ಕೊರೋನಾದಿಂದ ಜಾಗತಿಕ ಆರ್ಥಿಕತೆಗೆ 60 ಲಕ್ಷ ಕೋಟಿ ನಷ್ಟ

By Kannadaprabha NewsFirst Published Feb 21, 2020, 11:18 AM IST
Highlights

ಪ್ರಸಕ್ತ ಚೀನಾ ಸೇರಿದಂತೆ ವಿಶ್ವದ ಹಲವಾರು ದೇಶಗಳಲ್ಲಿ ಭೀತಿ ಹುಟ್ಟುಹಾಕಿರುವ ಕೊರೋನಾ ವೈರಸ್‌ ಹಾವಳಿ, ಜೂನ್‌ ಬಳಿಕವೂ ಹೀಗೆಯೇ ಮುಂದುವರೆದರೆ ಅದು ಜಾಗತಿಕ ಜಿಡಿಪಿ ಪ್ರಗತಿ ದರವನ್ನು ಶೇ.1 ರಷ್ಟು ಕುಸಿಯುವಂತೆ ಮಾಡಲಿದೆ ಎಂದು ವರದಿಯೊಂದು ಹೇಳಿದೆ.

ನವದೆಹಲಿ (ಫೆ. 21): ಪ್ರಸಕ್ತ ಚೀನಾ ಸೇರಿದಂತೆ ವಿಶ್ವದ ಹಲವಾರು ದೇಶಗಳಲ್ಲಿ ಭೀತಿ ಹುಟ್ಟುಹಾಕಿರುವ ಕೊರೋನಾ ವೈರಸ್‌ ಹಾವಳಿ, ಜೂನ್‌ ಬಳಿಕವೂ ಹೀಗೆಯೇ ಮುಂದುವರೆದರೆ ಅದು ಜಾಗತಿಕ ಜಿಡಿಪಿ ಪ್ರಗತಿ ದರವನ್ನು ಶೇ.1 ರಷ್ಟುಕುಸಿಯುವಂತೆ ಮಾಡಲಿದೆ ಎಂದು ವರದಿಯೊಂದು ಹೇಳಿದೆ.

ಡನ್‌ ಆ್ಯಂಡ್‌ ಬ್ರಾಡ್‌ಶೀಟ್‌ ಗುರುವಾರ ಬಿಡುಗಡೆ ಮಾಡಿರುವ ವರದಿ ಅನ್ವಯ, ಚೀನಾದ ಶೇ.90 ರಷ್ಟುಉದ್ಯಮ ವಹಿವಾಟು, ಕೊರೋನಾ ಪೀಡಿತ ಪ್ರದೇಶಗಳಲ್ಲಲಿದೆ. ಹೀಗಾಗಿ ಅಲ್ಲಿ ಚಟುವಟಿಕೆ ಸ್ಥಗಿತಗೊಂಡಿರುವುದು ಈಗಾಗಲೇ ಚೀನಾದ ಆರ್ಥಿಕತೆಗೆ ಭಾರೀ ಹೊಡೆತ ನೀಡಿದೆ.

ಜಗತ್ತಿಗೆ ಕೊರೊನಾ ಭಯ, ಬೆಂಗಳೂರಿಗೆ H1N1 ಆತಂಕ!

ಅದರ ಪರಿಣಾಮಗಳು ನಿದಾನವಾಗಿ ವಿಶ್ವದ ಇತರೆ ದೇಶಗಳ ಮೇಲೂ ಪರಿಣಾಮ ಬೀರಲು ಆರಂಭಿಸಿದೆ. ಮುಂದಿನ ಜೂನ್‌ ಬಳಿಕವೂ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಅದು ಜಾಗತಿಕ ಜಿಡಿಪಿ ಪ್ರಗತಿ ದರವನ್ನು ಶೇ.1ರಷ್ಟುಕುಸಿಯುವಂತೆ ಮಾಡಲಿದೆ ಎಂದು ಹೇಳಿದೆ. ಅಂದರೆ ಜಾಗತಿಕ ಆರ್ಥಿಕತೆ ಮೇಲೆ ಅಂದಾಜು 60 ಲಕ್ಷ ಕೋಟಿ ರು. ಹೊಡೆತ ನೀಡಲಿದೆ.

click me!