ಸೆಪ್ಟೆಂಬರ್ 11 ರಂದು ನಡೆದ ದುಬೈ ಡ್ಯೂಟಿ ಫ್ರೀ ಮಿಲೇನಿಯಂ ಮಿಲಿಯನೇರ್ ಡ್ರಾದಲ್ಲಿ ಯುಎಇನಲ್ಲಿರುವ ಕೇರಳದ ಇಬ್ಬರು ಭಾರತೀಯ ವಲಸಿಗರು ತಲಾ 8 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾರೆ.
ದುಬೈ ಡ್ಯೂಟಿ ಫ್ರೀ (ಡಿಡಿಎಫ್) ಮಿಲೇನಿಯಂ ಮಿಲಿಯನೇರ್ ಡ್ರಾದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ಕೇರಳದ ಭಾರತೀಯ ವಲಸಿಗರ ಎರಡು ಗುಂಪುಗಳು ಸೆಪ್ಟೆಂಬರ್ 11, ಬುಧವಾರದಂದು ದಿಗ್ಭ್ರಮೆಗೊಳಿಸುವ 16 ಕೋಟಿ ರೂ ಬಹುಮಾನ ಗೆದ್ದಿದೆ. ಅಂದರೆ ಭಾರತೀಯ ರೂಪಾಯಿಗೆ ಹೋಲಿಸಿದರೆ ಒಬ್ಬನಿಗೆ 8 ಕೋಟಿ ರೂ (ರೂ. 8,39,79,150) ಸಿಕ್ಕಿದಂತಾಗಿದೆ.
ಬಹುಮಾನ ಗೆದ್ದ ಮೊದಲ ಗುಂಪಿನಲ್ಲಿ ಮಲಯಾಳಿ ಅಬ್ದುಲ್ ಅಜೀಜ್ ಹೆಸರಿನಲ್ಲಿ ಖರೀದಿಸಿದ ಚೀಟಿಗೆ ಬಹುಮಾನ ಲಭಿಸಿದೆ. 38 ವರ್ಷದ ಅಬ್ದುಲ್ ಅಜೀಜ್ ಅವರು ಆಗಸ್ಟ್ 31 ರಂದು ಖರೀದಿಸಿದ ಟಿಕೆಟ್ ಸಂಖ್ಯೆ 3361 ನೊಂದಿಗೆ ಮಿಲೇನಿಯಂ ಮಿಲಿಯನೇರ್ ಸರಣಿ 472 ರಲ್ಲಿ ವಿಜೇತರಾದರು. ತನ್ನ ಸಹೋದರ ಮತ್ತು ಸ್ನೇಹಿತರೊಂದಿಗೆ ಅಜೀಜ್ ಬಹುಮಾನ ವಿಜೇತ ಟಿಕೆಟ್ ಖರೀದಿಸಿದ್ದಾರೆ. ಅವರು ಮೂರನೇ ಬಾರಿಗೆ ಈ ಟಿಕೆಟ್ ಖರೀದಿಸುತ್ತಿದ್ದಾರೆ. ಈ ಹಿಂದೆ ಎರಡು ಬಾರಿ ಖರೀದಿಸಿದ್ದರು ಆದರೆ ಅದೃಷ್ಟ ಒಲಿದು ಬಂದಿರಲಿಲ್ಲ.
ಮಲೈಕಾ ತಂದೆ ಸೂಸೈಡ್ ಗೆ ಕಾರಣವೇನು? ತಾಯಿ ಹೇಳಿಕೆ ದಾಖಲು, ವಿಷ್ಯ ತಿಳಿದು ಬಂದ ಸಲ್ಮಾನ್ ಕುಟುಂಬ
ಅಬ್ದುಲ್ ಅಜೀಜ್ 12 ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದು, ಕಂಪನಿಯೊಂದರಲ್ಲಿ ಚಾಲಕ/ಮೆಸೆಂಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಲೈವ್ ಡ್ರಾ ಮಾಡುವಾಗ ತಮ್ಮ ಹೆಸರನ್ನು ಕರೆದಾಗ ತುಂಬಾ ಸಂತೋಷವಾಯಿತು. ಈ ಜೀವನವನ್ನು ಬದಲಾಯಿಸುವ ಅವಕಾಶವನ್ನು ನೀಡಿದ ದುಬೈ ಡ್ಯೂಟಿ ಫ್ರೀಗೆ ಧನ್ಯವಾದಗಳು ಎಂದಿದ್ದಾರೆ.
ಇನ್ನೊಂದು ಮಲಯಾಳಿ ಗುಂಪು ಕೂಡ 8 ಕೋಟಿ ರೂಪಾಯಿ ಬಹುಮಾನ ಪಡೆದಿದೆ. ಮಲಯಾಳಿ ನಾಸೀರ್ ಅರಿಕೋತ್ ಹೆಸರಿನಲ್ಲಿ ಟಿಕೆಟ್ ಖರೀದಿಸಲಾಗಿದೆ. 48 ವರ್ಷದ ನಾಸೀರ್ ಶಾರ್ಜಾದಲ್ಲಿ 13 ವರ್ಷದಿಂದ ವಾಸಿಸುತ್ತಿದ್ದಾರೆ. ಅವರು ಶಾರ್ಜಾದ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಬಹುಮಾನದ ವಿಚಾರ ತಿಳಿದ ನಜೀರ್ ದುಬೈ ಡ್ಯೂಟಿ ಫ್ರೀಗೆ ಧನ್ಯವಾದ ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ನನ್ನ ರೂಮ್ ಮೇಟ್, ಅರ್ಧರಾತ್ರಿ ರೋಡಲ್ಲಿ ಹೀಗೆ ಇದ್ವಿ ಬಿಗ್‌ಬಾಸ್ ಪ್ರೇರಣಾ ಬಿಚ್ಚಿಟ್ಟ ರಹಸ್ಯ!
ಅಜೀಜ್ ಮತ್ತು ಅರಿಕ್ಕೋತ್ ಅವರು 1999 ರಲ್ಲಿ ಮಿಲೇನಿಯಮ್ ಮಿಲಿಯನೇರ್ ಶೋ ಅನ್ನು ಪ್ರಾರಂಭಿಸಿದ ನಂತರ ಒಂದು ಮಿಲಿಯನ್ ಡಾಲರ್‌ಗಳನ್ನು ಗೆದ್ದ 235 ನೇ ಮತ್ತು 236 ನೇ ಭಾರತೀಯ ಪ್ರಜೆಗಳು. ಭಾರತೀಯ ಪ್ರಜೆಗಳು ಮಿಲೇನಿಯಮ್ ಮಿಲಿಯನೇರ್ ದುಬೈ ಡ್ಯೂಟಿ ಫ್ರೀ ಟಿಕೆಟ್‌ಗಳನ್ನು ಖರೀದಿಸುವವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಇನ್ನು ಯುಎಇಯ ಭಾರತೀಯ ಪ್ರಜೆ ಮೊಹಮ್ಮದ್ ನಜ್ಮುಲ್ ಹಸನ್ ಅವರು ಸೆಪ್ಟೆಂಬರ್ 4 ರಂದು ಆನ್‌ಲೈನ್‌ನಲ್ಲಿ ಖರೀದಿಸಿದ ಫೈನೆಸ್ಟ್ ಸರ್ಪ್ರೈಸ್ ಸೀರೀಸ್ 595 ರಲ್ಲಿ ಐಷಾರಾಮಿ ಮೋಟಾರ್‌ಬೈಕ್ ಗೆದ್ದಿದ್ದಾರೆ.