ಭಾರತೀಯ ಸೇನೆಯಿಂದ ವಿಜಯವಾಡ ಪ್ರವಾಹ ಪೀಡಿತ ಜನರ ರಕ್ಷಣೆ!

By Suvarna News  |  First Published Sep 11, 2024, 8:42 PM IST

ವಯನಾಡ್ ವಿಪತ್ತು ನಿರ್ವಹಣೆಯಲ್ಲಿ ದೇಶದ ಜನರಿಂದ ಪ್ರಶಂಸೆ ಗಳಿಸಿದ ನಂತರ ಭಾರತೀಯ ಸೇನೆಯ ಸೈನಿಕರು ಮತ್ತು ಅಧಿಕಾರಿಗಳ ತಂಡ ಈಗ ವಿಜಯವಾಡದ ನೆರೆ ಪೀಡಿತ ಪ್ರದೇಶಗಳಲ್ಲಿ ನೆರೆ ಸಂತ್ರಸ್ತರ ರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ. 


ವಿಜಯವಾಡ (ಸೆ.11): ವಯನಾಡ್ ವಿಪತ್ತು ನಿರ್ವಹಣೆಯಲ್ಲಿ ದೇಶದ ಜನರಿಂದ ಪ್ರಶಂಸೆ ಗಳಿಸಿದ ನಂತರ ಭಾರತೀಯ ಸೇನೆಯ ಸೈನಿಕರು ಮತ್ತು ಅಧಿಕಾರಿಗಳ ತಂಡ ಈಗ ವಿಜಯವಾಡದ ನೆರೆ ಪೀಡಿತ ಪ್ರದೇಶಗಳಲ್ಲಿ ನೆರೆ ಸಂತ್ರಸ್ತರ ರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ. ವಿಜಯವಾಡ ಜಿಲ್ಲಾಧಿಕಾರಿಗಳ ಮನವಿಯ ಮೇರೆಗೆ 6 ಮದ್ರಾಸ್ ಬೆಟಾಲಿಯನ್‌ನ ಅಧಿಕಾರಿಗಳು, ಮೂವರು ಅಧಿಕಾರಿಗಳು ಮತ್ತು ಸೈನಿಕರನ್ನೊಳಗೊಂಡ 100 ಜನರ ತಂಡವೊಂದನ್ನು ಲೆಫ್ಟಿನೆಂಟ್ ಕರ್ನಲ್ ಅಮಿತ ಶರ್ಮ ಅವರ ನಾಯಕತ್ವದಲ್ಲಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರಕ್ಕೆಂದು ನಿಯೋಜಿಸಿದೆ. 

7ನೇ ತಾರೀಖಿನಂದು ವಾಯುಸೇನೆಯ A32 ವಿಮಾನದ ಮೂಲಕ ತಲುಪಿದ ರಕ್ಷಣಾ ತಂಡದಲ್ಲಿ ಮೇಜರ್ ಮೌರ್ಯ ವಂಶಿ ಒಬ್ಬ ವೈದ್ಯರಾಗಿದ್ದು, ಅವರ ಜೊತೆಯಲ್ಲಿ ತಂಡದ ಸದಸ್ಯರು ಸೇರಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಮೂರೂ ಕಿಲೋಮೀಟರ್‌ನಷ್ಟು ಒಳಗೆ ಹೋಗಿ ಅತ್ಯವಶ್ಯಕ ಔಷಧಿಗಳ ವಿತರಣೆಯನ್ನು ಯಶಸ್ವಿಯಾಗಿ ಜಿಲ್ಲಾಡಳಿತದ ಅಧಿಕಾರಿಗಳ ಸಹಕಾರದಿಂದ ಮಾಡಿದರು. ಎಸ್‌ ನಗರ, ವೈಎಸ್‌ಆರ್ ಕಾಲೋನಿ ಮತ್ತು ಜನಗಂ ಕಾಲೋನಿ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದರೂ ನಮ್ಮ ಸೈನಿಕರು ಕರ್ತವ್ಯ ನಿಭಾಯಿಸಿ ಜನರ ರಕ್ಷಣೆಗೆ ಮುಂದಾಗಿದ್ದಾರೆ. 

Tap to resize

Latest Videos

undefined

ಮಲೇರಿಯಾ ಮತ್ತು ಡೆಂಗ್ಯೂ ರೋಗಗಳ ತಡೆಗೆ ಔಷಧಿ ವ್ಯಸ್ಥೆಗೂ ಈ ತಂಡ ಶ್ರಮಿಸುತ್ತಿದೆ.  ಮೂರೂ ತಂಡಗಳ ರಚನೆ ಮಾಡಿಕೊಂಡು ಒಂದು ತಂಡ ಜನಗಂ ನಗರದಲ್ಲಿ ಹೆಚ್ಚು ಜನರಿಗೆ ಆರೋಗ್ಯ ತೊಂದರೆ ಇರುವುದರಿಂದ ಅಲ್ಲಿ ಜಿಲ್ಲಾಡಳಿತ ಜೊತೆ ಸೇರಿ ಕ್ಯಾಂಪ್ ನಡೆಸುತ್ತಿದೆ ಜೊತೆಗೆ ಎಸ್‌ ನಗರ ಮತ್ತು ವೈಎಸ್‌ಆರ್ ಕಾಲೋನಿಗಳಲ್ಲಿ ದೋಣಿಗಳ ಮೂಲಕವೇ ಔಷಧಿ ಮತ್ತು ಅರೋಗ್ಯ ಸೇವೆ ನೀಡಲಾಗುತ್ತಿದೆ. 

ರೇಷ್ಮೆ ಅಭಿವೃದ್ಧಿಗೆ ಬಸವರಾಜು ವರದಿ ಅನುಷ್ಠಾನಗೊಳಿಸಿ: ಸಚಿವ ಕೆ.ವೆಂಕಟೇಶ್

ಸೇನೆಯ ಅಭಿಯಂತ್ರಕರ ವಿಭಾಗದ ತಂಡವು ಜಿಲ್ಲಾಡಳಿತ ಜೊತೆಯಲ್ಲಿ ಬುಡಮೇರು ಕಾಲುವೆಯಿಂದ ಜಲಪ್ರವಾಹ ಉಂಟುಮಾಡುತ್ತಿರುವ ಜಾಗಗಳನ್ನು ಗುರುತಿಸಿ ನೀರಿನ ಹರಿವು ತಡೆಗಟ್ಟುವ ಕೆಲಸದಲ್ಲಿ ಕಾರ್ಯನಿರತವಾಗಿದೆ.  ಪ್ರವಾಹ , ಭೂಕಂಪ, ಚಂಡಮಾರುತದಂತಹ ಪ್ರಕೃತಿ ವಿಕೋಪಗಳಲ್ಲಿ ಭಾರತೀಯ ಸೇನೆಯು ಅನೇಕ ಜನರ ಪ್ರಾಣ ರಕ್ಷಣೆ ಮಾಡುವಲ್ಲಿ, ರಸ್ತೆ, ಸೇತುವೆ ನಿರ್ಮಿಸುವಲ್ಲಿ ಮತ್ತು ತ್ವರಿತ ಗತಿಯಲ್ಲಿ ಪರಿಹಾರ ಕಾರ್ಯಗಳನ್ನು  ಮಾಡುವಲ್ಲಿ ಸದಾ ಯಶಸ್ವಿಯಾಗಿದೆ.

click me!