ನಮ್ಮಜ್ಜಿ ಅಕೌಂಟ್‌ನಲ್ಲಿ ₹80 ಲಕ್ಷ ಇದೆ ಎಂದಿದ್ದಷ್ಟೇ..! ಅಜ್ಜಿ ಹಣ, ಬಾಲಕಿ ಮಾನ ಎರಡೂ ಹೋಯ್ತು!

Published : Mar 05, 2025, 03:16 PM ISTUpdated : Mar 05, 2025, 03:26 PM IST
ನಮ್ಮಜ್ಜಿ ಅಕೌಂಟ್‌ನಲ್ಲಿ ₹80 ಲಕ್ಷ ಇದೆ ಎಂದಿದ್ದಷ್ಟೇ..! ಅಜ್ಜಿ ಹಣ, ಬಾಲಕಿ ಮಾನ ಎರಡೂ ಹೋಯ್ತು!

ಸಾರಾಂಶ

9ನೇ ತರಗತಿ ವಿದ್ಯಾರ್ಥಿನಿ ನಮ್ಮ ಅಜ್ಜಿ ಅಕೌಂಟ್‌ನಲ್ಲಿ 80 ಲಕ್ಷ ರೂ. ಹಣವಿದೆ ಎಂದು ಸ್ನೇಹಿತರಿಗೆ ಹೇಳಿಕೊಂಡಿದ್ದಾಳೆ. ಇಷ್ಟೇ ಆಕೆಯ ಕಥೆ ಮತ್ತು ಅವರ ಅಜ್ಜಿಯ ಬ್ಯಾಂಕ್‌ ಖಾತೆಯಲ್ಲಿದ್ದ ಹಣದ ಕಥೆ ಮುಗಿದೇ ಹೋಯ್ತು..! 

ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ತನ್ನ ಅಜ್ಜಿಯ ಬ್ಯಾಂಕ್ ಅಕೌಂಟ್‌ನಲ್ಲಿ 80 ಲಕ್ಷ ರೂ. ಹಣವಿದೆ. ನನಗೆ ಅಜ್ಜಿಯ ಬ್ಯಾಂಕ್‌ ಖಾತೆಯಲ್ಲಿರುವ ಹಣ ತೆಗೆಯಲು ಮತ್ತು ಹಾಕಲು ಬರುತ್ತದೆ ಎಂದು ಹೇಳಿಕೊಂಡಿದ್ದಾಳೆ. ಇಷ್ಟಕ್ಕೆ ಆ..., ಅಜ್ಜಿಯ ಹಣ ಹಾಗೂ 9ನೇ ತರಗತಿ ವಿದ್ಯಾರ್ಥಿನಿಯ ಮಾನ ಎರಡೂ ಹೋಗಿದೆ. ಇಲ್ಲಿದೆ ನೋಡಿ ಪೂರ್ಣ ಕಥೆ..

ಅಜ್ಜಿಯೊಬ್ಬರು ತನ್ನ ಬ್ಯಾಂಕ್ ಅಕೌಂಟಿನಿಂದ 80 ಲಕ್ಷ ರೂ. ಹಣ ಹೋಗಿದೆ ಎಂದು ದೂರು ಕೊಟ್ಟಿದ್ದಾರೆ. ಗುರುಗ್ರಾಮದ ಸೆಕ್ಟರ್ 10 ಪೊಲೀಸ್ ಅಧಿಕಾರಿಗಳು ಸಿನಿಮಾ ಕಥೆನೂ ಮೀರಿಸೋ ಥರ ಶಾಕ್ ಆಗಿದ್ದಾರೆ. 9ನೇ ತರಗತಿಯಲ್ಲಿ ಓದುತ್ತಿರುವ 15 ವರ್ಷದ ಹುಡುಗಿಯನ್ನು ಹೆದರಿಸಿ, ಅವಳ ನಗ್ನ ಫೋಟೋಗಳನ್ನ ಮಾರ್ಫ್ ಮಾಡಿ ತೋರಿಸಿ ಬೆದರಿಕೆ ಹಾಕಿ 80 ಲಕ್ಷ ರೂಪಾಯಿ ದೋಚಿರುವ ಘಟನೆ ನಡೆದಿದೆ. ಸಂತ್ರಸ್ತ ಬಾಲಕಿಯ ಅಜ್ಜಿಯ ಬ್ಯಾಂಕ್ ಅಕೌಂಟ್‌ನಿಂದ 80 ಲಕ್ಷ ರೂ. ಹಣ ದೋಚುವುದಕ್ಕೆ ಕಳ್ಳರ ಗ್ಯಾಂಗ್ ದೊಡ್ಡ ಪ್ಲಾನ್ ಮಾಡಿತ್ತು. ಇದೀಗ 6 ಜನ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದೀಗ ಕಳ್ಳರ ಗ್ಯಾಂಗ್‌ನಿಂದ ಪೊಲೀಸರು 36 ಲಕ್ಷ ರೂಪಾಯಿ ವಾಪಸ್ಸು ತಗೊಂಡಿದ್ದಾರೆ.

9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯ ಅಜ್ಜಿಗೆ ಒಂದು ಜಾಗ ಮಾರಾಟ ಮಾಡಿದ್ದಕ್ಕೆ ತುಂಬಾ ದುಡ್ಡು ಬಂದಿತ್ತು. ಆ ದುಡ್ಡು ಬ್ಯಾಂಕ್ ಅಕೌಂಟಿಗೆ ಬಂದಿತ್ತು. ಅಜ್ಜಿ ಅಕೌಂಟಿಂದ ದುಡ್ಡು ಟ್ರಾನ್ಸ್‌ಫರ್ ಮಾಡೋಕೆ ಏನೇನು ಬೇಕೋ ಅದು ಆ ಹುಡುಗಿಗೆ ಗೊತ್ತಿತ್ತು. ಆಮೇಲೆ ಒಂದಿನ ಶಾಲೇಲಿ ಮಾತನಾಡುತ್ತಿರುವಾಗ ಈ ಹುಡುಗಿ ತನ್ನ ಅಜ್ಜಿ ಅಕೌಂಟಲ್ಲಿ ತುಂಬಾ ದುಡ್ಡಿದೆ, ಅದನ್ನ ತೆಗಿಯೋಕೆ ನನಗೂ ಬರುತ್ತದೆ ಎಂದು ಹೇಳಿಕೊಂಡಿದ್ದಳು. ಈ ವಿಷಯನ ಅವಳು ತನ್ನ ಫ್ರೆಂಡ್ ಹತ್ತಿರ ಹೇಳಿಕೊಂಡಿದ್ದಳು. ಇದು ಶಾಲೇಲಿ 10ನೇ ತರಗತಿಯಲ್ಲಿ ಓದುವ ಹುಡುಗನ ಕಿವಿಗೆ ಬಿದ್ದಿತ್ತು. ಆ ಹುಡುಗ ಮನೆಗೆ ಹೋಗಿ ತನ್ನ ಅಣ್ಣಬ ಬಳಿ ಹೇಳಿಕೊಂಡಿದ್ದಾನೆ. ಆಮೇಲೆ ಮುಂದಾಗಿದ್ದು, ಅಜ್ಜಿಯ ಅಕೌಂಟ್‌ನಲ್ಲಿದ್ದ ಎಲ್ಲ ಹಣ ಲಪಟಾಯಿಸೋ ಪ್ಲಾನ್..

ಇದನ್ನೂ ಓದಿ: ಪೊಲೀಸರ ಜಲಫಿರಂಗಿಗೆ ಪ್ರತಿಯಾಗಿ ಪ್ರತಿಭಟನಾಕಾರರು ಬಳಸಿದ್ದೇನು? ಶಾಕಿಂಗ್ ವೀಡಿಯೋ ವೈರಲ್

10ನೇ ತರಗತಿ ಹುಡುಗನ ಅಣ್ಣ ತನ್ನ ಪ್ರೆಂಡ್‌ಗೆ ಈ ವಿಚಾರವನ್ನು ಹೇಳಿದ್ದಾನೆ. ಆಗ 20 ವರ್ಷದ ಸುಮಿತ್ ಕಠಾರಿಯಾ ಎನ್ನುವ ಯುವಕ ಆನ್‌ಲೈನ್‌ನಲ್ಲಿ ಆ ಹುಡುಗಿ ಜೊತೆ ಫ್ರೆಂಡ್‌ಶಿಪ್ ಮಾಡಿದ್ದಾನೆ. ಆಮೇಲೆ ಆ ಹುಡುಗಿಯ ನಗ್ನ ಫೋಟೋಗಳನ್ನ ಮಾರ್ಫ್ ಮಾಡಿ ಅದನ್ನ ತೋರಿಸಿ ಬೆದರಿಸೋಕೆ ಶುರುಮಾಡಿದ್ದಾನೆ. ಅವನು ಹೇಳಿದಂತೆ ಕೇಳಲಿಲ್ಲವೆಂದರೆ ಆನ್‌ಲೈನ್‌ನಲ್ಲಿ ಫೋಟೋಗಳನ್ನ ಹರಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ನಿಮ್ಮ ಅಜ್ಜಿಯ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕಳುಹಿಸುವಂತೆ ಬೆದರಿಕೆ ಹಾಕಿದ್ದಾನೆ.

ಇದಾದ ನಂತರ ತನ್ನ ಮಾನ ಮರ್ಯಾದೆ ಹಾಳಾಗುತ್ತದೆ ಎಂದು 9ನೇ ತರಗತಿ ಬಾಲಕಿ ಸುಮಿತ್ ಮತ್ತು ಅವನ ಫ್ರೆಂಡ್ಸ್ ಕೊಟ್ಟಿರೋ ಅಕೌಂಟ್‌ಗಳಿಗೆ ಆ ಹುಡುಗಿ ತುಂಬಾ ಸಲ 80 ಲಕ್ಷ ರೂಪಾಯಿ ಹಣವನ್ನೂ ವರ್ಗಾವಣೆ ಮಾಡಿದ್ದಾಳೆ. ಇದಾದ ನಂತರ ಅಜ್ಜಿಯ ಎಲ್ಲ ಹಣವೂ ಬ್ಯಾಂಕ್ ಅಕೌಂಟ್‌ನಲ್ಲಿ ಖಾಲಿ ಆಗಿದೆ. ಇದಾದ ನಂತರವೂ ಆ ಬಾಲಕಿಗೆ ದುಡ್ಡು ಬೇಕು ಎಂದು ಮತ್ತೆ ಮತ್ತೆ ಕರೆ ಮಾಡಿ ತೊಂದರೆ ಕೊಟ್ಟಿದ್ದಾರೆ. ಆಗ ಹುಡುಗಿ ಹತ್ತಿರ ಹಾಗೂ ಅವರ ಅಜ್ಜಿ ಖಾತೆಯಲ್ಲಿಯೂ ಹಣವಿರಲಿಲ್ಲ. 

ಇದನ್ನೂ ಓದಿ: ಮದುವೆಯಾದ 3 ದಿನಕ್ಕೆ ಹಾರ್ಟ್ ಅಟ್ಯಾಕ್‌ಗೆ ಬಲಿಯಾದ ಟೆಕ್ಕಿ; ಮಂಡ್ಯದ ಗಂಡು ಶಶಾಂಕ್ ಇನ್ನಿಲ್ಲ!

ಒಂದಿನ ಕೋಚಿಂಗ್ ಕ್ಲಾಸಿಗೆ ಹೋದಾಗ ಅವರಲ್ಲಿ ಒಬ್ಬ ಬಂದು ಹಣ ಕೊಡ್ತೀಯೋ ಇಲ್ಲ ಎಂದು ಬೆದರಿಸಿದ್ದಾನೆ. ಇದರಿಂದ ಬಾಲಕಿ ತರಗತಿ ಕೋಣೆಯಲ್ಲಿ ತುಂಬಾ ಬೇಸರದಿಂದ ಅಳುತ್ತಾ ಕುಳಿತಿರುವುದನ್ನು ಒಬ್ಬ ಶಿಕ್ಷಕಿ ನೋಡಿ, ಏಕೆ ಎನಾಯ್ತು ಎಂದು ಬಂದು ಪ್ರೀತಿಯಿಂದ ಕೇಳಿದ್ದಾರೆ. ಆ ಹುಡುಗಿ ನಡೆದ ಎಲ್ಲ ವಿಚಾರವನ್ನು ಶಿಕ್ಷಕಿಯ ಬಳಿ ಹೇಳಿಕೊಂಡಿದ್ದಾಳೆ. ಕೂಡಲೇ ಟೀಚರ್ ತಡಮಾಡದೇ ಎಲ್ಲ ವಿಚಾರವನ್ನು ಬಾಲಕಿಯ ಮನೆಯಲ್ಲಿ ಹೋಗಿ ಹೇಳಿದ್ದಾರೆ. ಆಮೇಲೆ ಅಜ್ಜಿ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ. ಈ ಪ್ರಕರಣದ ಬೆನ್ನುಬಿದ್ದ ಪೊಲೀಸರು ಸುಮಿತ್ ಕಠಾರಿಯಾ ಸೇರಿ 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ 36 ಲಕ್ಷ ರೂ. ವಸೂಲಿ ಮಾಡಿದ್ದು, ಉಳಿದ ಹಣವನ್ನು ವಾಪಸ್ ಕೊಡಿಸುವ ಪ್ರಯತ್ನ ಮುಂದುವರೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!
ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ