Russia Ukraine Crisis ತಾತ್ಕಾಲಿಕವಾಗಿ ಉಕ್ರೇನ್ ತೊರೆಯಲು ಭಾರತೀಯ ನಾಗರಿಕರಿಗೆ ಸೂಚನೆ!

Published : Feb 20, 2022, 07:34 PM ISTUpdated : Feb 24, 2022, 10:20 AM IST
Russia Ukraine Crisis ತಾತ್ಕಾಲಿಕವಾಗಿ ಉಕ್ರೇನ್ ತೊರೆಯಲು ಭಾರತೀಯ ನಾಗರಿಕರಿಗೆ ಸೂಚನೆ!

ಸಾರಾಂಶ

ಉಕ್ರೇನ್ ಮೇಲೆ ಶೆಲ್ ದಾಳಿ ನಡೆಸಿದ ರಷ್ಯಾ ಉಕ್ರೇನ್‌ನಲ್ಲಿ ಹೆಚ್ಚಾಗಿದೆ ಯದ್ಧ ಭೀತಿ, ಭಾರತೀಯ ನಾಗರೀಕರಿಗೆ ಸೂಚನೆ ತಕ್ಷಣ ಉಕ್ರೇನ್ ತೊರೆಯಲು ಸೂಚನೆ, ಹೆಚ್ಚಾದ ಆತಂಕ  

ಉಕ್ರೇನ್(ಫೆ.20): ರಷ್ಯಾ ಹಾಗೂ ಉಕ್ರೇನ್(Russia Ukraine Crisis) ನಡುವಿನ ಯುದ್ಧ ಭೀತಿ ಹೆಚ್ಚಾಗಿದೆ. ಈಗಾಗಲೇ ರಷ್ಯಾ ಬೆಂಬಲಿತ ಬಂಡುಕೋರರು ಉಕ್ರೇನ್‌ನಲ್ಲಿ ಶೆಲ್ ದಾಳಿ ನಡೆಸಿದ್ದಾರೆ. ಇಬ್ಬರು ಉಕ್ರೇನ್ ಯೋಧರು ದಾಳಿಯಲ್ಲಿ ಹತರಾಗಿದ್ದಾರೆ. ಇದರ ಬೆನ್ನಲ್ಲೇ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಭಾರತೀಯ ರಾಯಭಾರ ಕಚೇರಿ(Indian Embassy) ಮಹತ್ವದ ಸೂಚನೆ ನೀಡಿದೆ. ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು(Indian Nationals and Students), ನಾಗರೀಕರು  ತಾತ್ಕಾಲಿಕವಾಗಿ ಉಕ್ರೇನ್ ತೊರೆಯುವಂತೆ ಸೂಚನೆ ನೀಡಲಾಗಿದೆ.

ಉಕ್ರೇನ್‌ನಲ್ಲಿ ಸದ್ಯದ ಪರಿಸ್ಥಿತಿ ಉತ್ತಮವಾಗಿಲ್ಲ. ರಷ್ಯಾ ದಾಳಿಗೆ ಸಜ್ಜಾಗುತ್ತಿದೆ. ಹೀಗಾಗಿ ಭಾರತೀಯ ನಾಗರೀಕರು, ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿರುವುದು ಕ್ಷೇಮವಲ್ಲ. ಹೀಗಾಗಿ ಭಾರತ ಸರ್ಕಾರ ನಿಯೋಜಿಸಿರುವ ವಂದೇ ಭಾರತ್ ಸೇರಿದಂತೆ ಚಾರ್ಟೆಡ್ ವಿಮಾನದ ಮೂಲಕ ತಾತ್ಕಾಲಿಕವಾಗಿ ಉಕ್ರೇನ್ ತೊರೆಯಲು ರಾಯಭಾರ ಕಚೇರಿ ಸೂಚಿಸಿದೆ. 

Russia Ukraine Crisis ರಷ್ಯಾ ಬೆಂಬಲಿತ ಬಂಡುಕೋರರಿಂದ ಉಕ್ರೇನ್‌ನಲ್ಲಿ ಶೆಲ್‌ ದಾಳಿ!

ಭಾರತೀಯ ಸಮುದಾಯದ ಜೊತೆ ನಿಕಟ ಸಂಪರ್ಕವಿದೆ. ಉಕ್ರೇನ್‌ನಲ್ಲಿರುವ ಭಾರತೀಯರು ಆತಂಕ ಪಡುವ ಅಗತ್ಯವಿಲ್ಲ. ಭಾರತೀಯ ರಾಯಭಾರ ಕಚೇರಿ ಎಲ್ಲಾ ರೀತಿಯ ನೆರವು ನೀಡಲಿದೆ ಎಂದಿದೆ. ಫೆಬ್ರವರಿ 15 ರಂದು ಭಾರತೀಯ ರಾಯಭಾರ ಕಚೇರಿ ಮೊದಲ ಬಾರಿಗೆ ಭಾರತೀಯ ನಾಗರೀಕರಿಗೆ ಉಕ್ರೇನ್ ತೊರೆಯಲು ಸೂಚನೆ ನೀಡಿತ್ತು. ಇದೀಗ ಎರಡನೇ ಬಾರಿಗೆ ಸೂಚನೆ ನೀಡಲಾಗಿದೆ.

ವಂದೇ ಬಾರತ್ ಮಿಷನ್ ಅಡಿಯಲ್ಲಿ ಏರ್ ಇಂಡಿಯಾ ಪ್ರತಿ ದಿನ ಮೂರು ವಿಮಾನಗಳ ಕಾರ್ಯನಿರ್ವಹಿಸುತ್ತಿದೆ. 20,000ಕ್ಕೂ ಹೆಚ್ಚು ನಾಗರೀಕರು, 18,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 38 ಸಾವಿರಕ್ಕೂ ಹೆಚ್ಚು ಭಾರತೀಯರು ಉಕ್ರೇನ್‌ನಲ್ಲಿ ನೆಲೆಸಿದ್ದಾರೆ. 

Russia Ukraine Crisis ಉಕ್ರೇನ್‌ ಗಡಿಯಲ್ಲಿ ರಷ್ಯಾ ಯುದ್ಧ ವಿಮಾನಗಳ ದಂಡು, ದಾಳಿ ಖಚಿತ ಎಂದ ಜೋ ಬೈಡನ್

ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ಭೀತಿ ಆರಂಭಗೊಂಡ ಬೆನ್ನಲ್ಲೇ ಹಲವರು ಭಾರತಕ್ಕೆ ಮರಳಿದ್ದಾರೆ. ಯುದ್ಧದಿಂದ ಹಿಂದೆ  ಸರಿಯುವ ಸೂಚನೆ ನೀಡಿದ್ದ ರಷ್ಯಾ, ಬಂಡುಕೋರರ ನೆರವಿನಿಂದ ಉಕ್ರೇನ್ ಮೇಲೆ ಶೆಲ್ ದಾಳಿ ನಡೆಸಿದೆ. ಉಕ್ರೇನ್ ಮೇಲಿನ ದಾಳಿ ಬಹುತೇಕ ಖಚಿತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದರು.

ಯುದ್ಧ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದ ಜೋ ಬೈಡನ್ ಹಾಗೂ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರಷ್ಯಾಗ ಎಚ್ಚರಿಕೆ ನೀಡಿದ್ದರು. ಶನಿವಾರ ಒಂದೆ ದಿನ 70ಕ್ಕೂ ಹೆಚ್ಚು ಅಪ್ರಚೋದಿತ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ ಕರ್ತವ್ಯದಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದರೆ, ಐವರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಹೇಳಿದೆ.

ಇತ್ತ ಉಕ್ರೇನ್ ಮೇಲಿನ ದಾಳಿಗೆ ಸಜ್ಜಾಗಿರುವ ರಷ್ಯಾ ವಿಶ್ವ ಯುದ್ಧ ನೆನಪಿಸುತ್ತಿದೆ. 1945ರ ಬಳಿಕ ರಷ್ಯಾ ಅತೀ ದೊಡ್ಡ ಯುದ್ಧಕ್ಕೆ ತಯಾರಿ ಮಾಡಿದೆ. ಯುದ್ಧ ಪರಿಹಾರವಲ್ಲ. ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಲು ಯುನೈಟೆಡ್ ಕಿಂಗ್ಡಮ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!