ಭಾರೀ ವೆಚ್ಚದಲ್ಲಿ ಕೇದಾರನಾಥ, ಹೇಮಕುಂಡ ಸಾಹೀಬ್‌ ರೋಪ್‌ವೇ ಪ್ರಾಜೆಕ್ಟ್‌ಗೆ ಒಪ್ಪಿಗೆ ನೀಡಿದ ಕೇಂದ್ರ!

Published : Mar 05, 2025, 03:40 PM ISTUpdated : Mar 05, 2025, 03:42 PM IST
ಭಾರೀ ವೆಚ್ಚದಲ್ಲಿ ಕೇದಾರನಾಥ, ಹೇಮಕುಂಡ ಸಾಹೀಬ್‌ ರೋಪ್‌ವೇ ಪ್ರಾಜೆಕ್ಟ್‌ಗೆ ಒಪ್ಪಿಗೆ ನೀಡಿದ ಕೇಂದ್ರ!

ಸಾರಾಂಶ

ಕೇಂದ್ರ ಸಚಿವ ಸಂಪುಟವು 4,081 ಕೋಟಿ ರೂಪಾಯಿ ವೆಚ್ಚದಲ್ಲಿ ಕೇದಾರನಾಥ ರೋಪ್‌ವೇ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯು ಸೋನ್‌ಪ್ರಯಾಗದಿಂದ ಕೇದಾರನಾಥಕ್ಕೆ 12.9 ಕಿಮೀ ಉದ್ದವಿರಲಿದ್ದು, ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ನವದೆಹಲಿ (ಮಾ.5): ಕೇಂದ್ರ ಸಚಿವ ಸಂಪುಟವು ಬುಧವಾರ ಬಹುನಿರೀಕ್ಷಿತ ಕೇದಾರನಾಥ ರೋಪ್‌ವೇ ಯೋಜನೆಗೆ ಬರೋಬ್ಬರಿ 4,081 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಮೋದನೆ ನೀಡಿದೆ. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸೋನ್‌ಪ್ರಯಾಗದಿಂದ ಕೇದಾರನಾಥಕ್ಕೆ (12.9 ಕಿಮೀ) 12.9 ಕಿಮೀ ರೋಪ್‌ವೇ ಯೋಜನೆಯ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಈ ಯೋಜನೆಯನ್ನು ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ (DBFOT) ಕ್ರಮದಲ್ಲಿ ಅಭಿವೃದ್ಧಿಪಡಿಸಲಾಗುವುದು. ದೂರದ ಗುಡ್ಡಗಾಡು ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ "ಪರ್ವತಮಾಲಾ ಪರಿಯೋಜನಾ" ಕಾರ್ಯಕ್ರಮದ ಅಡಿಯಲ್ಲಿ ಈ ಯೋಜನೆಯನ್ನು ಮೊದಲು ಅಕ್ಟೋಬರ್ 2022 ರಲ್ಲಿ ಘೋಷಣೆ ಮಾಡಲಾಗಿತ್ತು.

ಪಿಐಬಿಯ ಅಧಿಕೃತ ಪ್ರಕಟಣೆಯ ಪ್ರಕಾರ, ಈ ರೋಪ್‌ವೇ ಅನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಮತ್ತು ಇದು ಅತ್ಯಂತ ಮುಂದುವರಿದ ಟ್ರೈ-ಕೇಬಲ್ ಡಿಟ್ಯಾಚೇಬಲ್ ಗೊಂಡೊಲಾ (3S) ತಂತ್ರಜ್ಞಾನವನ್ನು ಆಧರಿಸಿದೆ ಮತ್ತು ದಿನಕ್ಕೆ 18,000 ಪ್ರಯಾಣಿಕರನ್ನು ಹೊತ್ತೊಯ್ಯುವ ಪ್ರತಿ ಗಂಟೆಗೆ 1,800 ಪ್ರಯಾಣಿಕರ (PPHPD) ವಿನ್ಯಾಸ ಸಾಮರ್ಥ್ಯವನ್ನು ಹೊಂದಿದೆ.

ನಂದಿಬೆಟ್ಟ ರೋಪ್ ವೇ ಯೋಜನೆಗೆ 2 ಎಕರೆ ಭೂಮಿ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ

ಇದರೊಂದಿಗೆ ಹೇಮಕುಂಡ್ ಸಾಹಿಬ್ ರೋಪ್‌ವೇ ಯೋಜನೆಗೂ ಸಂಪುಟ ಅನುಮೋದನೆ ನೀಡಿತು, ಇದು 12.4 ಕಿ.ಮೀ ಉದ್ದವಿದ್ದು, 2,730 ಕೋಟಿ ರೂ. ಮೌಲ್ಯದ್ದಾಗಿದೆ. ಕೇದಾರನಾಥವು ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿ 3,583 ಮೀ (11968 ಅಡಿ) ಎತ್ತರದಲ್ಲಿರುವ 12 ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಈ ದೇವಾಲಯವು ಅಕ್ಷಯ ತೃತೀಯ (ಏಪ್ರಿಲ್-ಮೇ) ದಿಂದ ದೀಪಾವಳಿ (ಅಕ್ಟೋಬರ್-ನವೆಂಬರ್) ವರೆಗೆ ವರ್ಷದಲ್ಲಿ ಸುಮಾರು 6 ರಿಂದ 7 ತಿಂಗಳುಗಳ ಕಾಲ ಯಾತ್ರಾರ್ಥಿಗಳಿಗೆ ತೆರೆದಿರುತ್ತದೆ ಮತ್ತು ಋತುವಿನಲ್ಲಿ ವಾರ್ಷಿಕವಾಗಿ ಸುಮಾರು 20 ಲಕ್ಷ ಯಾತ್ರಿಕರು ಭೇಟಿ ನೀಡುತ್ತಾರೆ

ನಂದಿ ಬೆಟ್ಟ ರೋಪ್‌ವೇಗೆ ಭೂಮಿ ಹಸ್ತಾಂತರ ವಿಳಂಬ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

8ನೇ ಕ್ಲಾಸ್ ಹುಡುಗಿ ಮೇಲೆ ಬಲತ್ಕಾರ, ಬೆದರಿಸಿ ಚಿನ್ನ ದೋಚಿದ್ದ 10ನೇ ಕ್ಲಾಸ್ ಹುಡುಗ ಅರೆಸ್ಟ್
ಬಿಜೆಪಿ ನಾಯಕನ ಸಂಬಂಧಿ 17ರ ಯುವಕನಿಗೆ ಚೂರಿ ಇರಿದು ಕೊಂದ ದುಷ್ಕರ್ಮಿಗಳು!