ಇಂದಿನಿಂದ ಅಮೆರಿಕ, ಫ್ರಾನ್ಸ್‌ಗೆ ವಿಮಾನ ಸಂಚಾರ ಆರಂಭ

By Kannadaprabha NewsFirst Published Jul 17, 2020, 8:56 AM IST
Highlights

ಕೊರೋನಾ ಹಿನ್ನೆಲೆಯಲ್ಲಿ ಮಾ.23ರಿಂದ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳು ಶುಕ್ರವಾರದಿಂದ ಸೀಮಿತ ಸ್ವರೂಪದಲ್ಲಿ ಪುನಾರಂಭವಾಗಲಿದೆ. ಶುಕ್ರವಾರ ಅಮೆರಿಕದಿಂದ ಮತ್ತು ಶನಿವಾರ ಫ್ರಾನ್ಸ್‌ನಿಂದ ಸಂಚಾರ ಆರಂಭವಾಗಲಿದೆ.

ನವದೆಹಲಿ(ಜು.17): ಕೊರೋನಾ ಹಿನ್ನೆಲೆಯಲ್ಲಿ ಮಾ.23ರಿಂದ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳು ಶುಕ್ರವಾರದಿಂದ ಸೀಮಿತ ಸ್ವರೂಪದಲ್ಲಿ ಪುನಾರಂಭವಾಗಲಿದೆ. ಶುಕ್ರವಾರ ಅಮೆರಿಕದಿಂದ ಮತ್ತು ಶನಿವಾರ ಫ್ರಾನ್ಸ್‌ನಿಂದ ಸಂಚಾರ ಆರಂಭವಾಗಲಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ವಿಷಯ ಪ್ರಕಟಿಸಿದ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ, ವಿಮಾನ ಸಂಚಾರ ಸಂಬಂಧ ಭಾರತ ಸರ್ಕಾರವು ಅಮೆರಿಕ ಮತ್ತು ಫ್ರಾನ್ಸ್‌ ಸರ್ಕಾರಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಇನ್ನು 6-7 ತಿಂಗಳಲ್ಲಿ ಕೊರೋನಾ ತಾರಕಕ್ಕೆ, ಎಚ್ಚರಿಕೆ ಅನಿವಾರ್ಯ: ಆರ್‌.ಅಶೋಕ್‌

ಇದರನ್ವಯ ‘ಜುಲೈ 17ರಿಂದ ಜು.31ರವರೆಗೆ ಅಮೆರಿಕ ಮತ್ತು ಭಾರತದ ನಡುವೆ ಒಟ್ಟು 18 ಸಂಚಾರ ನಡೆಸಲಿದೆ. ದೆಹಲಿ- ನೆವಾರ್ಕ್ ನಡುವೆ ನಿತ್ಯ ಮತ್ತು ದೆಹಲಿ- ಸ್ಯಾನ್‌ಫ್ರಾನ್ಸಿಸ್ಕೋ ನಡುವೆ ವಾರಕ್ಕೆ 3 ವಾರ ಸಂಚಾರ ನಡೆಸಲಿದೆ. ಅದೆ ರೀತಿ ಜುಲೈ 18ರಿಂದ ಆ.1ರವರೆಗೆ ದಿಲ್ಲಿ, ಮುಂಬೈ, ಬೆಂಗಳೂರು ಹಾಗೂ ಪ್ಯಾರಿಸ್‌ ನಡುವೆ 28 ವಿಮಾನಗಳು ಹಾರಾಟ ನಡೆಸಲಿವೆ’ ಎಂದು ಹೇಳಿದರು.

ಅಮೆರಿಕ ಹಾಗೂ ಫ್ರಾನ್ಸ್‌ಗೆ ಭಾರತದಿಂದ ಏರ್‌ ಇಂಡಿಯಾ, ಫ್ರಾನ್ಸ್‌ನಿಂದ ಏರ್‌ ಫ್ರಾನ್ಸ್‌, ಅಮೆರಿಕದಿಂದ ಯುನೈಟೆಡ್‌ ಏರ್‌ಲೈನ್ಸ್‌ ಸಂಚರಿಸಲಿವೆ. ಇದೇ ವೇಳೆ ಇದೇ ಥರದ ವಿಮಾನ ಹಾರಾಟಕ್ಕೆ ಬ್ರಿಟನ್‌ ಹಾಗೂ ಜರ್ಮನಿಗೆ ಕೂಡ ಕೋರಲಾಗಿದೆ. ಜರ್ಮನಿಯ ಲುಫ್ತಾನ್ಸಾ ಏರ್‌ಲೈನ್ಸ್‌ ಜತೆ ಬಹುತೇಕ ಮಾತುಕತೆ ಮುಕ್ತಾಯವಾಗಿದೆ ಎಂದರು.

ಕರ್ತವ್ಯ ಬಹಿಷ್ಕರಿಸಿದ ಆಯುಷ್‌ ವೈದ್ಯರು: 2000 ಸರ್ಕಾರಿ ವೈದ್ಯರಿಂದ ರಾಜೀನಾಮೆ

ಲಾಕ್ಡೌನ್‌ ಅವಧಿಯಲ್ಲಿ ಏರ್‌ಇಂಡಿಯಾ ಮತ್ತು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕಂಪನಿಗಳು ವಿದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದ 21.5 ಲಕ್ಷ ಭಾರತೀಯರನ್ನು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಯೋಜನೆಯಡಿ ತವರಿಗೆ ಕರೆ ತಂದಿತ್ತು. ಇನ್ನು ಖಾಸಗಿ ವಿಮಾನಯಾನ ಕಂಪನಿಗಳು 12258 ಜನರನ್ನು ಕರೆತಂದಿದ್ದವು. ಇನ್ನು 1.35 ಲಕ್ಷ ಜನರು ವಿಶೇಷ ವಿಮಾನಗಳ ಮೂಲಕ ತವರಿಗೆ ಬಂದಿದ್ದರು.

click me!