ಪಂಜಾಬ್(ಫೆ.20): ಪಂಜ ರಾಜ್ಯಗಳ ಚುನಾವಣೆಯಲ್ಲಿ(Five State Election) ಪಂಜಾಬ್ ವಿಧಾನಸಭೆ ಚುನಾವಣೆ(Assembly Election) ಭಾರಿ ಸದ್ದು ಮಾಡುತ್ತಿದೆ. ಇಂದು(ಫೆ.20) ಒಂದು ಹಂತದಲ್ಲಿ ಪಂಜಾಬ್ ವಿಧಾನಸಭೆ ಚುನಾವಣಾ(Pujab Election) ಮತದಾನ ನಡೆಯುತ್ತಿದೆ. 117 ಸ್ಥಾನಗಳಿಗೆ ನಡೆಯುತ್ತಿರುವ ಮತದಾನ ಬಹುತೇಕ ಶಾಂತವಾಗಿದೆ. ಇದರ ನಡುವೆ ಮತಗಟ್ಟೆ(Poll booth) ಪ್ರವೇಶಕ್ಕೆ ಯತ್ನಿಸಿದ ಬಾಲಿವುಡ್ ನಟ, ಸಮಾಜ ಸೇವಕ ಸೋನು ಸೂದ್‌ನನ್ನು(Sonu Sood) ಪಂಜಾಬ್ ಪೊಲೀಸರು ತಡೆದಿದ್ದಾರೆ. ಇಷ್ಟೇ ಅಲ್ಲ ಕಾರು ಸೀಝ್ ಮಾಡಿ ಸೂದ್‌ನನ್ನು ವಾಪಸ್ ಕಳುಹಿಸಿದ್ದಾರೆ.
ಮೊಗಾ ವಿಧಾನಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ. ಮೊಗಾ ಕ್ಷೇತ್ರದಿಂದ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್(Malavika Sood) ಕಾಂಗ್ರೆಸ್ ಅಭ್ಯರ್ಥಿಯಾಗಿ(Congress Candidate) ಸ್ಪರ್ಧಿಸುತ್ತಿದ್ದಾರೆ. ಜನವರಿ ತಿಂಗಳಿನಿಂದ ಸೋನು ಸೂದ್ ಸಹೋದರಿಗಾಗಿ ಸಾಕಷ್ಟು ಶ್ರಮವಹಿಸಿದ್ದಾರೆ. ಸಹೋದರಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇಂದು ಮತದಾನದ ವೇಳೆ ಕೆಲ ಪಕ್ಷದ ಎಜೆಂಟರು ಮತಗಟ್ಟೆಗಳಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸೋನು ಸೂದ್ ಮೊಗಾ ಕ್ಷೇತ್ರದ ಮತಗಟ್ಟೆಗೆ ಆಗಮಿಸಿದ್ದಾರೆ.ಈ ವೇಳೆ ಪೊಲೀಸರು ಸೋನು ಸೂದ್ ತಡೆದಿದ್ದಾರೆ
ಕಾರು ಮುಖಾಮುಖಿ ಡಿಕ್ಕಿ, ಸ್ಥಳಕ್ಕೆ ಧಾವಿಸಿ ಪ್ರಜ್ಞಾ ಹೀನಾ ಯುವಕನ ಆಸ್ಪತ್ರೆ ದಾಖಲಿಸಿದ ಸೋನು ಸೂದ್!
ಮತಗಟ್ಟೆಗೆ ಆಗಮಿಸಿದ ಸೋನು ಸೂದ್ ಕಾರನ್ನು ಪೊಲೀಸರು ತಡೆದಿದ್ದಾರೆ. ಬಳಿಕ ಈ ರೀತಿಯ ಮತಗಟ್ಟೆ ಪ್ರವೇಶಿಸಲು ಸಾಧ್ಯವಿಲ್ಲ. ಮತಗಟ್ಟೆಗಳಲ್ಲಿ ಹಣ ಹಂಚಿಕೆ ಸೇರಿದಂತೆ ಯಾವುದೇ ನಿಯಮ ಉಲ್ಲಂಘನೆ ಕೆಲಸಗಳು ನಡೆಯುತ್ತಿದ್ದರೆ ದೂರು ನೀಡಲು ಅವಕಾಶವಿದೆ. ಆ್ಯಪ್ ಮೂಲಕವೂ ಸುಲಭವಾಗಿ ದೂರು ನೀಡಬಹುದು. ಚುನಾವಣಾ ಆಯೋಗ ತಕ್ಷಣ ತನಿಖೆ ನಡೆಸಲಿದೆ. ಇಲ್ಲಿ ಸೋನು ಸೂದ್ ಅಥವಾ ಇನ್ಯಾರು ಪ್ರವೇಶಿ ಕ್ರಮ ಕೈಗೊಳ್ಳಲು ಅಥವಾ ಈ ಕುರಿತು ಕಾರ್ಯಚಟುವಟಿಕೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಮತಗಟ್ಟೆ ಪ್ರವೇಶಕ್ಕೆ ಯತ್ನಿಸಬಾರದು. ಮರಳಬೇಕು ಎಂದು ಪೊಲೀಸರು ಹೇಳಿದ್ದಾರೆ. ಈ ವೇಳೆ ಸೋನು ಸೂದ್ ಕಾರು ವಶಕ್ಕೆ ಪಡೆದಿದ್ದಾರೆ.
ಅಕಾಲಿ ದಳ ಸೇರಿದಂತೆ ಕೆಲ ಪಕ್ಷಗಳು ಮತದಾರರಿಗೆ ಹಣ ಹಂಚುತ್ತಿದ್ದಾರೆ ಅನ್ನೋ ಮಾಹಿತಿ ಇದೆ. ಚುನಾವಣೆಯಲ್ಲಿ ಯಾವುದೇ ನಿಯಮ ಉಲ್ಲಂಘನೆ ನಡೆಯಬಾರದು. ಇದರಿಂದ ಅನ್ಯಾಯವಾಗಲಿದೆ. ಈ ಕುರಿತು ಪರಿಶೀಲಿಸಲು ಆಗಮಿಸಿದ್ದೇನೆ ಎಂದು ಸೋನು ಸೂದ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
Punjab Elections: ಚುನಾವಣೆಗೂ ಮೊದಲೇ ಸಿಧುಗೆ ಬಿಗ್ ಶಾಕ್, ಸದ್ದು ಮಾಡುತ್ತಿದೆ ಸೋನು ಸೂದ್ ಹೇಳಿಕೆ!
ಸೋನು ಸೂದ್ ಮತದಾನ ನಡೆಯುವ ವೇಳೆ ಮತಗಟ್ಟೆ ಪ್ರವೇಶಿಸದಂತೆ ಪೊಲೀಸರು ನಿರ್ಬಂಧ ವಿದಿಸಿದ್ದಾರೆ. ಇಷ್ಟೇ ಅಲ್ಲ ಮನೆಯಿಂದ ಹೊರಬಂದು ಮತಗಟ್ಟೆ ಪ್ರವೇಶಿಸಲು ಯತ್ನಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಪಂಜಾಬ್ ಚುನಾವಣೆ
ಈ ಬಾರಿ ಪಂಜಾಬ್ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಆಮ್ ಆದ್ಮಿ ಪಕ್ಷ ಅಧಿಕಾರಕ್ಕೇರಲಿದೆ ಅನ್ನೋದು ಚುನಾವಣೆ ಸಮೀಕ್ಷೆ. ಇದರಂತೆ ಆಪ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಕ್ಯಾಪ್ಟನ್ ಅಮರಿಂದರ್ ಸಿಂಗ್ ನಿರ್ಗಮನ, ನವಜೋತ್ ಸಿಂಗ್ ಸಿಧು ಹಾಗೂ ಚರಣಜಿತ್ ಸಿಂಗ್ ಚನಿ ನಡುವಿನ ಮನಸ್ತಾಪಗಳಿಂದ ಈ ಬಾರಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಲಿದೆ ಅನ್ನೋದು ತಜ್ಞರ ಲೆಕ್ಕಾಚಾರ. ಆಪ್ ಹಾಗೂ ಕಾಂಗ್ರೆಸ್ ನಡುವೆ ಬಿಜೆಪಿ ಲಾಭ ಪಡೆಯಲು ಯತ್ನಿಸುತ್ತಿದೆ.
2017ರಲ್ಲಿ ನಡೆದ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತ್ತು. ಅಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಇತ್ತೀಚೆಗೆ ಅಮರಿಂದರ್ ಸಿಂಗ್ ಅವರನ್ನು ಕಾಂಗ್ರೆಸ್ ಕಡೆಗಣಿಸಿತ್ತು. ಹೀಗಾಗಿ ಕಾಂಗ್ರೆಸ್‌ನಿಂದ ಹೊರಬಂದ ಅಮರಿಂದರ್ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದಾರೆ