ಕರ್ನಲ್‌ ಸಂತೋಷ್‌ ಕುಟುಂಬಕ್ಕೆ 5 ಕೋಟಿ : ತೆಲಂಗಾಣ ಘೋಷಣೆ

By Suvarna NewsFirst Published Jun 20, 2020, 10:24 AM IST
Highlights

ಕರ್ನಲ್‌ ಸಂತೋಷ್‌ ಕುಟುಂಬಕ್ಕೆ 5 ಕೋಟಿ : ತೆಲಂಗಾಣ ಘೋಷಣೆ| ಪೂರ್ವ ಲಡಾಖ್‌ನಲ್ಲಿ ನಡೆದ ಚೀನಾ-ಭಾರತ ಗಡಿ ಸಂಘರ್ಷದಲ್ಲಿ ಹುತಾತ್ಮ

ಹೈದರಾಬಾದ್(ಜೂ.20): ಪೂರ್ವ ಲಡಾಖ್‌ನಲ್ಲಿ ನಡೆದ ಚೀನಾ-ಭಾರತ ಗಡಿ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್‌ ಸಂತೋಷ್‌ ಬಾಬು ಕುಟುಂಬಕ್ಕೆ 5 ಕೋಟಿ ರು. ಮತ್ತು ಉಳಿದ 19 ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರು. ಪರಿಹಾರ ಧನವನ್ನು ನೀಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶುಕ್ರವಾರ ಘೋಷಿಸಿದ್ದಾರೆ.

ಇಂಡೋ-ಚೀನಾ ಸಂಘರ್ಷದಲ್ಲಿ ಮಡಿದ ಮಗನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ತಾಯಿಗೆ ಸುಧಾಕರ್ ನಮನ

ಅಲ್ಲದೆ ಸಂತೋಷ್‌ ಬಾಬು ಅವರ ಪತ್ನಿಗೆ ಗ್ರೂಪ್‌-1 ಶ್ರೇಣಿಯಲ್ಲಿ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ.

ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗಡಿ ವಿವಾದ ಕುರಿತ ಸರ್ವ ಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ ರಾವ್‌, ಕೇಂದ್ರ ಮತ್ತು ಇತರ ರಾಜ್ಯಗಳೂ ಹುತಾತ್ಮ ಯೋಧರ ಕುಟುಂಬದ ಜೊತೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.

click me!