
ಜನವರಿ 1, 2023 ರಂದು ಅಂದರೆ ಭಾನುವಾರ ತಮಿಳುನಾಡಿನ (Tamil Nadu) ಚೆನ್ನೈನಲ್ಲಿ (Chennai) ನಡೆದ ದ್ರಾವಿಡ ಮುನ್ನೇತ್ರ ಕಳಗಂ (Dravida Munnetra Kazhagam) ಸಭೆಯಲ್ಲಿ (Meeting) ಮಹಿಳಾ ಪೊಲೀಸ್ ಪೇದೆಯೊಬ್ಬರಿಗೆ ಡಿಎಂಕೆಯ (DMK) ಇಬ್ಬರು ಕಾರ್ಯಕರ್ತರು ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು, ಈ ಆರೋಪದ ಮೇಲೆ ಇಬ್ಬರು ಡಿಎಂಕೆ ಪದಾಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದಾಗ ಗಲಾಟೆ ನಡೆದಿದೆ. ಪೊಲೀಸರು (Police) ಅವರನ್ನು ವಶಕ್ಕೆ ಪಡೆಯುತ್ತಿದ್ದ ವೇಳೆ, ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ಕಾರ್ಯಕರ್ತರು ಅವರನ್ನು ಸುತ್ತುವರಿದಿದ್ದು ತೀವ್ರ ಗದ್ದಲ ಸೃಷ್ಟಿಸಿದ್ದಾರೆ ಎಂದು ತಿಳಿದುಬಂದಿದೆ.
ಭಾನುವಾರ ತಮಿಳುನಾಡು ರಾಜಧಾನಿ ಚೆನ್ನೈನ ಸಾಲಿಗ್ರಾಮಮ್ ಪ್ರದೇಶದ (Saligramam Area) ದಶರಥಪುರಂ ಬಸ್ ನಿಲ್ದಾಣದ ಬಳಿ ಡಿಎಂಕೆ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಪಕ್ಷದ ಸಂಸದೆ ಕನಿಮೊಳಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಅನೇಕ ಸಾಮಗ್ರಿಗಳನ್ನು ಉಡುಗೊರೆ ನೀಡಿದರು ಎಂದು ತಿಳಿದುಬಂದಿದೆ.
ಈ ಸಭೆ ಮುಗಿಯುತ್ತಿದ್ದಂತೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಪ್ರವೀಣ್ ಮತ್ತು ಏಕಂಬರಂ ಎಂಬ ಇಬ್ಬರು ದುಷ್ಕರ್ಮಿಗಳು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ದು:ಖ ತೋಡಿಕೊಂಡಿದ್ದಾರೆ. ಈ ವೇಳೆ ಆ ಇಬ್ಬರು ಡಿಎಂಕೆ ಕಾರ್ಯಕರ್ತರು ಪರಾರಿಯಾಗಲು ಪ್ರಯತ್ನಿಸಿದಾಗ ಪೊಲೀಸರು ಸುತ್ತುವರೆದರು, ಅಲ್ಲದೆ, ಒಬ್ಬರು ಇನ್ಸ್‌ಪೆಕ್ಟರ್ ಈ ಇಬ್ಬರನ್ನೂ ಹಿಡಿದುಕೊಂಡರು ಎಂದು ತಿಳಿದುಬಂದಿದೆ. ಆದರೆ, ಪೊಲೀಸರು ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದಂತೆ, ಡಿಎಂಕೆ ಕಾರ್ಯಕರ್ತರು ಅವರನ್ನು ಸುತ್ತುವರೆದು ಗದ್ದಲ ಸೃಷ್ಟಿಸಿದ್ದು, ಯಾವುದೇ ದೂರು ದಾಖಲಾಗದ ಕಾರಣ ಆರೋಪಿಗಳನ್ನು ಬಿಟ್ಟು ಬಿಡಲಾಯಿತು ಎಂದು ತಿಳಿದುಬಂದಿದೆ.
ಇದನ್ನು ಓದಿ: ಡಿಎಂಕೆ ಧ್ವಜ ತೆರವು ವೇಳೆ ವಿದ್ಯುತ್ ಸ್ಪರ್ಶ: ಕಾರ್ಯಕರ್ತ ಸಾವು
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಅಣ್ಣಾಮಲೈ, ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ. ಸಂಸದೆ ಕನಿಮೊಳಿ ಭಾಗವಹಿಸಿದ್ದ ಸಾರ್ವಜನಿಕ ಸಭೆಯಲ್ಲಿ ಡಿಎಂಕೆ ಯುವ ಘಟಕದ ಇಬ್ಬರು ಕಾರ್ಯಕರ್ತರು ರಕ್ಷಣಾ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯೊಬ್ಬರಿಗೆ ಕಿರುಕುಳ ನೀಡಿದ್ದಾರೆ. ಹೆಚ್ಚು ಅಸಹ್ಯಕರ ಸಂಗತಿಯೆಂದರೆ, ಡಿಎಂಕೆ ಕಾರ್ಯಕರ್ತರು ಸುತ್ತುವರಿದು ಆ ಇಬ್ಬರು ವ್ಯಕ್ತಿಗಳನ್ನು ಬಂಧಿಸದಂತೆ ಪೊಲೀಸರನ್ನು ತಡೆದರು ಎಂದು ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ ಮತ್ತು ತಮಿಳುನಾಡು ಸಿಎಂ ಸ್ಟಾಲಿನ್ ಮೂಕ ಪ್ರೇಕ್ಷಕರಾಗಿದ್ದಾರೆ ಎಂದೂ ಬಿಜೆಪಿ ಮುಖ್ಯಸ್ಥ ಆರೋಪಿಸಿದ್ದಾರೆ.
ಡಿಎಂಕೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೆ. ಅನ್ಬಳಗನ್ ಅವರ ಶತಮಾನೋತ್ಸವದ ಅಂಗವಾಗಿ ವಿರುಗಂಬಾಕ್ಕಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ತಮಿಳುನಾಡು ಸಿಎಂ ಸ್ಟಾಲಿನ್ ಸೇರಿದಂತೆ ಡಿಎಂಕೆ ಪಕ್ಷದ ಉನ್ನತ ನಾಯಕರು ಈ ಯೋಜನೆಯ ಭಾಗವಾಗಿದ್ದರು ಮತ್ತು ಡಿಸೆಂಬರ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು ಎಂದೂ ಹೇಳಲಾಗಿದೆ.
ಇದನ್ನೂ ಓದಿ: ಡಿಎಂಕೆ ಸಂಸದ ಎ. ರಾಜಾಗೆ ಸೇರಿದ 55 ಕೋಟಿ ಮೌಲ್ಯದ ಆಸ್ತಿ ಜಪ್ತಿ
ಪ್ರವೀಣ್ ಮತ್ತು ಏಕಂಬರಂ ಎಂಬ ಇಬ್ಬರು ಡಿಎಂಕೆ ಕಾರ್ಯಕರ್ತರು ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಪೇದೆಗೆ ಕಿರುಕುಳ ನೀಡಿದ್ದಾರೆ. ಸ್ಥಳದಲ್ಲಿದ್ದ ಇತರ ಪೊಲೀಸರು ತಮ್ಮ ಸಹೋದ್ಯೋಗಿ ಕಣ್ಣೀರಿಡುತ್ತಿರುವುದನ್ನು ಕಂಡು, ಇಬ್ಬರನ್ನು ಬಂಧಿಸುವ ಸಲುವಾಗಿ ಸುತ್ತುವರೆದರು. ಆದರೆ, ಪೊಲೀಸ್ ತಂಡವನ್ನು ಡಿಎಂಕೆ ಕಾರ್ಯಕರ್ತರು ತಡೆದು, ಗದ್ದಲ ಸೃಷ್ಟಿಸಿದರು. ಯಾವುದೇ ದೂರು ಅಧಿಕೃತವಾಗಿ ದಾಖಲಾಗದ ಕಾರಣ ನಂತರ ಆ ಕಾರ್ಯಕರ್ತರನ್ನು ಬಿಡಲಾಯಿತು ಎಂದೂ ವರದಿಯಲ್ಲಿ ತಿಳಿಸಿದೆ.
ಇನ್ನೊಂದೆಡೆ, ಈ ಇಬ್ಬರು ಆರೋಪಿ ಯುವ ಘಟಕದ ಕಾರ್ಯಕರ್ತರ ವಿರುದ್ಧ ಡಿಎಂಕೆ ಇದುವರೆಗೆ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ಹಿಂದಿ ಹೇರಿಕೆ ವಿರೋಧಿಸಿ ತಮಿಳುನಾಡು ವಯೋವೃದ್ಧ ರೈತ ಆತ್ಮಾಹುತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ