ಮೋದಿ ವಿರುದ್ಧ ಸಾಕ್ಷ್ಯಚಿತ್ರಕ್ಕೆ ಬಿಬಿಸಿಗೆ ಪತ್ರ, ನಿವೃತ್ತಿ ಜಡ್ಜ್, ಸೇನಾಧಿಕಾರಿಗಳು ಸೇರಿ 302ರ ದಿಗ್ಗಜರ ಸಹಿ!

By Suvarna NewsFirst Published Jan 21, 2023, 5:43 PM IST
Highlights

ಪ್ರಧಾನಿ ಮೋದಿ ವಿರುದ್ಧ ಬಿಬಿಸಿ ವಾಹಿನಿ ಪ್ರಸಾರ ಮಾಡಿದ ಸಾಕ್ಷ್ಯ ಚಿತ್ರಕ್ಕೆ ಭಾರತ ಸೇರಿದಂತೆ ಹಲವೆಡೆ ಆಕ್ರೋಶ ವ್ಯಕ್ತವಾಗಿದೆ. ಇದೀಗ ನಿವೃತ್ತ ಜಡ್ಜ್, ಸರ್ಕಾರಿ ಅಧಿಕಾರಿಗಳು, ರಾಯಭಾರಿಗಳು, ನಿವೃತ್ತ ಸೇನಾಧಿಕಾರಿಗಳು ಸಹಿ ಹಾಕಿ ಬಿಬಿಸಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಏನಿದೆ?

ನವದೆಹಲಿ(ಜ.21): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಬಿಸಿ ವಾಹನಿಯ ಸಾಕ್ಷ್ಯ ಚಿತ್ರ ಭಾರಿ ವಿವಾದಕ್ಕೆ ಕಾರಣವಾಗಿದೆ. ಗುಜರಾತ್ ಗಲಭೆ, ನರಮೇಧಕ್ಕೆ ಮೋದಿ ಕಾರಣ ಎಂದು ಬಿಂಬಿಸಿ ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರ ಮಾಡಿತ್ತು. ಈ ಸಾಕ್ಷ್ಯ ಚಿತ್ರ ಬ್ರಿಟನ್ ಸಂಸತ್ತಿನಲ್ಲೂ ಗದ್ದಲ ಎಬ್ಬಿಸಿತ್ತು. ಇತ್ತ ಭಾರತೀಯ  ವಿದೇಶಾಂಗ ಇಲಾಖೆ ಕೂಡ ಸಾಕ್ಷ್ಯ ಚಿತ್ರವನ್ನು ಪ್ರಚಾರಕ್ಕಾಗಿ ಮಾಡಲಾಗಿದೆ ಎಂದು ಆರೋಪಗಳನ್ನು ತಳ್ಳಿ ಹಾಕಿತ್ತು. ಸುಪ್ರೀಂ ಕೋರ್ಟ್ ಈ ಕುರಿತು ಸುದೀರ್ಘ ವಿಚಾರಣೆ ನಡೆಸಿ ಮೋದಿಗೆ ಕ್ಲೀನ್ ಚಿಟ್ ನೀಡಿದೆ. ಆದರೆ ಬಿಬಿಸಿ ಮಾತ್ರ ವ್ಯತಿರಿಕ್ತವಾಗಿ ಹೇಳಿದೆ. ಇದರಿಂದ ಕೆರಳಿರುವ ಭಾರತದ ನಿವೃತ್ತ ಜಡ್ಜ್, ನಿವೃತ್ತ ಸರ್ಕಾರಿ ಅಧಿಕಾರಿಗಳು, ನಿವೃತ್ತ ರಾಯಭಾರಿಗಳು ಹಾಗೂ ನಿವೃತ್ತ ಸೇನಾಧಿಕಾರಿಗಳು ಸೇರಿದಂತೆ 302 ಮಂದಿ ಬಿಬಿಸಿ ವಿರುದ್ದ ಪತ್ರ ಬರೆದಿದ್ದಾರೆ. ಖುದ್ದು ಸಹಿ ಹಾಕಿ ಈ ಪತ್ರ ಬರೆಯಲಾಗಿದೆ.

ಬಿಬಿಸಿ ವಾಸ್ತವತೆಯನ್ನು ತೋರಿಸಿಲ್ಲ. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀರ್ಪು ಇದೆ. ಆದರೆ ಮೋದಿ ವಿರೋಧಿಗಳ ಹೇಳಿಕೆಯನ್ನೇ ಸಾಕ್ಷ್ಯವಾಗಿ ಪರಿಗಣಿಸಿ ಈ ಸಾಕ್ಷ್ಯ ಚಿತ್ರ ತಯಾರಿಸಲಾಗಿದೆ. ಬ್ರಿಟಿಷರ ಒಡೆದು ಒಳುವ ನೀತಿಯನ್ನು ಈ ಹಿಂದೆ ಭಾರತದಲ್ಲಿ ಮಾಡಲಾಗಿತ್ತು. ಇದೀಗ ಬಿಬಿಸಿ ಮೂಲಕ ಬ್ರಿಟಿಷರು ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

 

ಬ್ರಿಟನ್‌ ಸಂಸತ್ತಲ್ಲಿ ಪ್ರಧಾನಿ ಮೋದಿ ಸಮರ್ಥಿಸಿದ ಪ್ರಧಾನಿ ರಿಷಿ ಸುನಕ್‌

ಭಾರತದ 13 ನಿವೃತ್ತ ನ್ಯಾಯಧೀಶರು, 133 ನಿವೃತ್ತ ಸರ್ಕಾರಿ ಉನ್ನತ ಅಧಿಕಾರಿಗಳು, 33 ನಿವೃತ್ತ ರಾಯಭಾರಿಗಳು ಹಾಗೂ 156 ನಿವತ್ತ ಸೇನಾಧಿಕಾರಿಗಳು ಸಹಿ ಹಾಕಿ ಈ ಪತ್ರ ಬರೆದಿದ್ದಾರೆ.  ಬಿಬಿಸಿಯ ದಿ ಮೋದಿ ಕ್ವೆಶ್ಚನ್ ಸಾಕ್ಷ್ಯಚಿತ್ರ ಆಧಾರರಹಿತವಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. 

ಮೂಲಭೂತ ಅಂಶವನ್ನು ಬದಿಗಿಟ್ಟು, ಆರೋಪಗಳ ಆಧಾರದಲ್ಲಿ ಸಾಕ್ಷ್ಯಚಿತ್ರ ನಿರ್ಮಾಣ ಮಾಡಲಾಗಿದೆ. ಕೂಡಲೇ ಈ ಸಾಕ್ಷ್ಯ ಚಿತ್ರವನ್ನು ನಿಲ್ಲಿಸಬೇಕು. ಭಾರತದ ಸರ್ವೋಚ್ಚ ನ್ಯಾಯಾಲದ ತೀರ್ಪನ್ನು ಉಲ್ಲಂಘಿಸಿ ಈ ಸಾಕ್ಷ್ಯಚಿತ್ರ ನಿರ್ಮಾಣ ಮಾಡಲಾಗಿದೆ ಎಂದಿದ್ದಾರೆ. ಗುಜರಾತ್ ಗಲಭೆ ಹಾಗೂ ಮೋದಿ ಮೇಲಿದ್ದ ಆರೋಪದ ಕುರಿತು ಸುಪ್ರೀಂ ಕೋರ್ಟ್ 452 ಪುಟಗಳ ತೀರ್ಪು ನೀಡಿದೆ. ಈ ಎಲ್ಲಾ ವಿಚಾರಗಳನ್ನು ಉಲ್ಲೇಖಿಸಿ ಬಿಬಿಸಿಗೆ ಪತ್ರ ಬರೆಯಲಾಗಿದೆ.

'ಚರ್ಚಿಲ್‌ ಬಗ್ಗೆಯೂ ಸಿರೀಸ್‌ ಮಾಡಿ..'ಪಿಎಂ ಮೋದಿ ಕುರಿತಾಗಿ ಬಿಬಿಸಿ ಸರಣಿಗೆ ಟ್ವಿಟರ್‌ನಲ್ಲಿ ಟೀಕೆ!

ಭಾರತದ ತೀವ್ರ ವಿರೋಧದ ನಡುವೆಯೂ ಬಿಬಿಸಿ ಮೋದಿ ವಿರುದ್ಧ ಪ್ರಸಾರ ಮಾಡಿರುವ ಸಾಕ್ಷ್ಯಚಿತ್ರವನ್ನು ಸಮರ್ಥಿಸಿಕೊಂಡಿದೆ.ವಿಶ್ವದೆಲ್ಲೆಡೆಯ ಪ್ರಮುಖ ವಿಷಯಗಳ ಕುರಿತು ಬೆಳಕು ಚೆಲ್ಲಲು ನಾವು ಬದ್ಧರಾಗಿದ್ದೇವೆ. ಈ ಸಾಕ್ಷ್ಯಚಿತ್ರವು ಭಾರತದ ಹಿಂದೂ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತ ಮುಸ್ಲಿಮರು ನಡುವಿನ ಉದ್ವಿಗ್ನ ಪರಿಸ್ಥಿತಿ, ಈ ಉದ್ವಿಗ್ನ ಪರಿಸ್ಥಿತಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಂಬಂಧವನ್ನು ತೋರಿಸುವ ಯತ್ನವಾಗಿದೆ. ಇದನ್ನು ತಯಾರಿಸುವ ವೇಳೆ ಗರಿಷ್ಠ ಮಟ್ಟದ ಸಂಪಾದಕೀಯ ಗುಣಮಟ್ಟಕಾಪಾಡಿಕೊಂಡು, ಕೂಲಂಕಷ ಅಧ್ಯಯನ ನಡೆಸಲಾಗಿದೆ. ಈ ಸಾಕ್ಷ್ಯಚಿತ್ರ ತಯಾರಿಸಲು ನಾವು ಸಾಕಷ್ಟುಜನರು, ಸಾಕ್ಷಿಗಳು ಮತ್ತು ತಜ್ಞರನ್ನು ಸಂದರ್ಶಿಸಿದ್ದೇವೆ ಮತ್ತು ಸಾಕಷ್ಟುಭಿನ್ನ ಅಭಿಪ್ರಾಯಗಳನ್ನು ತೋರಿಸಿದ್ದೇವೆ. ಅದರಲ್ಲಿ ಬಿಜೆಪಿಯಲ್ಲಿದ್ದವರ ಪ್ರತಿಕ್ರಿಯೆಯೂ ಇದೆ. ಭಾರತ ಸರ್ಕಾರಕ್ಕೂ ತನ್ನ ಅಭಿಪ್ರಾಯ ಸಲ್ಲಿಕೆಯ ಅವಕಾಶ ನೀಡಲಾಗಿತ್ತಾದರೂ ಅವರು ಅದನ್ನು ತಿರಸ್ಕರಿಸಿದರು’ ಎಂದು ಬಿಬಿಸಿ ಸ್ಪಷ್ಟನೆ ನೀಡಿದೆ.

click me!