ಅನರ್ಹತೆ ನೋಟಿಸ್‌ ಪ್ರಶ್ನಿಸಿ ಸಚಿನ್ ಪೈಲಟ್‌ ಟೀಮ್‌ ಕೋರ್ಟ್‌ಗೆ

By Kannadaprabha NewsFirst Published Jul 17, 2020, 9:47 AM IST
Highlights

ರಾಜಸ್ಥಾನದ ಕಾಂಗ್ರೆಸ್‌ ಆಂತರಿಕ ಬಿಕ್ಕಟ್ಟು ಇದೀಗ ಹೈಕೋರ್ಟ್‌ ಮೆಟ್ಟಿಲೇರಿದೆ. ತಮಗೆ ಅನರ್ಹತೆ ನೋಟಿಸ್‌ ನೀಡಿರುವ ವಿಧಾನಸಭಾ ಸ್ಪೀಕರ್‌ ಕ್ರಮ ಪ್ರಶ್ನಿಸಿ ಸಚಿನ್‌ ಪೈಲಟ್‌ ಹಾಗೂ ಇತರ 18 ಬಂಡುಕೋರ ಶಾಸಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪಿಟಿಐ ಜೈಪುರ(ಜು.17): ರಾಜಸ್ಥಾನದ ಕಾಂಗ್ರೆಸ್‌ ಆಂತರಿಕ ಬಿಕ್ಕಟ್ಟು ಇದೀಗ ಹೈಕೋರ್ಟ್‌ ಮೆಟ್ಟಿಲೇರಿದೆ. ತಮಗೆ ಅನರ್ಹತೆ ನೋಟಿಸ್‌ ನೀಡಿರುವ ವಿಧಾನಸಭಾ ಸ್ಪೀಕರ್‌ ಕ್ರಮ ಪ್ರಶ್ನಿಸಿ ಸಚಿನ್‌ ಪೈಲಟ್‌ ಹಾಗೂ ಇತರ 18 ಬಂಡುಕೋರ ಶಾಸಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಗುರುವಾರ ಬೆಳಗ್ಗೆ ಸಚಿನ್‌ ಅವರ ತಂಡ ಅರ್ಜಿಯೊಂದನ್ನು ಸಲ್ಲಿಸಿದ್ದು ಅದು ನ್ಯಾ ಸತೀಶ್‌ ಚಂದ್ರ ಶರ್ಮಾ ಅವರ ಪೀಠದ ಮುಂದೆ ವಿಚಾರಣೆಗೆ ಬಂತು. ಆದರೆ ಈ ಹಂತದಲ್ಲಿ ಶಾಸಕರ ಪರ ವಕೀಲ ಹರೀಶ್‌ ಸಾಳ್ವೆ ಅವರು ಪರಿಷ್ಕೃತ ಅರ್ಜಿ ಸಲ್ಲಿಕೆಗೆ ಅವಕಾಶ ಕೋರಿದರು.

2ನೇ ದಿನ ಕಟ್ಟು​ನಿಟ್ಟಿನ ಲಾಕ್‌ಡೌನ್: 9 ಜಿಲ್ಲೆಗಳಲ್ಲಿ ಬಂದೋಬಸ್ತ್ ಬಿಗಿ ಮಾಡಿದ ಪೊಲೀ​ಸರು

ಇದಕ್ಕೆ ಒಪ್ಪಿದ ನ್ಯಾ ಶರ್ಮಾ, ವಿಸ್ತೃತ ವಿಭಾಗೀಯ ಪೀಠಕ್ಕೆ ವಿಚಾರಣೆಯನ್ನು ಹಸ್ತಾಂತರಿಸಿ ಶುಕ್ರವಾರಕ್ಕೆ ವಿಚಾರಣೆ ನಿಗದಿಪಡಿಸಿದರು. ಬಳಿಕ ಸಂಜೆ 5 ಗಂಟೆ ವೇಳೆಗೆ ಸಚಿನ್‌ ಬಣ ಪರಿಷ್ಕೃತ ಅರ್ಜಿಯನ್ನು ಸಲ್ಲಿಸಿತು.

ಶಾಸಕಾಂಗ ಸಭೆಗೆ ಪೈಲಟ್‌ ಹಾಗೂ ಅವರ ಬೆಂಬಲಿಗ 19 ಶಾಸಕರು ವಿಪ್‌ ಉಲ್ಲಂಘಿಸಿ ಗೈರು ಹಾಜರಾಗಿದ್ದಕ್ಕೆ ಕಾಂಗ್ರೆಸ್‌ ಪಕ್ಷವು ಸ್ಪೀಕರ್‌ಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಸ್ಪೀಕರ್‌ ಸಿ.ಪಿ. ಜೋಶಿ ಅವರು ಶಾಸಕರಿಗೆ ಅನರ್ಹತೆ ನೋಟಿಸ್‌ ನೀಡಿ, ಶುಕ್ರವಾರದೊಳಗೆ ಉತ್ತರಿಸಬೇಕು ಎಂದು ಸೂಚಿಸಿದ್ದರು.

ಇನ್ನು 6-7 ತಿಂಗಳಲ್ಲಿ ಕೊರೋನಾ ತಾರಕಕ್ಕೆ, ಎಚ್ಚರಿಕೆ ಅನಿವಾರ್ಯ: ಆರ್‌.ಅಶೋಕ್‌

ಆದರೆ ಇದನ್ನು ಹೈಕೋರ್ಟಲ್ಲಿ ಪ್ರಶ್ನಿಸಿದ ಪೈಲಟ್‌ ಬಣದ ವಕೀಲ ಹರೀಶ್‌ ಸಾಳ್ವೆ, ‘ವಿಧಾನಸಭೆ ಅಧಿವೇಶನ ನಡೆದ ಸಂದರ್ಭದಲ್ಲಿ ಮಾತ್ರ ವಿಪ್‌ ಅನ್ವಯವಾಗುತ್ತದೆ. ನೋಟಿಸ್‌ಗೆ ಸಾಂವಿಧಾನಿಕ ಸಿಂಧುತ್ವವಿಲ್ಲ’ ಎಂದರು. ಅಲ್ಲದೆ, ‘ಹೊಸ ವಾದ ಒಳಗೊಂಡ ಮರು ಅರ್ಜಿ ದಾಖಲಿಸುವೆ’ ಎಂದು ಕೋರಿದರು. ಇದಕ್ಕೆ ಒಪ್ಪಿದ ಕೋರ್ಟ್‌, ಶುಕ್ರವಾರ ವಿಚಾರಣೆ ಮುಂದೂಡಿತು.

ಘಟಾನುಘಟಿ ವಕೀಲರ ಪಡೆ

ಅರ್ನಹತೆ ವಿಷಯದಲ್ಲಿ ಉಭಯ ಬಣಗಳು ಹಿರಿಯ ವಕೀಲರಿಗೆ ಮೊರೆ ಹೋಗಿವೆ. ಸಚಿನ್‌ ಪೈಲಟ್‌ ಪರ ಹರೀಶ್‌ ಸಾಳ್ವೆ ಮತ್ತು ಮುಕುಲ್‌ ರೋಹಟಗಿ ವಾದ ಮಂಡಿಸುತ್ತಿದ್ದರೆ, ಕಾಂಗ್ರೆಸ್‌ ಸರ್ಕಾರದ ಪರ ಮತೋರ್ವ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅಘಾಡಕ್ಕೆ ಇಳಿದಿದ್ದಾರೆ.

click me!