರಿಂದ ಅದು ಶೇ.34ಕ್ಕೆ ತಲುಪಿತ್ತು.

ಕೇಂದ್ರ ಸರ್ಕಾರಿ ನೌಕರರಿಗೆ ಬಂಬರ್: ತುಟ್ಟಿ ಭತ್ಯೆ ಹೆಚ್ಚಳಕ್ಕೆ ಕ್ಯಾಬಿನೆಟ್ ಗ್ರೀನ್‌ ಸಿಗ್ನಲ್!

click me!