ಮೋದಿಗೆ ಪತ್ರ ಬರೆದ ಪಕ್ಷಗಳಿಗೆ ಬಿಜೆಪಿ ತಿರುಗೇಟು: ವಿಪಕ್ಷಗಳ ವಿರುದ್ಧ ರಾಜ್ಯಗಳಲ್ಲಿ 9 ಸುದ್ದಿಗೋಷ್ಠಿ

Published : Mar 10, 2023, 08:10 AM IST
ಮೋದಿಗೆ ಪತ್ರ ಬರೆದ ಪಕ್ಷಗಳಿಗೆ ಬಿಜೆಪಿ ತಿರುಗೇಟು:  ವಿಪಕ್ಷಗಳ ವಿರುದ್ಧ ರಾಜ್ಯಗಳಲ್ಲಿ 9 ಸುದ್ದಿಗೋಷ್ಠಿ

ಸಾರಾಂಶ

ರಾಜಕೀಯ ಎದುರಾಳಿಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಪತ್ರ ಬರೆದಿದ್ದ ಪ್ರತಿಪಕ್ಷಗಳಿಗೆ ಬಿಜೆಪಿ ಭರ್ಜರಿ ತಿರುಗೇಟು ನೀಡಲು ಹೊರಟಿದೆ.

ನವದೆಹಲಿ: ರಾಜಕೀಯ ಎದುರಾಳಿಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಪತ್ರ ಬರೆದಿದ್ದ ಪ್ರತಿಪಕ್ಷಗಳಿಗೆ ಬಿಜೆಪಿ ಭರ್ಜರಿ ತಿರುಗೇಟು ನೀಡಲು ಹೊರಟಿದೆ. ಪತ್ರಕ್ಕೆ ಸಹಿ ಹಾಕಿದ ವಿಪಕ್ಷಗಳ ತವರು ರಾಜ್ಯದಲ್ಲೇ ಪತ್ರಿಕಾಗೋಷ್ಠಿ ಕರೆದು, ಅವುಗಳ ಬಣ್ಣ ಬಯಲು ಮಾಡಲು ಮುಂದಾಗಿದೆ. 9 ರಾಜ್ಯಗಳಲ್ಲಿ 9 ಸುದ್ದಿಗೋಷ್ಠಿಗಳನ್ನು ಈ ಸಲುವಾಗಿ ನಡೆಸಲಾಗುತ್ತದೆ.

ದೆಹಲಿ (delhi), ಪಂಜಾಬ್‌ (punjab) , ಜಮ್ಮು-ಕಾಶ್ಮೀರ (Jammu Kashmir), ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ ಹಾಗೂ ಕೇರಳ ಸೇರಿ 9 ರಾಜ್ಯದ ವಿಪಕ್ಷಗಳು ಮೋದಿಗೆ ಪತ್ರ ಬರೆದಿದ್ದವು. ಅವುಗಳ ರಾಜ್ಯಗಳಲ್ಲೇ ಪತ್ರಿಕಾಗೋಷ್ಠಿ ನಡೆಸಿ, ಮೋದಿಗೆ ಬರೆದ ಪತ್ರಕ್ಕೆ ಸಹಿ ಹಾಕಿರುವ ನಾಯಕರು ಭ್ರಷ್ಟರು. ತನಿಖೆಗೆ ಹೆದರುತ್ತಿರುವವರು ಎಂದು ಬಿಂಬಿಸುವುದು ಬಿಜೆಪಿ ತಂತ್ರಗಾರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಮನೀಶ್‌ ಸಿಸೋಡಿಯಾಗೆ ಗೂಢಚರ್ಯೆ ಹಗರಣ ಉರುಳು: ಸಿಬಿಐ ತನಿಖೆಗೆ ಕೇಂದ್ರ ಸರ್ಕಾರ ಅಸ್ತು

ಈಗಾಗಲೇ ಬಿಜೆಪಿ ಸಂಸದ ಮನೋಜ್‌ ತಿವಾರಿ ಅವರು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು (Press Meet) ಮಾಡಿದ್ದಾರೆ. ಬಂಗಾಳದಲ್ಲಿ ಸುವೇಂದು ಅಧಿಕಾರಿ, ಬಿಹಾರದಲ್ಲಿ ಸಂಜಯ ಜೈಸ್ವಾಲ್‌, ಉತ್ತರಪ್ರದೇಶದಲ್ಲಿ ಬೃಜೇಶ್‌ ಪಾಠಕ್‌ ಹಾಗೂ ತೆಲಂಗಾಣದಲ್ಲಿ ಸಂಜಯ್‌ ಬಂಡಿ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಏನಿದು ಪತ್ರ?:

ದೆಹಲಿ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ ಅವರನ್ನು ಅಬಕಾರಿ ಹಗರಣ ಸಂಬಂಧ ಸಿಬಿಐ ಬಂಧಿಸಿತ್ತು. ಇದರ ಬೆನ್ನಲ್ಲೇ ವಿಪಕ್ಷಗಳು ಪ್ರಧಾನಿ ಅವರಿಗೆ ಬರೆದು, ಭಾರತ ಪ್ರಜಾಪ್ರಭುತ್ವ ದೇಶ ಎಂದು ನೀವು ನಂಬುತ್ತೀರಿ ಎಂಬ ವಿಶ್ವಾಸವಿದೆ. ಆದರೆ ಪ್ರತಿಪಕ್ಷಗಳ ಸದಸ್ಯರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳ ನಿರ್ಲಜ್ಜ ದುರ್ಬಳಕೆಯಿಂದಾಗಿ ಭಾರತ ಪ್ರಜಾಸತ್ತೆಯಿಂದ ಸರ್ವಾಧಿಕಾರದತ್ತ ಹೋಗಿರುವಂತೆ ಭಾಸವಾಗುತ್ತಿದೆ. ಮೋದಿ ಅವರು 2014ರಲ್ಲಿ ಪ್ರಧಾನಿಯಾದ ಬಳಿಕ ವಿಪಕ್ಷಗಳ ನಾಯಕರ ಮೇಲೆಯೇ ಹೆಚ್ಚಾಗಿ ದಾಳಿ ನಡೆದಿದೆ. ಬಿಜೆಪಿ ಸೇರುವ ವಿಪಕ್ಷ ನಾಯಕರ ವಿರುದ್ಧ ತನಿಖಾ ಪ್ರಕ್ರಿಯೆಗಳು ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿವೆ ಎಂದು ಆರೋಪಿಸಿದ್ದರು.

Delhi Excise Policy Case: ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಬಂಧನ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು