ಉಕ್ರೇನ್‌ ಮೇಲೆ ದಾಳಿಗೆ ರಷ್ಯಾಕ್ಕೆ ಚೀನಾದ ಶಸ್ತ್ರಾಸ್ತ್ರ: ಅಮೆರಿಕ ವರದಿ

Published : Mar 10, 2023, 09:40 AM IST
ಉಕ್ರೇನ್‌ ಮೇಲೆ ದಾಳಿಗೆ ರಷ್ಯಾಕ್ಕೆ ಚೀನಾದ ಶಸ್ತ್ರಾಸ್ತ್ರ: ಅಮೆರಿಕ ವರದಿ

ಸಾರಾಂಶ

ಕಳೆದ 1 ವರ್ಷದಿಂದ ಉಕ್ರೇನ್‌ ವಿರುದ್ಧ ಯುದ್ಧ ಮಾಡುತ್ತಿರುವ ರಷ್ಯಾ ಶಸ್ತ್ರಾಸ್ತ್ರ ಮತ್ತು ಸೈನಿಕರ ಕೊರತೆಯನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ಮಿತ್ರ ರಾಷ್ಟ್ರ ಚೀನಾ ಶಸ್ತ್ರಾಸ್ತ್ರಗಳು, ಸ್ಪೋಟಕಗಳು ಮತ್ತು ಡ್ರೋನ್‌ಗಳನ್ನು ಒದಗಿಸುತ್ತಿದೆ ಎಂದು ಅಮೆರಿಕ ವರದಿ ಮಾಡಿದೆ.

ನ್ಯೂಯಾರ್ಕ್: ಕಳೆದ 1 ವರ್ಷದಿಂದ ಉಕ್ರೇನ್‌ ವಿರುದ್ಧ ಯುದ್ಧ ಮಾಡುತ್ತಿರುವ ರಷ್ಯಾ ಶಸ್ತ್ರಾಸ್ತ್ರ ಮತ್ತು ಸೈನಿಕರ ಕೊರತೆಯನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ಮಿತ್ರ ರಾಷ್ಟ್ರ ಚೀನಾ ಶಸ್ತ್ರಾಸ್ತ್ರಗಳು, ಸ್ಪೋಟಕಗಳು ಮತ್ತು ಡ್ರೋನ್‌ಗಳನ್ನು ಒದಗಿಸುತ್ತಿದೆ ಎಂದು ಅಮೆರಿಕ ವರದಿ ಮಾಡಿದೆ.

ಉಕ್ರೇನ್‌ನಲ್ಲಿ ರಷ್ಯಾ ಬಳಕೆ ಮಾಡುತ್ತಿರುವುದು ಚೀನಾ ನೀಡಿರುವ ಶಸ್ತ್ರಾಸ್ತ್ರಗಳಾಗಿವೆ (Arms). ಈ ವಿಚಾರವಾಗಿ ಚೀನಾ ಯಾವುದೇ ಬಹಿರಂಗ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲದಿದ್ದರೂ ಉಭಯ ದೇಶಗಳ ನಡುವಿನ ಸಂಬಂಧವನ್ನು ಅಮೆರಿಕ ಗಮನಿಸುತ್ತಿದ್ದು, ಚೀನಾ (China) ರಷ್ಯಾಗೆ ಬೆಂಬಲ ನೀಡಿರುವುದು ಪತ್ತೆಯಾಗಿದೆ. ಸತತ ಯುದ್ಧದಿಂದಾಗಿ ಆಯುಧಗಳ ಕೊರತೆ ಉಂಟಾಗಿದ್ದು, ರಷ್ಯಾ ತನ್ನ ಮಿತ್ರರಾದ ಉತ್ತರ ಕೊರಿಯಾ (koria) ಮತ್ತು ಬೆಲಾರಸ್‌ನಿಂದ ಸಹಾಯ ಪಡೆದುಕೊಳ್ಳುತ್ತಿದೆ. ಅಲ್ಲದೇ ತಾನು ಇಂಧನ ಪೂರೈಕೆ ಮಾಡುತ್ತಿರುವ ಚೀನಾ ಮತ್ತು ಭಾರತಗಳನ್ನು ಸಹಾಯಕ್ಕಾಗಿ ಕೋರಿದೆ ಎಂದು ವರದಿ ಹೇಳಿದೆ.

ಕೆಣಕಿದರೆ ಪಾಕ್‌ ಮೇಲೆ ಭಾರತದ ಮಿಲಿಟರಿ ದಾಳಿ ಸಂಭವ: ಅಮೆರಿಕ

ತೈವಾನ್‌ (Taiwan) ಮೇಲೆ ಹಕ್ಕು ಸಾಧಿಸಲು ಯತ್ನಿಸುತ್ತಿರುವ ಚೀನಾ ಈ ಯುದ್ಧದಲ್ಲಿ ರಷ್ಯಾಗೆ ಬೆಂಬಲ ಸೂಚಿಸುವ ಮೂಲಕ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು ಮುಂದಾಗಿದೆ. ಅಷ್ಟೇ ಅಲ್ಲದೇ ಮಾ.2ರಂದು ರಷ್ಯಾ ಹಾಗೂ ಚೀನಾದ ವಿದೇಶಾಂಗ ಸಚಿವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಅಮೆರಿಕ ಹೇಳಿದೆ.

ಉಕ್ರೇನ್ ಪ್ರತಿಜ್ಞೆಗೆ ಸೇಡು, ಬಂಧಿತ ಉಕ್ರೇನ್ ಯೋಧನನ್ನು ಗುಂಡಿಕ್ಕಿ ಕೊಂದ ರಷ್ಯಾ ಪಡೆ!

ಉಕ್ರೇನ್‌ ಮೇಲೆ ರಷ್ಯಾ ಬೃಹತ್‌ ಕ್ಷಿಪಣಿ, ಡ್ರೋನ್‌ ದಾಳಿ: 6 ಸಾವು

ಕೀವ್‌: ಉಕ್ರೇನ್‌ ಮೇಲಿನ ತನ್ನ ದಾಳಿಯನ್ನು ತೀವ್ರಗೊಳಿಸಿರುವ ರಷ್ಯಾ (Russia), ಬುಧವಾರ ರಾತ್ರಿಯಿಂದೀಚೆಗೆ ಶತ್ರು ದೇಶದ ಹಲವು ನಗರಗಳ ಮೇಲೆ ಭಾರೀ ಪ್ರಮಾಣದ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ನಡೆಸಿದೆ. ದಾಳಿಯಲ್ಲಿ ಪ್ರಮುಖ ಮೂಲಸೌಕರ್ಯಗಳು ಮತ್ತು ನಿವಾಸಗಳು ಹಾನಿಗೊಳಗಾಗಿವೆ. ಈ ದಾಳಿಯಲ್ಲಿ ಕನಿಷ್ಠ 6 ಮಂದಿ ಸಾವಿಗೀಡಾಗಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ಗುರುವಾರ ಹೇಳಿದ್ದಾರೆ.

ಚೀನಾ ಬೆಂಬಲಿತ ಒಲಿ ಟೀಮ್‌ಗೆ ಶಾಕ್‌, ರಾಮಚಂದ್ರ ಪೌದೆಲ್‌ ನೇಪಾಳದ ರಾಷ್ಟ್ರಪತಿಯಾಗಿ ಆಯ್ಕೆ!

ಮಧ್ಯರಾತ್ರಿಯ ಸಮಯದಲ್ಲಿ ರಷ್ಯಾ ಈ ದುಷ್ಕೃತ್ಯ ಎಸಗಿದ್ದು, ಈ ವೇಳೆ ಬಹುತೇಕ ಉಕ್ರೇನಿಯನ್ನರು ಮಲಗಿದ್ದರು. ಕೇವಲ ಉಗ್ರರಿಂದ ಮಾತ್ರ ಈ ಕೃತ್ಯ ಎಸಗಲು ಸಾಧ್ಯ ಎಂದು ಜೆಲೆನ್‌ಸ್ಕಿ ಹೇಳಿದ್ದಾರೆ. ಉಕ್ರೇನ್‌ ವಿರುದ್ಧ ಕಳೆದ 1 ವರ್ಷದಿಂದ ರಷ್ಯಾ ನಡೆಸುತ್ತಿರುವ ದಾಳಿಯಿಂದಾಗಿ ಉಕ್ರೇನ್‌ನ ಹಲವು ಭಾಗಗಳಲ್ಲಿ ವಿದ್ಯುತ್‌ ಕೊರತೆ ಉಂಟಾಗಿದೆ. ಯುರೋಪ್‌ನ ಅತಿದೊಡ್ಡ ವಿದ್ಯುತ್‌ ಉತ್ಪಾದನಾ ಕೇಂದ್ರವಾದ, ಪ್ರಸ್ತುತ ರಷ್ಯಾದ ವಶದಲ್ಲಿರುವ ಜೆಪೋರಿಜಜಿಯಾ ಅಣುಸ್ಥಾವರದ ಬಳಿಯಲ್ಲೇ ದಾಳಿ ನಡೆದಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೈದ್ರಾಬಾದ್‌ ರಸ್ತೆಗಳಿಗೆ ಟ್ರಂಪ್, ಗೂಗಲ್‌ ಹೆಸರು
ಗಲ್ವಾನ್‌ ಹಿಂಸೆ ನಡೆದ ಸ್ಥಳದಲ್ಲಿ ವಿಶ್ವದ ಎತ್ತರದ ಯುದ್ಧ ಸ್ಮಾರಕ!