40 ವರ್ಷದ ಒಳಗೆ ಸಿಗರೇಟ್‌ ಬಿಟ್ಟವರು, ಸ್ಮೋಕ್‌ ಮಾಡದವರಿಗಿಂತ ಹೆಚ್ಚು ಕಾಲ ಬದುಕ್ತಾರೆ ಎಂದ ವರದಿ!

Published : Feb 10, 2024, 07:43 PM IST
40 ವರ್ಷದ ಒಳಗೆ ಸಿಗರೇಟ್‌ ಬಿಟ್ಟವರು, ಸ್ಮೋಕ್‌ ಮಾಡದವರಿಗಿಂತ ಹೆಚ್ಚು ಕಾಲ ಬದುಕ್ತಾರೆ ಎಂದ ವರದಿ!

ಸಾರಾಂಶ

ಯಾವುದೇ ವಯಸ್ಸಿನಲ್ಲಿ ಧೂಮಪಾನ ತ್ಯಜಿಸುವುದು ಸಾವಿನ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ವರದಿ ಹೇಳಿದೆ.   

ಬೆಂಗಳೂರು (ಫೆ.10): 40 ವರ್ಷಕ್ಕಿಂತ ಮೊದಲು ಧೂಮಪಾನವನ್ನು ತ್ಯಜಿಸಿದ ವ್ಯಕ್ತಿಗಳು ಎಂದಿಗೂ ಧೂಮಪಾನ ಮಾಡದೇ ಇದ್ದವರಿಗಿಂತ ಹೆಚ್ಚು ಕಾಲ ಬದುಕುವ ಸಾಧ್ಯತೆಗಳಿದೆ ಎಂದು ಇತ್ತೀಚಿನ ವರದಿಯು ತಿಳಿಸಿದೆ. ಧೂಮಪಾನ ತ್ಯಜಿಸುವುದರಿಂದ ದೊಡ್ಡ ಮಟ್ಟದ ಆರೋಗ್ಯ ಪ್ರಯೋಜನಗಳು ಉಂಟಾಗುತ್ತದೆ ಎಂದು ತಿಳಿಸಲಾಗಿದೆ.  ಎನ್‌ಇಜೆಎಂ ಎವಿಡೆನ್ಸ್ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನವು ಯಾವುದೇ ವಯಸ್ಸಿನಲ್ಲಿ ಧೂಮಪಾನವನ್ನು ತ್ಯಜಿಸಿದ ವ್ಯಕ್ತಿಗಳು ಧೂಮಪಾನವನ್ನು ತ್ಯಜಿಸಿದ 10 ವರ್ಷಗಳೊಳಗೆ ಎಂದಿಗೂ ಧೂಮಪಾನ ಮಾಡದವರ ಜೀವಿತಾವಧಿಯ ಪ್ರಮಾಣವನ್ನು ಸಮೀಪಿಸಲು ಪ್ರಾರಂಭಿಸುತ್ತಾರೆ, ಕೇವಲ ಮೂರು ವರ್ಷಗಳಲ್ಲಿ ಅರ್ಧದಷ್ಟು ಪ್ರಯೋಜನವನ್ನು ಅರಿತುಕೊಳ್ಳುತ್ತಾರೆ ಎಂದು ಹೇಳಿದೆ. ಟೊರೊಂಟೊ ವಿಶ್ವವಿದ್ಯಾನಿಲಯದ ಡಲ್ಲಾ ಲಾನಾ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಪ್ರೊಫೆಸರ್ ಪ್ರಭಾತ್ ಝಾ ಅವರು ಸಂಶೋಧನೆಗಳ ಕುರಿತು ಪ್ರತಿಕ್ರಿಯಿಸಿದ್ದಾರೆ, "ಧೂಮಪಾನ ತ್ಯಜಿಸುವುದರಿಂದ ಸಾವಿನ ಅಪಾಯ ಕಡಿಮೆ ಮಾಡಬಹುದು. ಜನರು ಇದರ ಪ್ರತಿಫಲವನ್ನು ತ್ವರಿತವಾಗಿ ಪಡೆಯಬಹುದು' ಎಂದು ಹೇಳಿದ್ದಾರೆ.

ಅಮೆರಿಕ, ಇಂಗ್ಲೆಂಡ್‌, ಕೆನಡಾ ಹಾಗೂ ನಾರ್ವೆ ದೇಶಗಳ 1.5 ಮಿಲಿಯನ್‌ ವಯಸ್ಕರರನ್ನು ಬಳಸಿಕೊಂಡು ಈ ಅಧ್ಯಯನ ಮಾಡಲಾಗಿದೆ. ಇವರನ್ನು ಅಂದಾಜು 15 ವರ್ಷಗಳ ಅವಧಿಯಲ್ಲಿ ಟ್ರ್ಯಾಕ್‌ ಮಾಡಲಾಗಿದೆ.  ಧೂಮಪಾನಿಗಳಲ್ಲದವರಿಗೆ ಹೋಲಿಸಿದರೆ 40 ರಿಂದ 79 ವರ್ಷ ವಯಸ್ಸಿನ ಧೂಮಪಾನಿಗಳು ಸಾಯುವ ಅಪಾಯವನ್ನು ಸುಮಾರು ಮೂರು ಪಟ್ಟು ಹೆಚ್ಚು ಹೊಂದಿರುತ್ತಾರೆ ಎಂದು ಕಂಡುಬಂದಿದೆ, ಇದರ ಪರಿಣಾಮವಾಗಿ ಸರಾಸರಿ 12 ರಿಂದ 13 ವರ್ಷಗಳ ಜೀವಿತಾವಧಿಯು ನಷ್ಟವಾಗುತ್ತದೆ.

ಆದರೆ, ಮಾಜಿ ಧೂಮಪಾನಿಗಳು, ತಮ್ಮ ಸಾವಿನ ಅಪಾಯವನ್ನು ಧೂಮಪಾನಿಗಳಲ್ಲದವರಿಗಿಂತ ಕೇವಲ 1.3 ಪಟ್ಟು ಹೆಚ್ಚು ಕಡಿಮೆಗೊಳಿಸಿಕೊಂಡಿದ್ದಾರೆ. ಇದು ಜೀವಿತಾವಧಿಯಲ್ಲಿ ಗಣನೀಯ ಸುಧಾರಣೆಯನ್ನು ಸೂಚಿಸುತ್ತದೆ. ಮೂರು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಧೂಮಪಾನವನ್ನು ತ್ಯಜಿಸಿದ ವ್ಯಕ್ತಿಗಳು ಸಹ ಜೀವಿತಾವಧಿಯಲ್ಲಿ ಆರು ವರ್ಷಗಳವರೆಗೆ ಹೆಚ್ಚಳವನ್ನು ಕಾಣುತ್ತಾರೆ. ನಾಳಗಳ ಕಾಯಿಲೆ ಮತ್ತು ಕ್ಯಾನ್ಸರ್‌ನಿಂದ ಸಾವಿನ ಅಪಾಯವನ್ನು ಕಡಿಮೆ ಮಾಡುವಲ್ಲಿ ಧೂಮಪಾನ ನಿಲ್ಲಿಸುವುದು ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಹೇಳಿದೆ.  ಶ್ವಾಸಕೋಶದ ಹಾನಿಯಿಂದಾಗಿ ಉಂಟಾಗುವ ಉಸಿರಾಟದ ಕಾಯಿಲೆಗೆ ಸ್ವಲ್ಪ ಕಡಿಮೆ ಪರಿಣಾಮ ಕಂಡಿದೆ.

ಡಾ ರಾಜ್‌ ಮಗನಾಗಿ ನೀವ್ಯಾಕೆ 'ಸ್ಮೋಕಿಂಗ್-ಡ್ರಿಂಕಿಂಗ್' ದೃಶ್ಯಗಳಲ್ಲಿ ನಟಿಸ್ತೀರಾ; ಸ್ಪಷ್ಟ ಉತ್ತರ ಕೊಟ್ರು ನಟ ಶಿವಣ್ಣ!

ಧೂಮಪಾನವನ್ನು ತ್ಯಜಿಸಲು ತುಂಬಾ ತಡವಾಗಿದೆ ಎನ್ನುವ ತಪ್ಪು ಕಲ್ಪನೆ  ಬಗ್ಗೆಯೂ ಝಾ ಮಾತನಾಡಿದ್ದಾರೆ. ವಿಶೇಷವಾಗಿ ಮಧ್ಯವಯಸ್ಸಿನಲ್ಲಿ, ಅಧ್ಯಯನದ ಸಂಶೋಧನೆಗಳು ಈ ನಂಬಿಕೆಗೆ ಸವಾಲು ಹಾಕುತ್ತವೆ. "ಇದು ಎಂದಿಗೂ ತಡವಾಗಿಲ್ಲ, ಪರಿಣಾಮವು ವೇಗವಾಗಿರುತ್ತದೆ ಮತ್ತು ನೀವು ಪ್ರಮುಖ ಕಾಯಿಲೆಗಳಲ್ಲಿ ಅಪಾಯವನ್ನು ಕಡಿಮೆ ಮಾಡಬಹುದು, ಅಂದರೆ ದೀರ್ಘ ಮತ್ತು ಉತ್ತಮ ಗುಣಮಟ್ಟದ ಜೀವನ ಸಿಗಲಿದೆ' ಎಂದಿದ್ದಾರೆ.

ಸಿಗರೇಟು ಸೇದುವ ಸೀತಾ ದೇವಿ, ದೇವರ ಅವಹೇಳನ ನಾಟಕ ಪ್ರದರ್ಶಿಸಿದ 5 ವಿದ್ಯಾರ್ಥಿಗಳು,ಪ್ರೊಫೆಸರ್ ಅರೆಸ್ಟ್ !

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live:ಇಂಡಿಗೋ ಏರ್‌ಲೈನ್ಸ್ ಸಮಸ್ಯೆ ತನಿಖೆಗೆ 4 ಸದಸ್ಯರ ತಂಡ ರಚಿಸಿದ ಕೇಂದ್ರ ಸರ್ಕಾರ
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌