ಡೆಲಿವರಿ ಬಾಯ್ ಅಡ್ಡಹಾಕಿದ ಕಳ್ಳರು, ಆತನಿಂದ ಮೊಬೈಲ್ ಫೋನ್, ಹಣ ಸೇರಿದಂತೆ ಇತರ ವಸ್ತುಗಳನ್ನು ಕಸಿದುಕೊಂಡಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ಡೆಲಿವರಿ ಕಳ್ಳರ ವಸ್ತುಗಳನ್ನು ದೋಚುತ್ತಿದ್ದಂತೆ ಕಣ್ಣೀರಿಟ್ಟಿದ್ದಾನೆ. ಅಚ್ಚರಿ ಎಂಬತೆ ಈತನ ಕಣ್ಣೀರಿಗೆ ಕಟುಕರ ಮನಸ್ಸು ಕರಗಿದೆ.
ಅಡ್ಡಗಟ್ಟಿ ಕೈಯಲ್ಲಿದ್ದ ಹಣ, ಪರ್ಸ್, ಮೊಬೈಲ್, ಚೈನ್ ಸೇರಿದಂತೆ ಅಮೂಲ್ಯ ವಸ್ತುಗಳನ್ನು ದೋಚುತ್ತಿರುವ ಘಟನೆಗಳು ಪದೇ ಪದೇ ವರದಿಯಾಗುತ್ತಿದೆ. ಹೀಗೆ ಸುಲಿಗೆ ದೋಚಲು ಬಂದ ಕಳ್ಳರು ವಿರಳ ಸಂದರ್ಭಗಳಲ್ಲಿ ಮಾನವೀಯತೆ ಮರೆದ ಘಟನೆಗಳೂ ಇವೆ. ಜೊತೆಗೆ ಸಿಕ್ಕಿ ಬಿದ್ದು ಧರ್ಮದ ಏಟು ತಿಂದ ಊದಾಹರಣೆಗಳು ಹಲುವಿದೆ. ಒಂದು ಹೊತ್ತಿನ ಊಟಕ್ಕಾಗಿ ಶ್ರಮವಹಿಸಿ ದುಡಿಯುತ್ತಿರುವ ಡೆಲಿವರಿ ಬಾಯ್ ದೋಚಿದ ಕಳ್ಳರ ಮನಸ್ಸು ಕರಗಿದೆ. ಡೆಲಿವರಿ ಬಾಯ್ ಕಣ್ಣೀರಿಗೆ ಕಳ್ಳರ ನಿರ್ಧಾರ ಬದಲಾಗಿದೆ. ಆತನಿಂದ ದೋಚಿದ ವಸ್ತುಗಳನ್ನು ಹಿಂತಿರುಗಿಸಿ ಸ್ಥಳದಿಂದ ಎಸ್ಕೇಪ್ ಆದ ವಿಡಿಯೋ ವೈರಲ್ ಆಗಿದೆ.
ಬೈಕ್ ಮೂಲಕ ಡೆಲಿವರಿಗೆ ತೆರಳಿದ ಯುವಕ, ಮನೆಯೊಂದರ ಬಳಿ ಬೈಕ್ ನಿಲ್ಲಿಸಿದ್ದಾನೆ. ಬಳಿಕ ಡೆಲಿವರಿ ನೀಡಿದ್ದಾನೆ. ಬಳಿಕ ಬೈಕ್‌ನತ್ತ ಹಿಂತಿರುಗುತ್ತಿದ್ದಂತೆ ವೇಗವಾಗಿ ಇಬ್ಬರು ಕಳ್ಳರು ಬೈಕ್ ಮೂಲಕ ಆಗಮಿಸಿದ್ದಾರೆ. ಈತನ ಬಳಿ ಬಂದ ಬೈಕ್ ನಿಲ್ಲಿಸಿ ಒಬ್ಬ ಬೈಕ್‌ನಿಂದ ಇಳಿದು ಬೆದರಿಸಿದ್ದಾನೆ.
Viral Video ಸಿರಪ್ ಬಾಟಲಿ ನುಂಗಿ ಒದ್ದಾಡುತ್ತಿದ್ದ ನಾಗರ ಹಾವು ರಕ್ಷಿಸಿದ ಉರಗ ಪ್ರೇಮಿ!
ಕಳ್ಳನ ಬೆದರಿಕೆಯಿಂದ ಕೈಯಲ್ಲಿದ್ದ ಡೆಲಿವರಿ ವಸ್ತುಗಳು ಪ್ಯಾಕನ್ನು ಕಳ್ಳರಿಗೆ ನೀಡಿದ್ದಾನೆ. ಈತನ ಜೇಬಿನಿಂದ ಮೊಬೈಲ್ ಕಿತ್ತುಕೊಂಡಿದ್ದಾರೆ. ಪರ್ಸ್ ತೆಗೆದಿದ್ದಾರೆ. ಜೇಬಿನಲ್ಲಟ್ಟಿದ್ದ ಹಣವನ್ನೂ ಕಸಿದಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಕೆಲಸ ಮಾಡಬೇಕಾದ ಅನಿವಾರ್ಯತೆಯಲ್ಲಿರುವ ಡೆಲಿವರಿ ಬಾಯ್ ತನಗೆ ಆಗಿರುವ ನಷ್ಟ, ಕೆಲಸ, ಭವಿಷ್ಯ, ಮನೆಯ ಜವಾಬ್ದಾರಿ ಎಲ್ಲವನ್ನು ಒಂದು ಕ್ಷಣ ನೆನೆದು ಕಳ್ಳರ ಮುಂದೆ ಕಣ್ಣೀರಿಟ್ಟಿದ್ದಾನೆ.
Two robbers returned valuables to a delivery boy after he broke into tears🫡
pic.twitter.com/Hyh4Lvxjrg
ಕಳ್ಳರು ಒಂದೊಂದೆ ವಸ್ತುಗಳನ್ನು ದೋಚುತ್ತಿದ್ದಂತೆ ಈತನ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಅಷ್ಟೊತ್ತಿಗೆ ಕಳ್ಳರ ಮನಸ್ಸು ಕರಗಿದೆ. ಡೆಲಿವರಿ ಬಾಯ್‌ನಿಂದ ಪಡೆದ ವಸ್ತುಗಳನ್ನು ಹಿಂತಿರುಗಿಸಿದ್ದಾರೆ. ಅಳುತ್ತಿದ್ದ ಡೆಲಿವರಿ ಬಾಯ್ ಸಮಾಧಾನ ಪಡಿಸಿದ್ದಾರೆ. ಬಳಿಕ ಆತನ ತಬ್ಬಿ ಧೈರ್ಯ ತುಂಬಿದ್ದಾರೆ. ಹಸ್ತಲಾಘವ ಮಾಡಿದ ಕಳ್ಳರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇತ್ತ ಕಣ್ಣೀರು ಒರೆಸಿಕೊಂಡ ಡೆಲಿವರಿ ಬಾಯ್ ಮುಂದಿನ ಡೆಲಿವರಿ ನೀಡಲು ಹೊರಟಿದ್ದಾನೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಅನ್ನೋ ಕುರಿತು ಯಾವುದೇ ಮಾಹಿತಿ ಇಲ್ಲ.
ಮಳೆಯಲಿ ಜೊತೆಯಲಿ ಕದ್ದು ಮುಚ್ಚಿ ಮಹಡಿ ಮೇಲೆ ಕಿಸ್ಸಿಂಗ್, ರೋಮ್ಯಾನ್ಸ್ ವಿಡಿಯೋ ವೈರಲ್!
ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಕಳ್ಳರಿಗೆ ರಾಜಕೀಯ ನಾಯಕರಿಗಿಂತ ಉತ್ತಮ ಹೃದಯ ಹಾಗೂ ಮನಸ್ಸಿದೆ ಎಂದಿದ್ದಾರೆ. ಮತ್ತೆ ಕೆಲವರು ಇದು ವೈರಲ್ ಮಾಡಲು ಮಾಡಿರುವ ವಿಡಿಯೋ ಇದರಲ್ಲಿ ಅಸಲಿಯತ್ತು ಕಾಣಿಸುತ್ತಿಲ್ಲ ಎಂದಿದ್ದಾರೆ. ಇದು ಪಾಕಿಸ್ತಾನದ ಘಟನೆ ಎಂದು ಕೆಲವರು ಕಮೆಂಟ್ ಮಾಡಿದ್ದರೆ, ಪಾಕಿಸ್ತಾನದಲ್ಲಿ ದೋಚುವುದು ಸಾಮಾನ್ಯ, ಹಿಂತಿರುಗಿಸಿರುವುದು ಇದೇ ಮೊದಲು ಎಂದಿದ್ದಾರೆ.