ಜೈಶ್-ಎ-ಮುಹಮ್ಮದ್ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಪುಲ್ವಾಮಾ ದಾಳಿ ಸೇರಿದಂತೆ ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಅಜರ್, ಚಿಕಿತ್ಸೆಗಾಗಿ ಪಾಕಿಸ್ತಾನಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎನ್ನಲಾಗಿದೆ.
ನವದೆಹಲಿ (ಡಿ.26): ಜೈಶ್-ಎ-ಮುಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ನ್ಯೂಸ್ 18 ಉತ್ತರ ಪ್ರದೇಶ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ವರದಿಯ ಪ್ರಕಾರ, ಭಾರತದಲ್ಲಿ ನಡೆದ ಮಾರಣಾಂತಿಕ ಪುಲ್ವಾಮಾ ದಾಳಿಯ ಹಿಂದೆ ಮಸೂದ್ ಅಜರ್‌ನ ಜೆಇಎಂ ಸಂಘಟನೆಯ ಕೈವಾಡವಿತ್ತು. ಮಸೂದ್ ಅಜರ್‌ಗೆ ಹೃದಯಾಘಾತವಾದಾಗ ಅವರು ಅಫ್ಘಾನಿಸ್ತಾನದಲ್ಲಿದ್ದರು, ಅವರನ್ನು ಚಿಕಿತ್ಸೆಗಾಗಿ ಪಾಕಿಸ್ತಾನದ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
1999 ರಲ್ಲಿ IC-814 ವಿಮಾನ ಅಥವಾ ಕಂದಾಹಾರ್ ವಿಮಾನ ಹೈಜಾಕ್ ನಂತರ ಭಾರತವು ಮಸೂದ್ ಅಜರ್‌ನನ್ನು ಬಿಡುಗಡೆ ಮಾಡುವ ಅನಿವಾರ್ಯತೆಗೆ ಸಿಲುಕಿತ್ತು. 2001ರಲ್ಲಿ ಭಾರತದ ಸಂಸತ್ತಿನ ಮೇಲೆ ನಡೆದ ಉಗ್ರರ ದಾಳಿಯ ಮಾಸ್ಟರ್ ಮೈಂಡ್ ಅಜರ್. ಅವರು 2016 ರಲ್ಲಿ ಪಠಾಣ್‌ಕೋಟ್ ದಾಳಿ, 2019 ರಲ್ಲಿ ಪುಲ್ವಾಮಾ ದಾಳಿ ಮತ್ತು ಭಾರತದಲ್ಲಿನ ವಿವಿಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ ಕಾರಣಕ್ಕಾಗಿ ಭಾರತದ ಮೋಸ್ಟ್ ವಾಂಟೆಂಡ್ ಉಗ್ರರ ಪೈಕಿ ಒಬ್ಬನಾಗಿದ್ದಾನೆ.
undefined
ಸ್ಯಾಮ್ ಕಾನ್ಸ್‌ಟಾಸ್ ಜೊತೆ ಕಿರಿಕ್, ಕೊಹ್ಲಿಗೆ ಭಾರೀ ದಂಡ ವಿಧಿಸಿದ ಐಸಿಸಿ!
ಸೆಪ್ಟೆಂಬರ್ 2019 ರಲ್ಲಿ, ಭಾರತವು ಅಜರ್ ಮತ್ತು ಪಾಕಿಸ್ತಾನ ಮೂಲದ ಇನ್ನೊಬ್ಬ ಭಯೋತ್ಪಾದಕ, ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಹಫೀಜ್ ಮುಹಮ್ಮದ್ ಸಯೀದ್ ಅವರನ್ನು ಕಠಿಣ ಭಯೋತ್ಪಾದನಾ-ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ 'ವೈಯಕ್ತಿಕ ಭಯೋತ್ಪಾದಕರು' ಎಂದು ಬ್ರಾಂಡ್ ಮಾಡಿತು.
Explainer: ಕೆನ್- ಬೆಟ್ವಾ ನದಿ ಜೋಡಣೆ, 44 ಸಾವಿರ ಕೋಟಿಯ ಪ್ರಾಜೆಕ್ಟ್ ಜೊತೆ ಹಸಿರಾಗಲಿದೆ ಭಾರತ!